More

    ‘ಅನುದಾನಕ್ಕಾಗಿ ಸಿಎಂಗೆ ಬೆಣ್ಣೆ ಹಚ್ಚಬೇಕು’ ಎಂದ ಸಚಿವ!

    ಕೆ.ಆರ್.ಪೇಟೆ: ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಪಡೆಯಬೇಕಾದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೆಣ್ಣೆ ಹಚ್ಚಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬಿಜೆಪಿ ಹಿಂದುಳಿದ ಘಟಕದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ನಾಗರಾಜು ಅವರನ್ನು ಕೆಲ ದಿನದ ಹಿಂದೆ ಪಟ್ಟಣದ ಅವರ ನಿವಾಸದಲ್ಲಿ ಅಭಿನಂದಿಸುವ ವೇಳೆ ರೇಷ್ಮೆ ಇಲಾಖೆಯ ಸಮಸ್ಯೆಗಳ ಕುರಿತು ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ

    ತೋಟಗಾರಿಕೆ, ಪೌರಾಡಳಿತ ಇಲಾಖೆಯಲ್ಲಿ ಸಮಸ್ಯೆ ಇಲ್ಲ. ರೇಷ್ಮೆ ಇಲಾಖೆಯಲ್ಲಿ ಸ್ವಲ್ಪ ಸಮಸ್ಯೆಯಿದೆ. ಬಟ್ಟೆ ನೇಯ್ಗೆ ಇನ್ನೂ ಪ್ರಾರಂಭವಾಗಿಲ್ಲ. 600 ರೂ. ಇದ್ದ ರೇಷ್ಮೆ ಬೆಲೆ 200 ರಿಂದ 250 ರೂ.ಗೆ ಬಂದಿದೆ. ಪಾಪ ಅವರಿಗೆ ಬದುಕೋಕೆ ಆಗ್ತಿಲ್ಲ. ಟೆಕ್ಸ್‌ಟೈಲ್ಸ್ ಪ್ರಾರಂಭವಾದರೆ ನಮ್ಮ ರೈತರಿಗೆ ಲಾಟರಿ ಹೊಡೆಯುತ್ತದೆ. ಅಲ್ಲಿ ತನಕ ಅವರನ್ನು ಕಾಪಾಡಿಕೊಳ್ಳಬೇಕು ಎಂದಿದ್ದಾರೆ.

    ಮುಖ್ಯಮಂತ್ರಿ ಹತ್ತಿರ ಆ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಇನ್ನೂ ಮೂರ್ನಾಲ್ಕು ದಿನದಲ್ಲಿ ಸೆಟಲ್ ಮಾಡಿಸಬೇಕು. ಅವರಿಗೆ 50 ರೂ. ಕೊಡಿಸೋಣ ಅಂದರೂ, 600 ಕೋಟಿ ರೂ. ಬೇಕಾಗುತ್ತದೆ. 600 ಕೋಟಿ ರೂ. ಅಂದ್ರೆ ಸಿಎಂ ಫೈಲ್ ತೆಗೆದು ಬಿಸಾಕುತ್ತಾರೆ. ಸಿಎಂ ಹತ್ತಿರ ಫಂಡ್ ತಕೊಂಡ್ ರೈತರಿಗೆ ಸ್ವಲ್ಪ ದುಡ್ಡು ಕೊಡಬೇಕು. ಪ್ರತಿ ಕೆಜಿಗೆ 100 ಅಥವಾ 50 ರೂ. ಆದರೂ ಹೆಚ್ಚುವರಿಯಾಗಿ ಕೊಡಬೇಕು. ಏನೋ ಏನೋ ಬೆಣ್ಣೆ ಹೊಡೆದು ಇದು ಮಾಡ್ಬೇಕು. ಪಾರ್ಟ್ ಪಾರ್ಟ್ ಕೊಡಿ ಅಂತಾ ಬೆಣ್ಣೆ ಹಾಕಬೇಕು ಎಂದು ಹೇಳಿರುವುದು ಬಹಿರಂಗವಾಗಿದೆ.

    ಇದನ್ನೂ ಓದಿ ನಟ ಸುಶಾಂತ್​ ಸಿಂಗ್​ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ?

    ಮಗಳ ಮದುವೆಯಲ್ಲಿ ಕೇರಳ ಸಿಎಂಗೆ ಮುಜುಗರ; ಗೃಹ ಇಲಾಖೆ ವೈಫಲ್ಯ ಪಕ್ಷಕ್ಕೂ ಕಿರಿಕಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts