More

    ವಿಜಯೇಂದ್ರ ಸ್ಪರ್ಧೆ ಎಲ್ಲಿಂದ ಎಂಬ ಪ್ರಶ್ನೆಗೆ ಯಡಿಯೂರಪ್ಪ ಹೇಳಿದ್ದೇನು?

    ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಪಕ್ಷದ ನಾಯಕರು ಬೇರೆ ಬೇರೆ ರೀತಿಯ ಮಾಹಿತಿಯನ್ನು ನೀಡುತ್ತಿದ್ದಾರೆ. ಈಗಾಗಲೇ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಈ ಕುರಿತಾಗಿ ಹೇಳಿಕೆ ನೀಡಿದ್ದಾರೆ.

    ಇದೀಗ ತಾನೇ ದೆಹಲಿಯಿಂದ ಬಂದಿಳಿದ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದು ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಬಹುದು ಎಂದು ಹೇಳಿ ಇನ್ನಷ್ಟು ಕುತೂಹಲ ಹುಟ್ಟಿಸಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಎರಡು ದಿನದಿಂದ ಪ್ರಧಾನಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಅಮಿತ್ ಷಾ ಅವರ ಜೊತೆಗೆ ಸುದೀರ್ಘ ಚರ್ಚೆ ಆಯ್ತು. ಇವತ್ತು ರಾತ್ರಿ ಅಥವಾ ನಾಳೆ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. 25 ,30 ಮಂದಿಯದು ಬಿಟ್ಟು ಪಟ್ಟಿ ಬಿಡುಗಡೆ ಮಾಡಬಹುದು. ನಾವು ಆಯ್ಕೆ ಮಾಡಿರುವ ಪಟ್ಟಿ ನೋಡಿದರೆ ನೂರಕ್ಕೆ ನೂರು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೇ ಬರುವುದು ಗ್ಯಾರಂಟಿ. ಎಲ್ಲರೂ ಸೇರಿ ಒಳ್ಳೆಯ ಆಯ್ಕೆ ಮಾಡಿದ್ದೇವೆ. ಸಿಎಂ ಕನಸು ಕಾಣುತ್ತಿರುವವರಿಗೆ ಅವಕಾಶ ಇಲ್ಲ.

    ಬಂಡಾಯದ ಬಿಸಿಯ ಪ್ರಶ್ನೆಯೇ ಇಲ್ಲ, ಎಲ್ಲರ ಅಭಿಪ್ರಾಯ ಪಡೆದು ಪಟ್ಟಿ ತಯಾರು ಮಾಡಿದ್ದಾರೆ.ವ ಸಹಜವಾಗಿ ಯಾರೊ ಇಬ್ಬರು, ಮೂವರು ಅತೃಪ್ತರು ಇದ್ರೆ ಅವರನ್ನ ಕರೆದು ಸಮಾಧಾನ ಮಾಡ್ತೀವಿ. 70 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ಇಲ್ಲ ಎಂಬ ಬಗ್ಗೆ ಚರ್ಚೆ ಆಗಿಲ್ಲ” ಎಂದಿದ್ದಾರೆ.

    ಈ ನಡುವೆ ಯಡಿಯೂರಪ್ಪ, ತಮ್ಮ ಮಗ ವಿಜಯೇಂದ್ರ ಶಿಕಾರಿಪುರನಾ? ಅಥವಾ ವರುಣಾನಾ ಎಂಬ ಪ್ರಶ್ನೆಗೆ ಮಾಜಿ ಸಿಎಂ ಯಡಿಯೂರಪ್ಪ ಉತ್ತರಿಸದೆ ತೆರಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts