More

    ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮತ್ತೆ ಒಡಕು; ಕೋಚ್ ಮಿಸ್ಬಾ, ಬೌಲಿಂಗ್ ಕೋಚ್ ವಕಾರ್ ರಾಜೀನಾಮೆ

    ಲಾಹೋರ್: ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಮತ್ತು ಬೌಲಿಂಗ್ ಕೋಚ್ ವಕಾರ್ ಯೂನಿಸ್ ರಾಜೀನಾಮೆ ನೀಡಿದ್ದು, ಟಿ20 ವಿಶ್ವಕಪ್‌ಗೆ ಮುನ್ನ ಪಾಕಿಸ್ತಾನ ತಂಡಕ್ಕೆ ಆಘಾತ ಎದುರಾಗಿದೆ. ಮಾಜಿ ಆಟಗಾರರಾದ ಸಕ್ಲೇನ್ ಮುಷ್ತಾಕ್ ಮತ್ತು ಅಬ್ದುಲ್ ರಜಾಕ್ ಅವರನ್ನು ಮಧ್ಯಂತರ ಕೋಚ್ ಆಗಿ ನೇಮಿಸಲಾಗಿದೆ.

    ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಹೊಸ ಅಧ್ಯಕ್ಷರಾಗಿ ಸೆಪ್ಟೆಂಬರ್ 13ರಂದು ಅಧಿಕಾರ ಸ್ವೀಕರಿಸಲಿರುವ ರಮೀಜ್ ರಾಜಾ, ಪಾಕ್ ತಂಡಕ್ಕೆ ಮಿಸ್ಬಾ, ವಕಾರ್ ಅತ್ಯುತ್ತಮ ಕೋಚ್‌ಗಳಲ್ಲ ಎಂದು ಇತ್ತೀಚೆಗೆ ತಮ್ಮ ಯುಟ್ಯೂಬ್ ಚಾನಲ್‌ನಲ್ಲಿ ಹೇಳಿದ್ದರು. ಇದೇ ಕಾರಣದಿಂದಾಗಿ ಇವರಿಬ್ಬರು ಪದತ್ಯಾಗ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಟಿ20 ವಿಶ್ವಕಪ್‌ಗೆ ತಂಡ ಆಯ್ಕೆಗೆ ಮುನ್ನ ತಮ್ಮನ್ನು ಸಂಪರ್ಕಿಸದಿರುವುದು ಕೂಡ ಮಿಸ್ಬಾಗೆ ಸಿಟ್ಟು ತರಿಸಿತ್ತು ಎನ್ನಲಾಗಿದೆ.

    2019ರ ಸೆಪ್ಟೆಂಬರ್‌ನಿಂದ ಹುದ್ದೆಯಲ್ಲಿದ್ದ ಇವರಿಬ್ಬರು, ಇನ್ನೂ ಒಂದು ವರ್ಷದ ಒಪ್ಪಂದ ಹೊಂದಿದ್ದರು. ಸಕ್ಲೇನ್-ರಜಾಕ್ ಕಿವೀಸ್ ಸರಣಿಗೆ ಮಧ್ಯಂತರ ಕೋಚ್‌ಗಳಾಗಿದ್ದು, ಟಿ20 ವಿಶ್ವಕಪ್‌ಗೆ ಹೊಸ ತರಬೇತಿ ಬಳಗವನ್ನು ಶೀಘ್ರದಲ್ಲೇ ಆರಿಸಲಾಗುವುದು ಎಂದು ಪಿಸಿಬಿ ತಿಳಿಸಿದೆ.

    ಟಿ20 ವಿಶ್ವಕಪ್‌ಗೆ ಅಚ್ಚರಿಗಳ ಪಾಕ್ ತಂಡ ಪ್ರಕಟ, ಭಾರತವನ್ನು ಸೋಲಿಸುತ್ತಾ ಈ ಟೀಮ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts