More

    ಏರ್​​ಪಾಟ್‌ಗಳಲ್ಲಿ ಬೆಳೆಯಿರಿ ಬಾದಾಮಿ, ಕಿತ್ತಳೆ, ಸೇಬು ಮತ್ತಿತರ ಹಣ್ಣು

    ಸಾಮಾನ್ಯವಾಗಿ ಮರಗಳನ್ನೆಲ್ಲ ನಾವು ನೆಲದ ಮೇಲೆಯೇ ಸಸಿ ನೆಟ್ಟು ಬೆಳೆಸುವುದನ್ನು ಕಂಡಿದ್ದೇವೆ. ಆದರೆ ಕಾಲ ಬದಲಾದ ಹಾಗೇ ಜನರು ಕೂಡ ಕೊಂಚ ಅಪ್‌ಡೇಟ್ ಆದ ಕಾರಣ ನಮ್ಮ ಅಕ್ಕಪಕ್ಕದಲ್ಲಿ, ಮನೆಯ ಸುತ್ತಮುತ್ತ ಭೂಮಿ ಇಲ್ಲದಿದ್ದರೂ ಸರಿ ಟೆರೇಸ್ ಗಾರ್ಡನ್ ಮೂಲಕ ಕೆಲ ಹಣ್ಣುತರಕಾರಿ ಬೆಳೆದು ತಾರಸಿ ತೋಟ ಮಾಡಿಕೊಂಡೆವು. ಬಳಿಕ ಮನೆ ಛಾವಣಿಯಲ್ಲಿ ತರಕಾರಿ ಮಾತ್ರವಲ್ಲ ಮೀನುಗಳನ್ನು ಕೂಡ ಸಾಕಬಹುದು ಎಂಬುದನ್ನು ಹಿಂದಿನ ಲೇಖನದಲ್ಲಿ ನೋಡಿದ್ಧೇವೆ.

    ಇದೀಗ ಇಲ್ಲೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೆಲದ ಮೇಲಾದರೂ ಸರಿ ಇಲ್ಲವೇ ತಾರಸಿಯಲ್ಲಾದರೂ ಸರಿ, ನಿಮಗೆ ಅನುಕೂಲವಿರುವ ಜಾಗದಲ್ಲಿ ವಿಶಿಷ್ಟ ಪಾಟ್‌ಗಳಲ್ಲಿ ಗಿಡ, ಮರಗಳನ್ನು ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಒಂದು ವಿಭಿನ್ನ ಪ್ರಯತ್ನದ ಮೂಲಕ ಮಿರಕಾಲ್ ಏರ್ ಪಾಟ್‌ಗಳಲ್ಲಿ ಸೇಬು, ಕಿತ್ತಳೆ ಸೇರಿದಂತೆ ವಿವಿಧ ಹಣ್ಣಿನ ಮರಗಳನ್ನು ಬೆಳೆಸಿ ಆದಾಯಗಳಿಸುತ್ತ ಸ್ವಾವಲಂಬಿಯಾಗಿ ಯಶ ಕಂಡಿದ್ದಾರೆ. ಹಾಗಾದರೆ ಏನಿದು ಮಿರಾಕಲ್ ಏರ್ ಪಾಟ್, ಇವುಗಳಲ್ಲಿ ಹೇಗೆ ಹಣ್ಣಿನ ಮರ ಬೆಳೆಯಲು ಸಾಧ್ಯ ಎಂಬ ನಿಮ್ಮ ಇತ್ಯಾದಿ ಪ್ರಶ್ನೆ, ಗೊಂದಲಗಳಿಗೆ ಇಲ್ಲಿದೆ ಉತ್ತರ.

    ಕೇರಳದ ಇಡುಕ್ಕಿಯಲ್ಲಿರುವ ಬಿಜುಮೋನ್ ಆಂಟನಿ ವೃತ್ತಿಯಲ್ಲಿ ಛಾಯಾಗ್ರಾಹಕರು. ಇವರು ತಮ್ಮ ಮನೆಯ ಸಮೀಪವೇ ಒಂದು ಸ್ಟುಡಿಯೋ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಕೃಷಿ ಹಿನ್ನೆಲೆಯ ಬಿಜುಮೋನ್ ತಮ್ಮ ಬಿಡುವಿನ ವೇಳೆಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಅವರಿಗೆ ಅದೇನನ್ನಿಸಿತೋ ತಮ್ಮ ವೃತ್ತಿಗೆ ತಿಲಾಂಜಲಿ ಹೇಳಿ ಪೂರ್ತಿ ಸಮಯವನ್ನು ಕೃಷಿಯಲ್ಲೇ ತೊಡಗಿಸಿಕೊಂಡರು.

    ಆರಂಭದಲ್ಲೇ ಸಮಗ್ರ ಕೃಷಿಯತ್ತ ಗಮನ ಹರಿಸಿದ ಬಿಜುಮೋನ್, ಮೇಕೆ ಸಾಕಣೆ, ಹೈನುಗಾರಿಕೆ, ಕಪ್ಪು ಕೋಳಿಗಳು ಮತ್ತು ಮೀನುಗಳ ಸಾಕಾಣಿಕೆ ಜತೆಗೆ ಏಲಕ್ಕಿ ಮತ್ತು ಮೆಣಸು ಬೆಳೆ ಬೆಳೆಯುವ ಮೂಲಕ ಕೊಂಚ ಆದಾಯ ಕಂಡರು. ಇದೇ ಅವರ ಕೃಷಿಯ ಇತರ ವಿಭಿನ್ನ ಪ್ರಯತ್ನಗಳಿಗೆ ಧೈರ್ಯ ನೀಡಿತು ಎನ್ನಬಹುದು. ಕೇರಳದ ಹವಾಮಾನಕ್ಕೆ ಹೊಂದುವ ಹೊಸ ಹೊಸ ಬೇಸಾಯದ ಪ್ರಕಾರಗಳ ಕುರಿತು ಹಲವು ಲೇಖನ, ಅನುಭವ ಕಥನಗಳು, ವರದಿಗಳ ಕುರಿತು ಅಧ್ಯಯನ, ಸಂಶೋಧನೆಗಳನ್ನು ನಡೆಸಿದರು. ಇದರ ಫಲವಾಗಿ ಮಿರಾಕಲ್ ಏರ್ ಪಾಟ್ ಎನ್ನುವ ವಿಶಿಷ್ಟ ಕುಂಡಗಳ ಮೂಲಕ ನಮ್ಮ ನೆಲದಲ್ಲಿ ವಿದೇಶಿ ಹಣ್ಣುಗಳ ಗಿಡಗಳನ್ನು ಬೆಳೆಯುವ ಸಾಹಸಕ್ಕೆ ಮುಂದಾದರು. ಇದರ ಪ್ರತಿಫಲವಿಂದು ಕಣ್ಮುಂದಿದೆ.

    ಪ್ರಸ್ತುತ ಬಿಜುಮೋನ್ ಅವರ ಮಿರಾಕಲ್ ಫಾರ್ಮ್​​ನಲ್ಲಿ ಸೇಬು, ಕಿತ್ತಳೆ, ಪೀಚ್, ಪೇರಳೆ, ಬಾದಾಮಿ, ವಾಲ್‌ನಟ್ ಮತ್ತು ಏಪ್ರಿಕಾಟ್ ನಂತಹ 25 ಕ್ಕೂ ಹೆಚ್ಚಿನ ವಿದೇಶಿ ಹಾಗೂ ಸ್ವದೇಶಿಯ ಹಣ್ಣಿನ ಮರಗಳು ನಳನಳಿಸುತ್ತಿವೆ.

    ಏನಿದು ಮಿರಾಕಲ್ ಏರ್ ಪಾಟ್?

    ಏರ್‌ಪಾಟ್‌ಗಳು ಕೋನ್ ಆಕಾರದಲ್ಲಿ ಪ್ಲಾಸ್ಟಿಕ್‌ನ ಬಳಕುವ ಅಗಲವಾದ ಹಾಳೆಯಿಂದ ಮಾಡಲಾಗುತ್ತದೆ. ಈ ಹಾಳೆಯ ಮೇಲ್ಮೈಯಲ್ಲಿ ಸಣ್ಣ ಸಣ್ಣ ರಂಧ್ರಗಳಿರುತ್ತವೆ. ಪಾಟ್‌ನ ತಳಭಾಗವನ್ನು ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಲಾಗಿರುತ್ತದೆ. ತಳ ಭಾಗದ ಪರದೆ ಮೇಲೆ ಚಾಪೆಯಂತೆ ಪ್ಲಾಸ್ಟಿಕ್ ಹಾಳೆಗಳನ್ನು ಮಡಿಕೆ ಮಾಡಿ ಜೋಡಿಸಬಹುದು. ಇದರ ಅನುಕೂಲವೆಂದರೆ ಲಭ್ಯವಿರುವ ಹಾಳೆಗಳ ಮೂಲಕ ಹೆಚ್ಚು ಗಾಳಿಯು ಹಾದುಹೋಗುತ್ತದೆ. ಇದರ ಪರಿಣಾಮ ಗಿಡಗಳ ಬೇರುಗಳು ವಾತಾವರಣಕ್ಕೆ ತೆರೆದುಕೊಂಡು ಹೈಡ್ರೇಟ್ ಆಗುವುದಲ್ಲದೆ, ಹೊಸ ಬೇರುಗಳು ಉತ್ಪತ್ತಿಯಾಗುತ್ತದೆ. ಇಂತಹ ಬೇರುಗಳು ಕಡಿಮೆ ಪೋಷಕಾಂಶಗಳನ್ನು ಬೇಡುತ್ತವೆ. ಬಳಿಕ ಮಣ್ಣಿನಲ್ಲಿರುವ ಎಲ್ಲ ಸಾರವು ಬೇರಿನ ಮೂಲಕ ಗಿಡ ಸೇರುತ್ತದೆ ಎಂದು ಏರ್ ಮಿರಾಕಲ್ ಪಾಟ್‌ಗಳ ಪ್ರಯೋಜನವನ್ನು ವಿವರಿಸುತ್ತಾರೆ ಬಿಜುಮೋನ್.

    ನೆಲದ ಮೇಲೆ ಬೆಳೆಯುವ ಮರಗಳಲ್ಲಿ ಮಣ್ಣಿನ ಕೆಳಗೆ ಬೇರುಗಳು ಗೋಜಲಾಗಿ ಸಿಲುಕಿ, ಫಲ ನೀಡುವುದು ಕೊಂಚ ನಿಧಾನವೇ ಆಗುತ್ತದೆ. ಹಾಗೂ ಆರಂಭದಲ್ಲಿ ನಾವು ಒದಗಿಸುವ ಎಲ್ಲ ಪೋಷಕಾಂಶಗಳು ಬೇರಿಗೆ ಹೋಗುತ್ತದೆ. ಇದನ್ನು ತಪ್ಪಿಸಲು ಏರ್ ಪಾಟ್ ಗಾರ್ಡನಿಂಗ್ ಉತ್ತಮ ವಿಧಾನ ಎನ್ನುತ್ತಾರೆ ಬಿಜುಮೋನ್. ರಂಧ್ರಗಳಿAದ ತುಂಬಿದ ಕುಂಡಗಳಲ್ಲಿ ಗಿಡ ನೆಟ್ಟ ಬಳಿಕ, ಇದನ್ನು ನೆಲದ ಮೇಲಾದರೂ ಸರಿ ಅಥವಾ ತಾರಸಿಯಲ್ಲಾದರೂ ಸರಿ ಎಲ್ಲಾದರೂ ಇಡಬಹುದು ಎನ್ನುತ್ತಾರೆ.

    ಏರ್ ಪಾಟ್‌ಗಳಲ್ಲಿ ಕೃಷಿ

    ಆರಂಭದಲ್ಲಿ ಸೇಬು ಕೃಷಿಗೆ ಈ ವಿಧಾನವನ್ನು ಬಳಸಿಕೊಂಡರು. ಆನ್‌ಲೈನ್‌ನಲ್ಲಿ ಕೆಲವು ಕುಡಿಕೆಗಳನ್ನು ತರಿಸಿ ಗಿಡಗಳನ್ನು ನೆಟ್ಟರು. ಪರಿಣಾಮ ಅದ್ಬುತವಾಗಿತ್ತು. ಆದರೆ ಈ ಪಾಟ್‌ಗಳು ದುಬಾರಿಯಾಗಿರುವುದರಿಂದ ಬಂದ ಲಾಭವು ಕೈ ಸೇರಲಿಲ್ಲ. ಈ ನಿರಾಸೆಯೇ ಸ್ವತಃ ಈ ಪಾಟ್‌ಗಳನ್ನು ತಯಾರಿಸಲು ಬಿಜುಮೋನ್ ಅವರಿಗೆ ಹುಮ್ಮಸ್ಸು ನೀಡಿತು.

    ಹಾಗಾಗಿ ಬಿಜುಮೋನ್ ಇದೀಗ ರೈತರು ಮಾತ್ರವಲ್ಲದೆ ತಮ್ಮದೇ ಆದ ಏರ್ ಪಾಟ್‌ಗಳನ್ನು ತಯಾರಿಸಿ ಮಾರಾಟ ಮಾಡುವ ಬ್ಯುಸ್‌ನೆಸ್ ಮೆನ್ ಆಗಿದ್ದಾರೆ. ಇಸ್ರೇಲ್, ಚೀನಾ, ಜಪಾನ್ ಮುಂತಾದ ವಿದೇಶಗಳಲ್ಲಿ ಈ ಕೃಷಿ ಪದ್ಧತಿ ಚಾಲ್ತಿಯಲ್ಲಿದ್ದು, ವೇಗವಾಗಿ ಇಳುವರಿ ನೀಡುತ್ತದೆ. ಆದರೆ ಭಾರತದಲ್ಲಿ ಇಂತಹ ಕುಂಡಗಳ ಬೆಲೆ ಹೆಚ್ಚಾಗಿರುವುದರಿಂದ ರೈತರಿಗೆ ಇದರ ಅರಿವಿಲ್ಲ. ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ಗಳಲ್ಲಿ ಒಂದು ಪಾಟ್‌ನ ಸರಾಸರಿ ಬೆಲೆ 250 ರೂ. ಇದೆ. ಪಾಟ್‌ಗಳಿಗೆ ಇಷ್ಟು ಬೆಲೆ ತೆರಲು ನಮ್ಮ ರೈತರಿಗೆ ಕಷ್ಟಸಾಧ್ಯ. ಆರಂಭದಲ್ಲಿ ಜಮೀನಿಗೆ ಭೇಟಿ ನೀಡುತ್ತಿದ್ದ ರೈತರು, ಇದರ ಬಗ್ಗೆ ಆಸಕ್ತಿ ವಹಿಸಿ ಮಾಹಿತಿ ಪಡೆದು ತಮಗೂ ಬೇಕೆಂದು ಕೇಳಲು ಆರಂಭಿಸಿದರು. ಇದರ ಫಲವಾಗಿ ನಾನು ಕೊಯಮತ್ತೂರು ಮೂಲದ ಕಂಪನಿ ನೆರವಿನಿಂದ ಬೇರೆ ಬೇರೆ ಗಾತ್ರದಲ್ಲಿ ಏರ್‌ಪಾಟ್‌ಗಳನ್ನು ತಯಾರಿಸಿ ಮಾರಾಟ ಮಾಡಲು ಆರಂಭಿಸಿದೆ. ಇವುಗಳಗೆ ಮಿರಕಲ್ ಪಾಟ್ ಎಂದು ಹೆಸರಿಸಿದೆ ಎಂದು ಹಿನ್ನೆಲೆ ವಿವರಿಸುತ್ತಾರೆ ಬಿಜುಮೋನ್.

    ಕೈಗೆಟುಕುವ ದರದಲ್ಲಿ ಪಾಟ್‌ಗಳು

    ಈ ಕುಂಡಗಳ ಬೆಲೆ 50 ರಿಂದ 1000 ರೂಪಾಯಿವರೆಗೆ ತಗಲುತ್ತದೆ. ಸರಾಸರಿ ಮರವನ್ನು ಬೆಳೆಸಲು 350 ರೂ.ಗಳ ಮಿರಾಕಲ್ ಪಾಟ್‌ಗಳನ್ನು ಕೊಂಡರೆ ಸಾಕು. ಹೋಲ್‌ಸೇಲ್ ದರದಲ್ಲಿ ಖರಿದೀಸಿದರೆ ಇನ್ನೂ ಕಡಿಮೆ ಬೆಲೆ ಬೀಳುತ್ತದೆ. ಜನರು ಸಾಮಾನ್ಯವಾಗಿ ಇಲ್ಲಿಗೆ ನೇರವಾಗಿ ಬಂದು ಖರೀದಿಸುತ್ತಾರೆ. ನಾನು ಇವುಗಳನ್ನು ವಿವಿಧ ರಾಜ್ಯಗಳು ಮಾತ್ರವಲ್ಲ, ಪ್ರಪಂಚದ ವಿವಿಧ ಭಾಗಗಳಿಗೂ ಕೊರಿಯರ್ ಮೂಲಕ ಕಳುಹಿಸುತ್ತೇನೆ ಎನ್ನುತ್ತಾರೆ ಬಿಜುಮೋನ್.

    ಮರಗಳನ್ನು ಬೆಳೆಸುವುದರ ಹೊರತಾಗಿ ಕುಂಡಗಳಲ್ಲಿ ಮಿಶ್ರಗೊಬ್ಬರವನ್ನು ತಯಾರಿಸಬಹುದು. ರಂಧ್ರಗಳ ಮೂಲಕ ಆಮ್ಲಜನಕ ಹೆಚ್ಚಾಗಿ ಪೂರೈಕೆಯಾಗುವುದರಿಂದ ಬ್ಯಾಕ್ಟೀರಿಯಾವು ವೇಗವಾಗಿ ಬೆಳೆಯುತ್ತದೆ. ಹಾಗಾಗಿ ಕಡಿಮೆ ದಿನಗಳಲ್ಲಿ ಗಾಳಿಯ ಮಡಿಕೆಗಳಲ್ಲಿ ಮಿಶ್ರಗೊಬ್ಬರ ತಯಾರಾಗುತ್ತದೆ. ಏರ್‌ಪಾಟ್ ಗಾರ್ಡನಿಂಗ್‌ನಲ್ಲಿ ಸಸ್ಯಗಳು ತಾಜವಾಗಿರುತ್ತವೆ. ನಿಗದಿತ ಸಮಯಕ್ಕಿಂತ ಮುಂಚೆಯೇ ಗಿಡಗಳು ಫಲಿತಾಂಶ ನೀಡಲು ಆರಂಭಿಸುತ್ತದೆ. ಅಲ್ಲದೆ ಕಡಿಮೆ ಕಾರ್ಮಿಕರನ್ನು ಬೇಡುತ್ತದೆ. ಈ ಏರ್ ಪಾಟ್‌ಗಳ ಪ್ರಮುಖ ಪ್ರಯೋಜನವೆಂದರೆ ಗಿಡ ಅಥವಾ ಮರಗಳಿಗೆ ಹಾನಿಯಾಗದಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸ್ಥಳಾಂತರ ಮಾಡಬಹುದು.

    ನೀವು ಮಾಡಬೇಕಾಗಿರುವುದ ಇಷ್ಟೇ. ಅಗತ್ಯವಿರುವ ಕುಂಡಗಳನ್ನು ಖರೀದಿಸಿ, ಮಣ್ಣಿನಿಂದ ತುಂಬಿಸಿ ಸಸಿಗಳನ್ನು ನೆಡುವುದು. ಸಾಂದರ್ಭಿಕವಾಗಿ ಗಿಡಗಳಿಗೆ ನೀರುಣಿಸಿ, ಗೊಬ್ಬರ ಹಾಕುವುದು. ಉಳಿದೆಲ್ಲ ಸಾಮಾನ್ಯ ತೋಟಗಾರಿಕೆಯನ್ನೇ ಹೋಲುತ್ತದೆ ಎಂದು ವಿವರಿಸುತ್ತಾರೆ ಬಿಜುಮೋನ್.

    ಈ ಏರ್‌ಪಾಟ್‌ಗಳ ಉತ್ಪಾದನೆಯನ್ನು ವಿಸ್ತರಿಸಲು ಮುಂದಾಗಿರುವ ಬಿಜುಮೋನ್, ಸ್ಥಳೀಯ ಕೃಷಿ ಅಂಗಡಿಗಳಲ್ಲಿ ಈ ಪಾಟ್‌ಗಳು ಲಭ್ಯವಾಗುವಂತೆ ತಯಾರಿ ನಡೆಸಿದ್ದಾರೆ. ಜತೆಗೆ ಈ ಕೃಷಿಯನ್ನು ಜನಪ್ರಿಯಗೊಳಿಸಲು ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನಲ್ ಆರಂಭಿಸುವ ಮೂಲಕ ತಾಂತ್ರಿಕವಾಗಿಯೂ ಮುನ್ನಡೆ ಸಾಧಿಸಿದ್ದಾರೆ. ಬಿಜುಮೋನ್‌ರ ಈ ವಿಭಿನ್ನ ಹಾಗೂ ವಿಶಿಷ್ಟ ಕೃಷಿ ಕಾಏರ್ ಪಾಟ್‌ಗಳಲ್ಲಿ ಬೆಳೆಯಿರಿ ಬಾದಾಮಿ, ಕಿತ್ತಳೆ, ಸೇಬು ಮತ್ತಿತರ ಹಣ್ಣುರ್ಯವನ್ನು ಗಮನಸಿದ ಕೇರಳ ರಾಜ್ಯ ಸರ್ಕಾರ 2019 ರಲ್ಲಿ ರೈತಾಪಿ ಪ್ರಶಸ್ತಿ ಮತ್ತು 2020 ರಲ್ಲಿ ರೈತ ತಿಲಕ ಪ್ರಶಸ್ತಿ ನೀಡಿ ಗೌರವಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts