More

    ಆ್ಯಕ್ಷನ್​ಗೆ ರಿಯಾಕ್ಷನ್​ ಬೇಡ:ಶಾಸಕ ಅರವಿಂದ್​ ಬೆಲ್ಲದ

    ಧಾರವಾಡ: ನುಗ್ಗಿಕೇರಿ ಧರ್ಮ ವ್ಯಾಪಾರ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಆ್ಯಕ್ಷನ್​ಗೆ ರಿಯಾಕ್ಷನ್​ ಮಾಡುವುದು ಬೇಡ ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯಿಸಿದ್ದಾರೆ.

    ಧರ್ಮದ ವಿಚಾರದಲ್ಲಿ ಈ ಘಟನೆ ನಡೆಯಬಾರದಿತ್ತು, ಆದರೆ ಇದು ಯಾಕೆ ಆಗುತ್ತಿದೆ ಎಂಬುದರ ಬಗ್ಗೆಯೂ ವಿಚಾರ ಮಾಡಬೇಕಿದೆ. ಘಟನೆಗಳಿಗೆ ಕಾರಣವಾದ ಆಗುಹೋಗುಗಳ ಬಗ್ಗೆಯೂ ವಿಮರ್ಶಿಸಬೇಕಿದೆ ಎಂದರು.

    ಶಾಲೆಯಲ್ಲಿ ಸಮವಸ್ತ್ರ ಪಾಲನೆಯಾಗಬೇಕೆಂದು ಕೋರ್ಟಿನ ತೀರ್ಪನ್ನು ಪಾಲಿಸದೇ ಮುಸ್ಲಿಂ ಸಂಘಟನೆಗಳು ಬಂದ್ ಮಾಡಿದ್ದವೂ, ಆದರೆ ಅವರಿಗೆ ಕಾನೂನು ಮೇಲೆ ಗೌರವ ಹಾಗೂ ಕಾಳಜಿ ಇಲ್ಲವೆಂಬುದು ತಿಳಿಯಿತು. ತಲೆ ಒಡೆದಾಗ ಇಲ್ಲದ ಕಾಳಜಿ ಕಲ್ಲಂಗಡಿ ಒಡೆದಾಗ ಬಂದಿದೆ ಎಂಬ ಸಿ.ಟಿ. ರವಿ ಅವರ ಹೇಳಿಕೆ ಸರಿ ಇದೆ ಎಂದು ಹೇಳಿದರು.

    ಮುಸ್ಲಿಂ ಸಮಾಜ ಮೊದಲು ವಿಚಾರ ಮಾಡಬೇಕಿದೆ. ಇಲ್ಲದೇ ಹೋದಲ್ಲಿ ಆ್ಯಕ್ಷನ್​ಗೆ ರಿಯಾಕ್ಷನ್​ ಆಗುತ್ತಲೇ ಹೋಗುತ್ತದೆ. ನುಗ್ಗೆಕೇರಿ ದೇವಸ್ಥಾನದ ಮುಂದೆ ಅಂಗಡಿ ಯಾರು ಇಡಬೇಕೆಂಬುದು ದೇವಾಲಯದ ಆಡಳಿತ ಮಂಡಳಿಗೆ ಬಿಟ್ಟ ವಿಚಾರವಾಗಿದೆ. ಇದು ಹಿಂದೂ ದೇವಾಲಯ ಮುಸ್ಲಿಂ ವ್ಯಾಪಾರಿ ಇದ್ದರೂ ಯಾವ ವೇಷದಲ್ಲಿರಬೇಕು. ಇದು ಹಿಂದೂ ಭಕ್ತರಿಗೂ ಕಷ್ಟವಾಗಬಹುದು. ಹಾಗೆಂದ ಮಾತ್ರಕ್ಕೆ ಗಲಾಟೆಗೆ ಸಮರ್ಥನೆ ಮಾಡುತ್ತಿಲ್ಲ. ಸಮಾಜವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದರು.

    ಕೇಬಲ್ ಕಾರ್​​ ಡಿಕ್ಕಿಯಾಗಿ ಇಬ್ಬರು ಸಾವು: ಹೆಲಿಕಾಪ್ಟರ್​ನಿಂದ ರಕ್ಷಣಾ ಕಾರ್ಯಾಚರಣೆ

    ಆಸ್ಟ್ರೇಲಿಯಾ ಬೀಚ್​ನಲ್ಲಿ ಕಾಣಿಸಿತು ವಿಚಿತ್ರ ಜೀವಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts