More

  ಸಹಸ್ರಾರು ಮಕ್ಕಳ ಭವಿಷ್ಯ ಬೆಳಗಿದ ಗಾನಯೋಗಿ

  ಯಲಬುರ್ಗಾ: ಸಹಸ್ರಾರು ಸಂಖ್ಯೆಯ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿ ಅವರ ಭವಿಷ್ಯ ಬೆಳಗಿದ ಪುಟ್ಟರಾಜ ಗವಾಯಿಗಳ ಆದರ್ಶ ಎಲ್ಲರೂ ಮೈಗೂಡಿಸಿಕೊಳ್ಳಿ ಎಂದು ಕುದರಿಮೋತಿಯ ಶ್ರೀ ವಿಜಯ ಮಹಾಂತೇಶ್ವರ ಸ್ವಾಮೀಜಿ ಹೇಳಿದರು.

  ಇದನ್ನೂ ಓದಿ: ಈ ರಾಶಿಯವರಿಗಿಂದು ಅಧಿಕ ಪ್ರಮಾಣದಲ್ಲಿ ಜ್ಞಾನ ವೃದ್ಧಿಯಾಗಲಿದೆ: ನಿತ್ಯಭವಿಷ್ಯ

  ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಪಾರ್ವತಿ ಪರಮೇಶ್ವರ ದೇವಸ್ಥಾನ ಸೇವಾ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಪಂಡಿತ್ ಪುಟ್ಟರಾಜ ಗವಾಯಿಗಳ 13ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

  ಅಂಧ ಅನಾಥ ಮಕ್ಕಳಿಗೆ ಪುಟ್ಟರಾಜರು ಜೀವನಪೂರ್ತಿ ಸಂಗೀತ ಜ್ಞ್ಞಾನ ನೀಡಿದರು. ಅಂಥ ಪುಣ್ಯ ಪುರುಷರ ಸ್ಮರಣೆ ಅಗತ್ಯ. ಮಹಾತ್ಮರ ನೆನಪಿಗಾಗಿ ಸಮಾಜದಲ್ಲಿ ಸೇವಾ ಕಾರ್ಯಗಳು ನಡೆಯಬೇಕು ಎಂದರು.

  ಬೆಳಗಾವಿಯ ರಾಮದುರ್ಗದ ಮಾರುತೇಶ್ವರ ಭಜನಾ ಮಂಡಳಿ, ಕೊಪ್ಪಳದ ಟಣಕನಕಲ್ ಬಸವೇಶ್ವರ ಭಜನಾ ಮಂಡಳಿಯವರು ಭಜನಾ ಸೇವೆ ಸಲ್ಲಿಸಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಪುಟ್ಟರಾಜ ಗವಾಯಿಗಳ ಭಾವಚಿತ್ರ ಮೆರವಣಿಗೆ ನಡೆಯಿತು.

  ಗಣ್ಯರಾದ ಬಸವರಾಜ ಅಂಗಡಿ, ಗುರಪ್ಪ ಅಂಗಡಿ, ಶಿವರಡ್ಡಪ್ಪ, ರಾಯಣ್ಣ ಮಾಡ್ಲಿಗೇರ, ಕಳಕಪ್ಪ ದಿವಟರ, ನಿಂಗಪ್ಪ ಅಂಗಡಿ, ಶಂಕ್ರಪ್ಪ ಹೊಟ್ಟಿನ, ಎಸ್.ಎನ್.ಉಳ್ಳಾಗಡ್ಡಿ, ಕಲ್ಲಪ್ಪ ಹೊಟ್ಟಿನ, ಭರತರಡ್ಡಿ, ಕಲ್ಲಪ್ಪ ಗುರಿಕಾರ, ನಾಗರಾಜ ಪಟ್ಟೇದ, ಅಣ್ಣಾರಾವ್ ದೇಸಾಯಿ ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts