More

    ಹೊಸಪೇಟೆಯಲ್ಲಿ ಗಣಿ ಕಾರ್ಮಿಕರಿಗೆ ಮತದಾನ ಕುರಿತು ತಿಳಿವಳಿಕೆ

    ಹೊಸಪೇಟೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಮತದಾನ ಮಹತ್ವದ ಘಟ್ಟವಾಗಿದೆ. ಆದ್ದರಿಂದ ಆಮಿಷಕ್ಕೆ ಒಳಗಾಗಿ ನೋಟಿಗಾಗಿ ವೋಟು ಮಾರಿಕೊಳ್ಳಬಾರದು. ಸ್ವಯಂ ಪ್ರೇರಿತ ಮತ್ತು ಭಯಮುಕ್ತರಾಗಿ ಮತ ಚಲಾಯಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಬಿ.ಸದಾಶಿವ ಪ್ರಭು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

    ಜಿಲ್ಲಾ ಸ್ವೀಪ್ ಸಮಿತಿಯಿಂದ ತಾಲೂಕಿನ ಕಾರಿಗನೂರು ಗ್ರಾಮದ ಆರ್‌ಬಿಎಸ್‌ಎಸ್‌ಎನ್ ಮೈನ್ಸ್‌ನಲ್ಲಿ ಬುಧವಾರ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಗಣಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.

    ಇದನ್ನೂ ಓದಿ: ಚುನಾವಣಾ ಕರ್ತವ್ಯ ನಿರ್ಲಕ್ಷ್ಯ; ಅಧಿಕಾರಿ ಅಮಾನತು

    ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಕೈಜೋಡಿಸಿ

    ಕಡ್ಡಾಯ ಮತದಾನದಲ್ಲಿ ಸ್ವಾಭಿಮಾನದಿಂದ ಪಾಲ್ಗೊಳ್ಳುವ ಧೃಡ ಸಂಕಲ್ಪ ಹೊಂದಿರಬೇಕು. ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಕೈಜೋಡಿಸಬೇಕು. ಮತದಾರರು ತಮ್ಮ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮ ಕಂಡು ಬಂದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದರು.

    ಆರ್‌ಬಿಎಸ್‌ಎಸ್‌ಎನ್ ಮೈನ್ಸ್‌ನ ವ್ಯವಸ್ಥಾಪಕ ಎಸ್.ಕೆ.ಸ್ವಾಮಿ ಮಾತನಾಡಿ, ಮತದಾನ ನಡೆಯುವ ದಿನ ಮೇ.10ರಂದು ಗಣಿ ಕಾರ್ಮಿಕರು ಕಡ್ಡಾಯ ಮತದಾನವನ್ನು ಮಾಡಬೇಕು. ಸಂಸ್ಥೆಯಿಂದ ವೇತನ ಸಹಿತ ರಜೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಇದೇ ವೇಳೆ ಗಣಿ ಕಾರ್ಮಿಕರಿಗೆ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts