More

    ಸಚಿವಗಿರಿಗಾಗಿ ಭುಗಿಲೆದ್ದ ಅಸಮಾಧಾನ; ಶಾಸಕರಿಬ್ಬರಿಂದ ಎಐಸಿಸಿ ಅಧ್ಯಕ್ಷರಿಗೆ ಪತ್ರ

    ರಾಯಚೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿನ ಸಚಿವಗಿರಿಗಾಗಿ ಕಾಂಗ್ರೆಸ್​ನಲ್ಲಿ ಈಗಾಗಲೇ ಭಾರಿ ಮೇಲಾಟ ಉಂಟಾಗಿದ್ದು, ಇದೀಗ ಶಾಸಕರಿಬ್ಬರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮಾತ್ರವಲ್ಲ ಎಐಸಿಸಿ ಕಾರ್ಯದರ್ಶಿ ವಿರುದ್ಧ ಎಐಸಿಸಿ ಅಧ್ಯಕ್ಷರಿಗೆ ಪತ್ರವನ್ನೂ ಬರೆದು ಮನವಿ ಮಾಡಿಕೊಳ್ಳಲಾಗಿದೆ.

    ಇನ್ನೊಂದು ಸುತ್ತಿನ ಸಚಿವರ ಆಯ್ಕೆಗೆ ಸಂಭಾವ್ಯರ ಪಟ್ಟಿಯಲ್ಲಿ ಎಐಸಿಸಿ ಕಾರ್ಯದರ್ಶಿ ಎನ್​.ಎಸ್.ಬೋಸರಾಜ್ ಅವರ ಹೆಸರಿದೆ ಎಂಬ ಹಿನ್ನೆಲೆಯಲ್ಲಿ ಈ ಅಸಮಾಧಾನ ಭುಗಿಲೆದ್ದಿದೆ. ಹೀಗಾಗಿ ಬೋಸರಾಜ್ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆಯಲಾಗಿದೆ.

    ಇದನ್ನೂ ಓದಿ: ಪೂಜೆಯಿಂದಾಗಿ ಪ್ರಾಣಾಪಾಯದಿಂದ ಪಾರಾದ ಉದ್ಯಮಿ!; ಆಗಿದ್ದೇನು?​

    ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಹಾಗೂ ಇನ್ನಿಬ್ಬರು ಮುಖಂಡರಾದ ಎ.ವಸಂತ್ ಕುಮಾರ್, ಅಸ್ಲಂ ಪಾಷಾ ಪತ್ರ ಬರೆದಿದ್ದಾರೆ.

    ಮಂತ್ರಿಗಿರಿ ರೇಸ್​​ನಲ್ಲಿರುವ ಬೋಸರಾಜ್ ಅವರು ಎಂಎಲ್​ಸಿ ಸ್ಥಾನದ ಮೂಲಕ ಸಚಿವರಾಗಲು ಲಾಬಿ ನಡೆಸುತ್ತಿದ್ದು, ಅವರಿಗೆ ಸ್ಥಾನ ಸಿಗುವುದು ಖಚಿತ ಎನ್ನಲಾಗಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಈ ನಾಲ್ವರು, ಬೋಸರಾಜ್ ವಿರುದ್ಧ ಪಕ್ಷವಿರೋಧಿ ಕಾರ್ಯದ ಆರೋಪ ಹೊರಿಸಿದ್ದಾರೆ. ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿರು ಇವರು, ಬೋಸರಾಜ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಪತ್ರ ಮುಖೇನ ಮನವಿ ಮಾಡಿಕೊಂಡಿದ್ದಾರೆ.

    ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts