More

    ದೇವಾಲಯದಿಂದ ಹೊರಹಾಕಲ್ಪಟ್ಟ ಮಹಿಳೆಯೊಂದಿಗೆ ಊಟ ಮಾಡಿದ ಸಚಿವರು

    ಚೆನ್ನೈ: ಇತ್ತೀಚೆಗೆ ತಮಿಳುನಾಡಿನ ಮಮಲ್ಲಾಪುರಂ ದೇವಸ್ಥಾನದಲ್ಲಿ ಸ್ಥಳೀಯ ನರಿಕುರವ ಸಮುದಾಯದ ಜನರಿಗೆ ಅನ್ನದಾನಕ್ಕೆ ಕೂರಲು ಬಿಡುತ್ತಿಲ್ಲ ಎಂದು ದೂರಿದ ಮಹಿಳೆಯ ವಿಡಿಯೋವೊಂದು ವೈರಲ್​ ಆಗಿತ್ತು. ದೇಶದಲ್ಲಿ ಇನ್ನೂ ಅಸ್ಪೃಶ್ಯತೆಯ ಕೆಟ್ಟ ಪದ್ಧತಿಯು ಅಸ್ತಿತ್ವದಲ್ಲಿದೆಯಾ ಎಂಬ ಚರ್ಚೆ ಮೂಡಿಸಿದ್ದ ಈ ಮಹಿಳೆಯ ಅಳಲಿಗೆ ರಾಜ್ಯದ ಸಚಿವರೊಬ್ಬರು ತಾರ್ಕಿಕ ಅಂತ್ಯ ಹಾಡಿದ್ದಾರೆ.

    ಶುಕ್ರವಾರದಂದು ರಾಜ್ಯದ ಹಿಂದೂ ಧಾರ್ಮಿಕ ಮತ್ತು ದತ್ತಿ ನಿಧಿಗಳ ಸಚಿವ ಪಿ.ಕೆ.ಶೇಕರ್​ ಬಾಬು ಸ್ಥಳಸಯನ ಪೆರುಮಾಳ್​ ಮಂದಿರದ ಅನ್ನದಾನದಲ್ಲಿ ಪಾಲ್ಗೊಂಡರು. ಸಾಮಾನ್ಯ ಪಂಕ್ತಿಯಲ್ಲಿ ಕುಳಿತು ಊಟ ಮಾಡಿದ ಸಚಿವರ ಪಕ್ಕದಲ್ಲಿ ಕುಳಿತಿದ್ದದ್ದು, ತಮ್ಮನ್ನು ಹೊರಹಾಕಿದ್ದರು ಎಂದು ದೂರಿದ್ದ ಅದೇ ಅಶ್ವಿನಿ ಎಂಬ ಮಹಿಳೆ. ತನ್ನ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಅಶ್ವಿನಿ ಊಟಕ್ಕೆ ಕುಳಿತಿದ್ದರೆ, ಒಂದು ಪಕ್ಕದಲ್ಲಿ ಸಚಿವರು ಮತ್ತೊಂದು ಪಕ್ಕದಲ್ಲಿ ಕಂಚೀಪುರಂನ ಹಿಂದೂ ದತ್ತಿ ನಿಧಿಗಳ ಕಮಿಷನರ್​ ಪಿ.ಜಯರಾಮನ್​ ಕುಳಿತಿದ್ದರು. ಜೊತೆಗೆ, ಅಶ್ವಿನಿ ಸೇರಿದ ನರಿಕುರುವ ಸಮುದಾಯದ ಇತರ ಹಲವರೂ ಊಟ ಮಾಡಿದರು.

    ಈ ಮಹಿಳೆಯು ತನಗೆ ಮತ್ತು ತನ್ನ ಸಮುದಾಯದ ಇತರ ಜನರಿಗೆ ದೇವಾಲಯದ ಅನ್ನದಾನದಲ್ಲಿ ಊಟಕ್ಕೆ ಕೂರಲು ಬಿಡಲಿಲ್ಲ. ಎಲ್ಲರದ್ದೂ ಆದ ಮೇಲೆ ಆಹಾರ ಉಳಿದರೆ ನಿಮಗೆ ಕೊಡುತ್ತೇವೆ. ಹೊರಗೆ ನಿಂತಿರಿ ಎಂದು ದೇವಾಲಯದ ಅಧಿಕಾರಿಯೊಬ್ಬರು ಹೇಳಿದ್ದರು ಎಂದು ದುಃಖ ತೋಡಿಕೊಂಡಿದ್ದರು. ಸರ್ಕಾರದ ನಿಯಂತ್ರಣದಲ್ಲಿರುವ ಮಂದಿರದಲ್ಲಿ ಖುದ್ದು ತಾವೇ ಆ ಹಿಂದುಳಿದ ವರ್ಗದ ಜನರೊಂದಿಗೆ ಕೂತು ಊಟ ಮಾಡುವ ಮೂಲಕ ಸಾಮಾಜಿಕ ಭೇದಭಾವ ಸಲ್ಲದು ಎಂಬ ದಿಟ್ಟ ಉತ್ತರವನ್ನು ಸಚಿವ ಬಾಬು ನೀಡಿದ್ದಾರೆ. ಅವರ ಈ ನಡೆಗೆ ಭಾರೀ ಪ್ರಶಂಸೆ ಲಭಿಸಿದೆ. (ಏಜೆನ್ಸೀಸ್)

    ನೆಚ್ಚಿನ ನಟನ ಸಾವಿನ ಸುದ್ದಿ ನೋಡುತ್ತಾ ಬಾರದ ಊರಿಗೆ ತೆರಳಿದ ಅಭಿಮಾನಿ

    ಪಾಕಿಸ್ತಾನದ ಜಿಡಿಪಿಗಿಂತ ಈ ಒಬ್ಬನ ಆಸ್ತಿ ಹೆಚ್ಚು! ಹೊಸ ದಾಖಲೆ ಮಾಡಿದ ಟೆಸ್ಲಾ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts