More

    ಮುಂದಿನ ವರ್ಷದಿಂದ ಖಂಡಿತವಾಗಿಯೂ ಬಿರಿಯಾನಿ ಊಟದ ವ್ಯವಸ್ಥೆ ಕಲ್ಪಿಸುತ್ತೇವೆ! ಏನಿದು ಸಚಿವರ ಭರವಸೆ?

    ಕೊಚ್ಚಿ: ಪ್ರತಿ ವರ್ಷವೂ ಕೇರಳದಲ್ಲಿ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಡುವ ನಿಟ್ಟಿನಲ್ಲಿ ಕಲೋತ್ಸವ ಎಂಬ ಕಾರ್ಯಕ್ರಮ ವರ್ಷಂಪ್ರತಿ ನಡೆಯುತ್ತಾ ಬರುತ್ತದೆ. ಆದರೆ ಈ ಬಾರಿ ಕೋಝಿಕೋಡ್‌ ಜಿಲ್ಲೆಯಲ್ಲಿ ನಡೆದ ಕಲೋಲ್ಸವದಲ್ಲಿ ಮಾಂಸಾಹರ ಊಟ ಇಲ್ಲಾ ಎಂಬ ವಿಚಾರವೊಂದು ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಕಲೋತ್ಸವಕ್ಕೆ ಬರುವ ಬಹುತೇಕರು ಮಾಂಸಾಹಾರ ಸೇವನೆ ಮಾಡುತ್ತಾರೆ. ಇದನ್ನು ಅರಿತಿದ್ದರೂ ಮಧ್ಯಾಹ್ನಕ್ಕೆ ಸಸ್ಯಾಹಾರ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅಸಮಾಧಾನದ ಮಾತುಗಳು ಕೇಳಿ ಬಂದಿದೆ.

    ಇದೀಗ ಈ ಅಸಮಾಧಾನದ ವಿಚಾರವಾಗಿ ಕೇರಳ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಪ್ರತಿಕ್ರಿಯಿಸಿದ್ದು, ಮಕ್ಕಳ ಆರೋಗ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಸ್ಯಾಹಾರಿ ಊಟಕ್ಕೆ ಪ್ರಾಶಸ್ತ್ಯ ನೀಡಿದ್ದೇವೆ. ಕಲೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸುತ್ತಾರೆ. ಹೀಗಿದ್ದಾಗ ಮಕ್ಕಳ ಆರೋಗ್ಯದ ಜವಾಬ್ದಾರಿಯೂ ಇರುತ್ತದೆ ಎಂದಿದ್ದಾರೆ.

    ಬಾಯಲ್ಲಿ ನೀರೂರಿಸುವಂತಹ ಬಿರಿಯಾನಿಯನ್ನು ಖಂಡಿತ ವ್ಯವಸ್ಥೆ ಮಾಡುತ್ತೇವೆ. ಅದರೆ ಈ ಬಾರಿಯಲ್ಲ, ಮುಂದಿನ ವರ್ಷ ಮಾಂಸಾಹಾರಾದ ಊಟವನ್ನೇ ವ್ಯವಸ್ಥೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಭರವಸೆ ನೀಡಿದ್ದಾರೆ.

    ಕೇರಳದಲ್ಲಿ ಕಳೆದ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಕಲೋತ್ಸವದಲ್ಲಿ ರಾಜ್ಯದ ವಿವಿಧ ಶಾಲೆಗಳಿಂದ ಮಕ್ಕಳು ಭಾಗವಹಿಸುತ್ತಾ ಬರುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುವ ಪ್ರತಿಭಾ ಕಾರಂಜಿ ಸ್ಪರ್ಧೆಯ ಮಾದರಿಯಲ್ಲೇ ಕೇರಳದಲ್ಲಿ ಕಲೋತ್ಸವ ನಡೆದುಕೊಂಡು ಬರುತ್ತಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts