More

    ಮೈಸೂರು ಹಾಲು ಒಕ್ಕೂಟದ ಚುನಾವಣೆ: ಎಚ್​ಡಿ ಕುಮಾರಸ್ವಾಮಿಗೆ ಮುಖಭಂಗ

    ಮೈಸೂರು: ಜೆಡಿಎಸ್ ದಳಪತಿಗಳ ನಡುವೆಯೇ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ (ಮೈಮುಲ್) ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಮಂಗಳವಾರ ಮತದಾನ ನಡೆಯಿತು.

    ಆಲನಹಳ್ಳಿಯ ಕೆಎಂಎಫ್ ತರಬೇತಿ ಕೇಂದ್ರದ ಆವರಣದಲ್ಲಿ ಬೆಳಗ್ಗೆ 9ರಿಂದ 4 ಗಂಟೆಯವರೆಗೆ ಮತದಾನ ನಡೆಯಿತು. ಸಂಜೆ 4.30ರಿಂದ ಮತ ಎಣಿಕೆ ಕಾರ್ಯ ಆರಂಭವಾಗಿ ಫಲಿತಾಂಶ ಪ್ರಕಟಗೊಂಡಿದೆ.

    ಜೆಡಿಎಸ್ ಒಂದು ಸ್ಥಾನಕ್ಕೆ ಸೀಮಿತ ಸಾಧನೆ ಮಾಡಿದರೆ, ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮೂರು ಸ್ಥಾನಗಳಿಗೆ ಸೀಮಿತವಾಯಿತು. ಗೆದ್ದ ಇಬ್ಬರು ಕಾಂಗ್ರೆಸ್ ಬೆಂಬಲಿತರು, ಒಬ್ಬರು ಮಾತ್ರ ಜೆಡಿಎಸ್ ಅಭ್ಯರ್ಥಿಗಳು. ಉಳಿದ 12 ಸ್ಥಾನಗಳನ್ನು ಶಾಸಕ ಜಿಟಿ ದೇವೇಗೌಡ ಬೆಂಬಲಿಗರಾಗಿದ್ದಾರೆ.

    ಮೈಸೂರು ಹಾಲು ಒಕ್ಕೂಟದ ಚುನಾವಣೆ: ಎಚ್​ಡಿ ಕುಮಾರಸ್ವಾಮಿಗೆ ಮುಖಭಂಗ

    ಇದನ್ನೂ ಓದಿ: ಬ್ಯಾಂಕ್ ಮುಷ್ಕರ; ಕೇಂದ್ರ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ

    ಒಟ್ಟಾರೆ ಚುನಾವಣೆಯಲ್ಲಿ ಜಿಟಿಡಿ ಬಣಕ್ಕೆ ಮೇಲುಗೈಯಾಗಿದ್ದು, ಶಾಸಕ ಜಿ.ಟಿ.ದೇವೇಗೌಡ ಬಣ ಮೈಮುಲ್ ಗದ್ದುಗೆ ಏರಿದೆ. ಹುಣಸೂರು ಉಪವಿಭಾಗದಲ್ಲಿ ಎಂಟಕ್ಕೆ ಎಂಟೂ ಸ್ಥಾನಗಳನ್ನು ಶಾಸಕ ಜಿ.ಟಿ.ದೇವೇಗೌಡ ಬಣ ಗೆದ್ದಿದೆ. ಮೈಸೂರು ವಿಭಾಗದಲ್ಲಿ ಜಿಟಿಡಿ ತಂಡಕ್ಕೆ 4 ಸ್ಥಾನ ಲಭಿಸಿವೆ. ಖುದ್ದು ಎಚ್.ಡಿ.ಕೆ. ಪ್ರಚಾರ ಮಾಡಿದರೂ ಜೆಡಿಎಸ್‌ಗೆ ಗೆಲುವಿನ ಖುಷಿ ಲಭಿಸಲಿಲ್ಲ. ಸ್ವಪಕ್ಷದ ವಿರುದ್ಧವೇ ಶಾಸಕ ಜಿಟಿಡಿ ಗೆದ್ದಂತಾಗಿದೆ.

    ಮೈಸೂರು ಹಾಲು ಒಕ್ಕೂಟದ ಚುನಾವಣೆ: ಎಚ್​ಡಿ ಕುಮಾರಸ್ವಾಮಿಗೆ ಮುಖಭಂಗ

    ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾದ ಬಳಿಕ ನಿರ್ದೇಶಕ ಸ್ಥಾನಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಬೈಲಾ ತಿದ್ದುಪಡಿ ಮಾಡಿ ಆರು ಸ್ಥಾನಗಳನ್ನು ಹೆಚ್ಚಿಸಲಾಗಿದೆ. ಹೊಸದಾಗಿ ಮೈಸೂರು ಉಪ ವಿಭಾಗದಿಂದ 7 ಮತ್ತು ಹುಣಸೂರು ಉಪ ವಿಭಾಗಕ್ಕೆ 8 ಸ್ಥಾನಗಳು ಸೇರಿದಂತೆ ಒಟ್ಟು 15 ನಿರ್ದೇಶಕರ ಸ್ಥಾನಗಳಿವೆ. ಈ ಪೈಕಿ ಮಹಿಳೆಯರಿಗೆ ನಾಲ್ಕು ಸ್ಥಾನಗಳನ್ನು ಮೀಸಲಿರಿಸಲಾಗಿತ್ತು. ಎರಡೂ ವಿಭಾಗಗಳಿಂದ ಚುನಾವಣಾ ಕಣದಲ್ಲಿ ಒಟ್ಟು 29 ಸ್ಪರ್ಧಿಗಳಿದ್ದರು. 1047 ಮತದಾರರಿದ್ದರು.

    ಸಿಡಿಯಲ್ಲಿರುವ ಹುಡುಗಿಗೆ ಈಗಾಗಲೇ ರಕ್ಷಣೆ ಸಿಕ್ಕಿದೆ: ಯಾರಿಂದ ಎಂಬುದನ್ನು ಎಚ್​ಡಿಕೆ ಹೇಳಿದ್ರು ನೋಡಿ..

    ಜೆಡಿಎಸ್​​ ಜೊತೆ ಇನ್ನಾವತ್ತು ಮೈತ್ರಿ ಇಲ್ಲ ಎಂದ ಸಿದ್ದರಾಮಯ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts