More

    ತಿರುಮಕೂಡಲಿನಲ್ಲಿ ಶಂಕರ ಜಯಂತಿ ಉತ್ಸವ

    ತಿ.ನರಸೀಪುರ: ತಿರುಮಕೂಡಲಿನ ಶೃಂಗೇರಿ ಶಂಕರ ಮಠದಲ್ಲಿ ಭಾನುವಾರ ಶಂಕರ ಜಯಂತಿ ಮಹೋತ್ಸವ ಜರುಗಿತು.


    ಶ್ರೀ ಶಾರದಾ ಪರಮೇಶ್ವರಿ, ಶ್ರೀ ಆದಿಶಂಕರಾಚಾರ್ಯರಿಗೆ ಹಾಗೂ ಶ್ರೀ ದ್ವಿತೀಯ ಚಂದ್ರಶೇಖರ ಭಾರತಿ ಅವರ ಅಧಿಷ್ಠಾನಕ್ಕೆ ಫಲ, ಪಂಚಾಮೃತ ಅಭಿಷೇಕ, ಏಕವಾರ ರುದ್ರಾಭಿಷೇಕವನ್ನು ನೆರವೇರಿಸಲಾಯಿತು. ಪುಷ್ಪಾಲಂಕಾರದೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

    ತಿರುಮಕೂಡಲಿನಲ್ಲಿ ಶಂಕರ ಜಯಂತಿ ಉತ್ಸವ


    ಶ್ರೀ ಶಂಕರ ಸೇವಾ ಸಮಿತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು. ತಿ.ನರಸೀಪುರದ ಬ್ರಾಹ್ಮಣ ಸಂಘದ ಮಹಿಳಾ ಮಂಡಳಿ ಸದಸ್ಯರು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಶಾಂಕರ ಸ್ತೋತ್ರಗಳ ಪಾರಾಯಣ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts