More

    ತುಂಡು ಭೂಮಿಯಲ್ಲೇ ಸಮಗ್ರ ಬೇಸಾಯ; ವಾರ್ಷಿಕ 5 ಲಕ್ಷ ರೂ. ಆದಾಯ | ಕೃಷಿಯಲ್ಲೇ ಖುಷಿ ಕಂಡ ಮದ್ದೂರು ರೈತ

    ಬೆಂಗಳೂರು: ಕೃಷಿಯಿಂದ ವಾರ್ಷಿಕ ಆದಾಯ ಮಾತ್ರವಲ್ಲ, ಅರೆ ವಾರ್ಷಿಕ ಲಾಭ, ಮಾಸಿಕ ವರಮಾನದ ಜತೆಗೆ ದಿನದ ಗಳಿಕೆಯ ಮೂಲಕ ಆರ್ಥಿಕ ಪ್ರಗತಿ ಸಾಧಿಸಬಹುದು. ಅದೂ ಕೇವಲ ಒಂದೂವರೆ ಎಕರೆ ಭೂಮಿಯಲ್ಲಿ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದನಾಯಕನಹಳ್ಳಿಯ ಪ್ರಗತಿಪರ ರೈತ ಎಂ.ಕೆ.ದೇವರಾಜು. ಸಮಗ್ರ ಕೃಷಿ ಮೂಲಕ ಅವರು ಖುಷಿ ಕಂಡುಕೊಂಡಿದ್ದಾರೆ.

    ತುಂಡು ಭೂಮಿಯಲ್ಲೇ ಸಮಗ್ರ ಬೇಸಾಯ; ವಾರ್ಷಿಕ 5 ಲಕ್ಷ ರೂ. ಆದಾಯ | ಕೃಷಿಯಲ್ಲೇ ಖುಷಿ ಕಂಡ ಮದ್ದೂರು ರೈತ

    ಯಾವುದೇ ರಾಸಾಯನಿಕ ಬಳಸದೆ ಕೇವಲ ಸಾವಯವ ಗೊಬ್ಬರ ತಯಾರಿಸಿ ವ್ಯವಸಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಒಂದೂವರೆ ಎಕರೆಯಲ್ಲಿ ಎಲ್ಲ ಖರ್ಚು ಕಳೆದು ವಾರ್ಷಿಕ 5 ಲಕ್ಷ ರೂ. ಆದಾಯ ಗಳಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. 6 ವರ್ಷದ ಹಿಂದೆ ಸಮಗ್ರ ಕೃಷಿಗೆ ಕೈಹಾಕಿದ ಇವರ ಶ್ರಮದ ಬೆವರಿಗೆ ಬೆಲೆ ಸಿಗುತ್ತಿದೆ. ಇನ್ನೆರಡು ವರ್ಷ ಕಳೆದರೆ ಆದಾಯ ದ್ವಿಗುಣವಾಗುವ ವಿಶ್ವಾಸವೂ ಇವರದ್ದಾಗಿದೆ.

    ಸರ್ಕಾರದ ಸಬ್ಸಿಡಿ ಯೋಜನೆಯಡಿ ಟ್ರಿಲ್ಲರ್​ ಖರೀದಿಸಿದ್ದು, ಈ ಯಂತ್ರದ ಮೂಲಕ ಖುದ್ದು ಭೂಮಿ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ವರ್ಷಕ್ಕೆ 2&3 ಬಾರಿ ಭೂಮಿ ಉಳುಮೆ ಮಾಡುವುದರಿಂದ ಕಳೆಗಳೆಲ್ಲ ಭೂಮಿ ಪದರದಡಿ ಸೇರಿ ಅಲ್ಲೆ ಕೊಳೆತು ಉತ್ತಮ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಉತ್ತಮ ಸಲು ಪಡೆಯಲು ಸಾಧ್ಯ ಎಂಬುದು ಇವರ ಬಲವಾದ ಅಭಿಪ್ರಾಯವಾಗಿದೆ. ಇದರೊಂದಿಗೆ ಜಮೀನಿನಲ್ಲೇ ಎರೆಹುಳು ಗೊಬ್ಬರ ತಯಾರಿಸುತ್ತಿದ್ದು, ಅದನ್ನು ಭೂಮಿಗೆ ಬಳಸಿಕೊಳ್ಳುತ್ತಿದ್ದಾರೆ.

    ತುಂಡು ಭೂಮಿಯಲ್ಲೇ ಸಮಗ್ರ ಬೇಸಾಯ; ವಾರ್ಷಿಕ 5 ಲಕ್ಷ ರೂ. ಆದಾಯ | ಕೃಷಿಯಲ್ಲೇ ಖುಷಿ ಕಂಡ ಮದ್ದೂರು ರೈತ

    • ಹೈನುಗಾರಿಕೆ, ರೇಷ್ಮೆ ಸಾಕಣೆ
      ಸಮಗ್ರ ಕೃಷಿಯೊಂದಿಗೆ ಹೈನುಗಾರಿಕೆ, ರೇಷ್ಮೆ ಸಾಕಣೆ, ಮೇಕೆ ಸಾಕಣೆ, ಜೇನು ಕೃಷಿ ಮೂಲಕ ವರಮಾನಕ್ಕೆ ದಾರಿ ಕಂಡುಕೊಂಡಿದ್ದಾರೆ. ಮಲ್ಲಿಗೆ, ಕಾಕಡ ಹೂವಿನ ತೋಟವೂ ಇದ್ದು, ಇದರಿಂದ ಪ್ರತಿದಿನ ಹಣ ಸಂಪಾದಿಸುತ್ತಿದ್ದಾರೆ.
    • ಸಮಗ್ರ ಕೃಷಿಯಲ್ಲಿ ಪತ್ನಿ ಹಾಗೂ ಪುತ್ರನನ್ನು ತೊಡಗಿಸಿಕೊಂಡಿದ್ದಾರೆ. ಪಿಯುಸಿ ಓದಿರುವ ಮಗನನ್ನು ನೌಕರಿಗೆ ಕಳಿಸಿಲ್ಲ. ತಮ್ಮಂತೆ ರೈತನನ್ನಾಗಿಸಲು ಕೃಷಿ, ತೋಟಗಾರಿಕೆ ಕಾರ್ಯಾಗಾರಗಳಿಗೆ ಕಳುಹಿಸಿ ತರಬೇತಿ ಕೊಡಿಸಿದ್ದಾರೆ.
    • ಕಲ್ಪವೃಕ್ಷದಿಂದ ಆರ್ಥಿಕ ಬಲ
      ಇವರ ತೋಟದಲ್ಲಿ ಹೊಸ ತಳಿಯ 80 ತೆಂಗಿನ ಮರಗಳಿವೆ. ಇವು 5 ವರ್ಷಕ್ಕೆಲ್ಲ ಲ ನೀಡಲು ಆರಂಭಿಸಿದ್ದರಿಂದ ಹೆಚ್ಚಿನ ಆರ್ಥಿಕ ಬಲ ಸಿಕ್ಕಿದೆ. ತೋಟಗಾರಿಕೆ ಇಲಾಖೆಯಿಂದ ತಂದ ಸಸಿಗಳು ಉತ್ತಮ ಸಲು ನೀಡುತ್ತಿದ್ದು, ಒಂದೊಂದು ಕಾಯಿ ಒಂದೂವರೆ ಕೆಜಿ ತೂಗುತ್ತದೆ. ಎಳನೀರು, ಕಾಯಿ, ಕೊಬ್ಬರಿಯಂತೆ ಮಾರಾಟ ಮಾಡಿ ಉತ್ತಮ ಲಾಭ ಕಂಡುಕೊಂಡಿದ್ದಾರೆ.
    • ಸ್ಥಳಿಯ ಮಾರುಕಟ್ಟೆ ಕಂಡುಕೊಂಡ ರೈತ
      ಗ್ರಾಮದಲ್ಲೇ ಪುಟ್ಟ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರದಲ್ಲೂ ತೊಡಗಿರುವ ಇವರು, ತಮ್ಮ ಜಮೀನಿನಲ್ಲಿ ಬೆಳೆದ ಹಣ್ಣು ತರಕಾರಿಗಳನ್ನು ಇಲ್ಲಿಯೇ ಮಾರುತ್ತಾರೆ. ಸಾವಯವ ಬೆಳೆಯಾದ್ದರಿಂದ ಹಾಗೂ ರೈತನಿಂದ ನೇರವಾಗಿ ರಿಯಾಯಿತಿ ದರದಲ್ಲಿ ದೊರಕುವುದರಿಂದ ಸ್ಥಳಿಯರು ಖರೀದಿಗೆ ಮುಗಿಬೀಳುತ್ತಾರೆ.
    • ಏನೆಲ್ಲಾ ಬೆಳೆ ಇವೆ?
      ನಾಟಿ ನಿಂಬೆ, ಗಜನಿಂಬೆ, ಸೀತಾಲ, ರಾಮಲ, ಮೆಣಸು, ವೀಳ್ಯದೆಲೆ, ನೆಲ್ಲಿಕಾಯಿ, ಪಪ್ಪಾಯ, ಅಡಕೆ, ಕಿತ್ತಳೆ, ರೇಷ್ಮೆ, ಸೀಬೆ, ಮೆಣಸಿನಗಿಡ, ತರಕಾರಿ ಬೆಳೆ, ನುಗ್ಗೆ, 5 ಬಣ್ಣದ ಕಸಿ ದಾಸವಾಳ, 100ಕ್ಕೂ ಹೆಚ್ಚು ಬಾಳೆ, ಕರಿಬೇವು, ಸೀಮೆಹುಲ್ಲು ಹೀಗೆ ತುಂಡು ಭೂಮಿಯಲ್ಲಿ ಎಷ್ಟು ಸಾಧ್ಯವೋ ಅಷ್ಟೆಲ್ಲ ಬೆಳೆಗಳನ್ನು ಬೆಳೆಸಲಾಗಿದೆ.

    ತುಂಡು ಭೂಮಿಯಲ್ಲೇ ಸಮಗ್ರ ಬೇಸಾಯ; ವಾರ್ಷಿಕ 5 ಲಕ್ಷ ರೂ. ಆದಾಯ | ಕೃಷಿಯಲ್ಲೇ ಖುಷಿ ಕಂಡ ಮದ್ದೂರು ರೈತ

    ನರ್ಸರಿಯಿಂದ ಕೈತುಂಬ ಆದಾಯ…
    ದೇವರಾಜು ಅವರು ಕೇಂದ್ರ ಸರ್ಕಾರದ ಸಂಜೀವಿನಿ ಯೋಜನೆಯೊಂದಿಗೆ ನರ್ಸರಿ ಆರಂಭಿಸಿದ್ದು, ಇದರಿಂದ ವಾರ್ಷಿಕವಾಗಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ರೈತಾಪಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೈತೋಟ ನಿರ್ಮಾಣದತ್ತ ಒಲವು ಮೂಡಿಸಿಕೊಳ್ಳುವಲ್ಲಿ ಈ ನರ್ಸರಿ ಕೃಷಿ ಸಹಕಾರಿಯಾಗಿದೆ. ಶ್ರೀಗಂಧ, ತುರುಬೇವು, ತೇಗ, ಮಹಾಗನಿ ಮತ್ತಿತರ ಅರಣ್ಯ ಕೃಷಿಯನ್ನೂ ಅಳವಡಿಸಿಕೊಂಡಿದ್ದಾರೆ. 10&15 ವರ್ಷದ ಬೆಳೆಯಾಗಿದ್ದು ಕಟಾವಿನ ವೇಳೆ ಲಾಂತರ ರೂ. ಆದಾಯ ಬರಲಿದೆ. ಇದು ಒಂದು ರೀತಿ ಬ್ಯಾಂಕ್​ನಲ್ಲಿ ಸ್​ೇ ಡಿಾಸಿಟ್​ ಇಟ್ಟಂತೆ ಎಂಬುದು ರೈತ ದೇವರಾಜು ಅಭಿಪ್ರಾಯವಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಲ್ತ್​ುಡ್​ ಆಗಿ ಹಣಬೆಗೆ ಬೇಡಿಕೆ ಹೆಚ್ಚಿದೆ. ಇದನ್ನು ಮನಗಂಡು ಹಣಬೆ ಬೇಸಾಯಕ್ಕೂ ಮುಂದಾಗಿ ಯಶಸ್ಸು ಕಂಡಿದ್ದಾರೆ.

    ಹುಚ್ಚ ಎಂದಿದ್ದರು…
    ಸಮಗ್ರ ಕೃಷಿ ಆರಂಭಿಸಿದಾಗ ಮೂಗುಮುರಿದವರೇ ಹೆಚ್ಚು. ಇವನೊಬ್ಬ ಹುಚ್ಚ. ರಾಗಿ, ಕಬ್ಬು ಬೆಳೆಯೋದು ಬಿಟ್ಟು ಎಲ್ಲ ಬೆಳಿತಾನಂತೆ ಎಂದು ಆಡಿಕೊಂಡಿದ್ದರು. ಆದರೀಗ ಈ ಜನರೇ ಅಚ್ಚರಿಪಡುವಂತೆ ಸಾಧನೆ ಮಾಡಿರುವ ದೇವರಾಜು ಅವರನ್ನು ಪ್ರಶಸ್ತಿ, ಗೌರವ ಸನ್ಮಾನಗಳು ಅರಸಿಕೊಂಡು ಬಂದಿವೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೇಂದ್ರ ಸರ್ಕಾರದ ಜಾಹೀರಾತಿನಲ್ಲೂ ಈ ರೈತ ದಂಪತಿಯನ್ನು ಬಳಸಿಕೊಳ್ಳಲಾಗಿದೆ.

    ತುಂಡು ಭೂಮಿಯಲ್ಲೇ ಸಮಗ್ರ ಬೇಸಾಯ; ವಾರ್ಷಿಕ 5 ಲಕ್ಷ ರೂ. ಆದಾಯ | ಕೃಷಿಯಲ್ಲೇ ಖುಷಿ ಕಂಡ ಮದ್ದೂರು ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts