More

    ಆಸಿಸ್​ vs ಪಾಕ್​ ಟೆಸ್ಟ್ ಸರಣಿ: ಕಾಮೆಂಟರಿ ತಂಡದಿಂದ ಜಾನ್ಸನ್ ಔಟ್-ವಾರ್ನರ್ ಟೀಕೆಗೆ ಬೆಲೆ ತೆರಬೇಕಾಯಿತೇ..?

    ನವದೆಹಲಿ: ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಮಿಚೆಲ್ ಜಾನ್ಸನ್ ಅವರು ಡೇವಿಡ್ ವಾರ್ನರ್ ಜೊತೆಗಿನ ತಿಕ್ಕಾಟದ ನಂತರ ಭಾರೀ ಬೆಲೆ ತೆರಬೇಕಾಗಿ ಬಂದಿದೆ. ಜಾನ್ಸನ್ ತನ್ನ ಸಾಮಾಜಿಕ ಜಾಲತಾಣದ ಅಂಕಣದಲ್ಲಿ ವಾರ್ನರ್ ಕುರಿತು ಹಲವು ಕಾಮೆಂಟ್​ಗಳನ್ನು ಹಾಕಿದ್ದು, ನೆಟ್ಟಿಗರಿಂದ ಟ್ರೋಲ್​ ಆಗಿದ್ದರು.

    ಇದನ್ನೂ ಓದಿ: ಮದುವೆ ಶಾಸ್ತ್ರಕ್ಕೆ ಹೊರಟವರು ಮಸಣಕ್ಕೆ!: ಹಲ್ದಿ ಸಮಾರಂಭಕ್ಕೆ ತೆರಳುತ್ತಿದ್ದವರ ಮೇಲೆ ಗೋಡೆ ಕುಸಿದು ಏಳು ಮಂದಿ ದಾರುಣ ಸಾವು..
    ಟೆಸ್ಟ್ ಕ್ರಿಕೆಟ್‌ನಲ್ಲಿ ವಾರ್ನರ್‌ ರನ್ನು ಉತ್ತಮವಾಗಿ ಬೀಳ್ಕೊಡುವುದಕ್ಕೆ ಜಾನ್ಸನ್ ವಿರೋಧಿಸಿದ್ದರು. ಅಷ್ಟೇನು ಪರ್ಪಾರ್ಮೆನ್ಸ್​ ಇಲ್ಲದೆ ಹೆಣಗಾಡುತ್ತಿರುವ ಟೆಸ್ಟ್ ಆರಂಭಿಕ ಆಟಗಾರ ತನ್ನ ನಿವೃತ್ತಿ ದಿನಾಂಕವನ್ನು ಏಕೆ ಘೋಷಿಸಬೇಕು? ಎಂದು ಅಸಂಮಜಸವಾಗಿ ಪ್ರಶ್ನೆಗಳನ್ನು ಎತ್ತುವ ಮೂಲಕ ಆಸ್ಟ್ರೇಲಿಯನ್ ಕ್ರಿಕೆಟ್ ಇತಿಹಾಸದಲ್ಲಿ ಟೀಕೆಗಳಿಗೆ ಗುರಿಯಾಗಿದ್ದರು.

    ಇದನ್ನೆಲ್ಲ ಗಮನಿಸಿಯೇ ಜಾನ್ಸನ್ ರನ್ನು ಇದೇ ತಿಂಗಳಿನಲ್ಲಿ(ಡಿಸೆಂಬರ್​)ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ-ಪಾಕಿಸ್ತಾನ ಟೆಸ್ಟ್ ಸರಣಿಯ ಕಾಮೆಂಟರಿ ಪ್ಯಾನೆಲ್‌ನಿಂದ ಕೈಬಿಡಲಾಗಿದೆ.

    ಜಾನ್ಸನ್ ಅವರು ಸರಣಿಗಾಗಿ ಟ್ರಿಪಲ್ ಎಂನ ಕಾಮೆಂಟರಿ ತಂಡದ ಭಾಗವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ, ಮರ್ವ್ ಹ್ಯೂಸ್, ವಾಸಿಂ ಅಕ್ರಮ್ ಮತ್ತು ಮಾರ್ಕ್ ಟೇಲರ್ ಅವರಂತಹ ಕ್ರಿಕೆಟ್ ಆಟಗಾರರನ್ನು ಒಳಗೊಂಡಿರುವ ಕಾಮೆಂಟೇಟರಿಗಳ ಅಂತಿಮ ಪಟ್ಟಿಯನ್ನು ಕಂಪನಿಯು ಬಿಡುಗಡೆ ಮಾಡಿದಾಗ ಇವರ ಹೆಸರು ಕಾಣೆಯಾಗಿತ್ತು.

    ಇದು ಜಾನ್ಸನ್‌ನ ಒಳಗೊಳ್ಳದಿರುವ ಬಗ್ಗೆ ಊಹಾಪೋಹ ಮತ್ತು ಕುತೂಹಲವನ್ನು ಹೆಚ್ಚಿಸಿತು. ವಿವಾದದ ಮಧ್ಯೆ, ಇದು ವಾರ್ನರ್‌ಗೆ ವೈಯಕ್ತಿಕ ಸಂದೇಶ ಎಂದು ಜಾನ್ಸನ್ ಸ್ಪಷ್ಟಪಡಿಸಿದ್ದಾರೆ.

    ಕಾರ್ಗಿಲ್ ಯುದ್ಧ ವಿರೋಧಿಸಿದ್ದಕ್ಕಾಗಿ ಪದಚ್ಯುತಿ: ಜನರಲ್​ ಮುಷರಫ್​ ದುಷ್ಕೃತ್ಯ ಬಿಚ್ಚಿಟ್ಟ ನವಾಜ್ ಷರೀಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts