More

    ಆಡಂಬರದಿಂದ ಗಣೇಶನ ಆಚರಣೆಗಿಲ್ಲ ಕಿಮ್ಮತ್ತು

    ಚಳ್ಳಕೆರೆ: ಆಡಂಬರ ಮತ್ತು ದುಂದು ವೆಚ್ಚದಲ್ಲಿ ಗಣೇಶನ ಆಚರಣೆ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ವಿಷಾದ ವ್ಯಕ್ತಪಡಿಸಿದರು.

    ಗಾಂಧಿನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಗಣಪತಿ ವಿಸರ್ಜನಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆಚರಣೆಗಳಲ್ಲಿ ಬಹುಮುಖ್ಯವಾಗಿ ವಿಚಾರ ವಿನಿಮಯ, ಮೌಲ್ಯಾಧಾರಿತ ಸಂದೇಶಗಳು ಸಮಾಜಕ್ಕೆ ತಲುಪಬೇಕು.

    ಉತ್ಸವಗಳು ಸಮಾಜವನ್ನು ಜಾಗೃತಿಗೊಳಿಸುವ ಆಧಾರವಾಗಬೇಕು ಎಂದು ಹೇಳಿದರು.
    36 ಸಾವಿರಕ್ಕೆ ಲಾಡು ಪ್ರಸಾದ ಹರಾಜು: ಗಣಪತಿ ಪೂಜಾ ಕಾರ್ಯಕ್ಕೆ ಇರಿಸಲಾಗಿದ್ದ ಸಿಹಿ ಪದಾರ್ಥ ಮತ್ತು ಹೂವಿನ ಹಾರಗಳ ಹರಾಜಿನಲ್ಲಿ ಬೆಂಗಳೂರಿನ ವಸಂತಕುಮಾರ್ 36 ಸಾವಿರಕ್ಕೆ ಲಾಡು,

    ಗುತ್ತಿಗೆದಾರ ಸುನಿಲ್ 43 ಸಾವಿರಕ್ಕೆ ಹೂವಿನ ಹಾರ, ಬಿ.ಸಿ.ಮಾರುತಿ 33 ಸಾವಿರಕ್ಕೆ 2ನೇ ಹೂವಿನ ಹಾರ, ಬಾಲಾಜಿ ಇಂಡಸ್ಟ್ರೀ ಹಳೇಟೌನ್ ಮುರುಳಿ 32 ಸಾವಿರಕ್ಕೆ 3ನೇ ಹೂವಿನ ಹಾರ,

    ಎಪಿಎಂಸಿ ಧರ್ಮೇಂದ್ರ 30 ಸಾವಿರಕ್ಕೆ 4ನೇ ಹೂವಿನ ಹಾರ, ಬಾಲಾಜಿ ಟ್ರೇಡರ್ಸ್‌ನ ತಿರುಮಲೇಶ್ 30 ಸಾವಿರಕ್ಕೆ 5ನೇ ಹೂವಿನ ಹಾರವನ್ನು ಹರಾಜಿನಲ್ಲಿ ಪಡೆದರು.

    ಗಣಪತಿ ವಿಸರ್ಜನಾ ಮೆರವಣಿಗೆ ನಗರದ ಪ್ರವಾಸಿ ಮಂದಿರದ ಮಾರ್ಗವಾಗಿ ವಾಲ್ಮೀಕಿ, ಅಂಬೇಡ್ಕರ್, ನೆಹರು ವೃತ್ತದಲ್ಲಿ ಮಹಿಳಾ ಕೋಲಾಟ ಮತ್ತು ವಿವಿಧ ಕಲಾತಂಡಗಳೊಂದಿಗೆ ಸಾಗಿತು.

    ನಗರಸಭಾ ಸದಸ್ಯ ಹೊಯ್ಸಳ ಗೋವಿಂದ, ಗಗನ್, ರಘು, ಇಮ್ರಾನ್, ಸ್ವಾಮಿ ವೀರೇಶ್, ಧರ್ಮೇಶ್, ಮೋಹನ್, ರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts