More

    ಗೃಹ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಾಸಕಿ!

    ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮೊನ್ನೆ ವಿದ್ಯಾರ್ಥಿನಿಯ ಮೇಲೆ ನಡೆದ ಗ್ಯಾಂಗ್​ ರೇಪ್​​​, ಸಾಂಸ್ಕೃತಿಕ ನಗರಿಯ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆ ಎತ್ತಿದೆ. ಹೀಗಿರುವಾಗ, ಸಂತ್ರಸ್ತ ಯುವತಿ ಅಷ್ಟೊತ್ತಿನಲ್ಲಿ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು ಎಂಬ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆ ಹಲವರಲ್ಲಿ ಅಸಮಾಧಾನ ಮೂಡಿಸಿದೆ.

    ಈ ಬಗ್ಗೆ ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್​ ಅವರು, ಜ್ಞಾನೇಂದ್ರ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಗೃಹ ಸಚಿವರ ಹೇಳಿಕೆಯನ್ನು ನೆಗೆಟಿವ್ ಆಗಿ ನೋಡಬಾರದು. ರಾತ್ರಿ 12 ರ ಸಮಯದಲ್ಲಿ ಮಹಿಳೆಯರು ಓಡಾಡುವಂಥ ಪರಿಸ್ಥಿತಿ ನಿರ್ಮಾಣ ಆಗಬೇಕು. ಆದರೆ ಯಾರೂ ಓಡಾಡದ ಪ್ರದೇಶದಲ್ಲಿ ಹೋಗಬೇಕಾದಾಗ ಸೇಫ್ಟಿ ಬಗ್ಗೆ ಜಾಗೃತಿ ವಹಿಸಬೇಕು” ಎಂದಿದ್ದಾರೆ.

    ಇದನ್ನೂ ಓದಿ: ಮೈಸೂರು ಗ್ಯಾಂಗ್​ರೇಪ್​ ಕೇಸ್​: ಗಂಡಸರು…ಗಂಡಸರಲ್ಲವೇ ಎಂದು ನಟಿ ರಮ್ಯಾ ವ್ಯಂಗ್ಯ..!

    ಜೊತೆಗೇ, “ಹೆಣ್ಣು ಮಕ್ಕಳನ್ನು ಓಡಾಡಬೇಡಿ ಎನ್ನುವುದು ಸರಿಯಲ್ಲ” ಎಂದಿರುವ ಶಾಸಕಿ ಪೂರ್ಣಿಮಾ, ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಮತ್ತಷ್ಟು ಕಠಿಣ ಕ್ರಮ ರೂಪಿಸಬೇಕು. ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ತಪ್ಪು ಮಾಡಿದವರು ಬುದ್ದಿವಂತಿಕೆಯಿಂದ ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಅವರನ್ನು ಬಂಧಿಸುತ್ತಾರೆ ಎಂದಿದ್ದಾರೆ.

    ಹಾರ್ನ್​ ಮಾಡಿದರೂ ದಾರಿ ಬಿಡಲಿಲ್ಲ ಎಂದು ಗುಂಡು ಹಾರಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts