More

    ಮದುವೆಯಾಗಲು ಒಪ್ಪದ ಬಾಲಕಿಗೆ ಚಾಕು ಇರಿತ!

    ನವದೆಹಲಿ: ಆಗ್ನೇಯ ದೆಹಲಿಯ ಮೊಲಾರ್‌ಬ್ಯಾಂಡ್ ಭಾಗದಲ್ಲಿ ಭಾನುವಾರ ಅಪ್ರಾಪ್ತ ಬಾಲಕಿಗೆ ಚಾಕು ಇರಿಯಲಾಗಿದೆ.

    ಹೇಗಾಯಿತು ಈ ಘಟನೆ

    ಈಕೆ ಮಾಡಿದ ತಪ್ಪು, ಮದುವೆಯಾಗಲು ನಿರಾಕರಿಸಿದ್ದು! ಅಷ್ಟಕ್ಕೇ ಚಾಕು ಇರಿತಕ್ಕೆ ಈಕೆ ಒಳಗಾಗಿದ್ದಾರೆ. ಇದಾದ ಮೇಲೆ ಓರ್ವ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಡಿಸಿಪಿ (ಆಗ್ನೇಯ) ರಾಜೇಶ್ ಡಿಯೋ, ಮೊಲಾರ್‌ಬಂಡ್ ಭಾಗದಲ್ಲಿ ಅಪ್ರಾಪ್ತ ಬಾಲಕಿಗೆ ಇರಿದಿರುವ ಬಗ್ಗೆ ಪಿಸಿಆರ್ ಕರೆ ಸ್ವೀಕರಿಸಿದ್ದಾರೆ ಎಂದು ಹೇಳಿದರು. ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಬಾಲಕಿಯನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದೆ. ತಲೆ ಮತ್ತು ಕತ್ತಿನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವುದಾಗಿ ಎಂಎಲ್‌ಸಿ ತಿಳಿಸಿದ್ದಾರೆ.

    ಇದನ್ನೂ ಓದಿ: ಚಾಕುವಿನಿಂದ ಇರಿದು ತಂದೆಯನ್ನೇ ಕೊಂದ ಮಗ

    ಸ್ಥಳೀಯ ವಿಚಾರಣೆ ನಡೆಸಲಾಗಿದ್ದು, ಯುವತಿಗೆ ಪರಿಚಯವಾಗಿದ್ದ ಪ್ರಿನ್ಸ್ ಎಂಬಾತ ತನ್ನ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದರಿಂದ ಕೊಲೆ ಮಾಡುವ ಉದ್ದೇಶದಿಂದ ಅಪ್ರಾಪ್ತೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಕೆ ಆತನನ್ನು ಮದುವೆಯಾಗಲು ನಿರಾಕರಿಸಿದ್ದ ಎಂದು ಡಿಸಿಪಿ ತಿಳಿಸಿದ್ದಾರೆ. ಸದ್ಯ ಅಪ್ರಾಪ್ತ ಬಾಲಕಿಯ ಆರೋಗ್ಯ ಸ್ಥಿರವಾಗಿದ್ದು ಕೊಲೆ ಯತ್ನ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts