ಈ ರಾಶಿಯವರಿಗಿಂದು ಅಧಿಕ ಪ್ರಮಾಣದಲ್ಲಿ ಜ್ಞಾನ ವೃದ್ಧಿಯಾಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಆಸ್ತಿ ವಿಚಾರದಲ್ಲಿ ಶುಭ. ತೊಂದರೆ ದೂರವಾಗಲಿದೆ. ಬೆನ್ನು ಮತ್ತು ಹಲ್ಲುಗಳ ಸಮಸ್ಯೆ. ಖಾಸಗಿ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ:1

ವೃಷಭ: ಅಧಿಕ ಪ್ರಮಾಣದಲ್ಲಿ ನಿಮ್ಮಲ್ಲಿನ ಜ್ಞಾನ ವೃದ್ಧಿಯಾಗಲಿದೆ. ಪತ್ನಿಯಿಂದ ಸಹಕಾರ ದೊರೆಯುವುದು. ಗೃಹ ನಿರ್ವಣಕ್ಕೆ ಹಿನ್ನಡೆ. ಶುಭಸಂಖ್ಯೆ: 9

ಮಿಥುನ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಸಿಗುವುದು. ಹಿರಿಯರೊಂದಿಗೆ ವಾದ-ವಿವಾದ ಬೇಡ. ಚಿನ್ನ, ವಜ್ರ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ:3

ಕಟಕ: ವ್ಯಾಪಾರದಲ್ಲಿ ಮಂದಗತಿಯಲ್ಲಿ ಪ್ರಗತಿ. ಕೆಲಸ ಕಾರ್ಯಗಳಲ್ಲಿ ಎಚ್ಚರ ವಹಿಸುವುದು ಅಗತ್ಯ. ಮೋಸ ಹೋಗುವ ಸಂಭವವಿದೆ. ಶುಭಸಂಖ್ಯೆ: 7

ಸಿಂಹ: ಸುಖಮಯ ಜೀವನದ ಚಿಂತನೆ ನಡೆಸುವಿರಿ. ಮನೆಯಲ್ಲಿ ಶುಭಕಾರ್ಯ ನಡೆಯಲಿದೆ. ರಾಜಕೀಯ ಪ್ರವೇಶದ ಯೋಚನೆ. ಶುಭಸಂಖ್ಯೆ: 5

ಕನ್ಯಾ: ಅನಿರೀಕ್ಷಿತ ಖರ್ಚು ತಲೆದೋರಬಹುದು. ಮಹಿಳಾ ಉದ್ಯೋಗಿಗಳಿಗೆ ಧನ ಹಾನಿ. ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಸಾಧ್ಯತೆ. ಶುಭಸಂಖ್ಯೆ:7

ತುಲಾ: ವೈದ್ಯರಿಗೆ ಶುಭದಾಯಕವಾದ ದಿನ. ಮಾನಸಿಕ ಒತ್ತಡ ಕಾಡಬಹುದು. ಪಾಲುದಾರಿಕೆ ವ್ಯಾಪಾರದಲ್ಲಿ ನಿರೀಕ್ಷೆಯಂತೆ ಲಾಭವಿದೆ. ಶುಭಸಂಖ್ಯೆ:2

ವೃಶ್ಚಿಕ: ಯಾರಾದರೂ ನಿಮಗೆ ಮೋಸ ಮಾಡಬಹುದು, ಹುಷಾರು. ಧಾನ್ಯ ವ್ಯಾಪಾರದಲ್ಲಿ ಲಾಭ. ಬಡ್ತಿ. ರಫ್ತು ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 7

ಧನುಸ್ಸು: ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಹಣ ಕೈ ಸೇರುತ್ತದೆ. ವಿವಾದವೊಂದು ಎದುರಾಗಲಿದೆ, ಸಮಾಧಾನ ಚಿತ್ತರಾಗಿರಿ. ರಕ್ತದ ಸಮಸ್ಯೆ. ಶುಭಸಂಖ್ಯೆ:3

ಮಕರ: ವಿದೇಶ ಪ್ರಯಾಣ ಮಾಡುವ ಸಾಧ್ಯತೆ ದಟ್ಟವಾಗಿದೆ. ಮಕ್ಕಳಿಂದ ತೊಂದರೆ. ಆರ್ಥಿಕ ಚಿಂತೆ ಕಾಡೀತು. ಪತ್ನಿಗೆ ಮನೋವ್ಯಾಧಿ. ಶುಭಸಂಖ್ಯೆ:8

ಕುಂಭ: ವ್ಯಾಪಾರದಲ್ಲಿ ನಷ್ಟ. ಆಲಸ್ಯ ಮನೋಭಾವ ಒಳ್ಳೆಯದಲ್ಲ. ಅವಿವಾಹಿತರಿಗೆ ವಿವಾಹ ಯೋಗ. ಅನ್ಯ ಜನರಲ್ಲಿ ವೈಮನಸ್ಸು. ಶುಭಸಂಖ್ಯೆ:4

ಮೀನ: ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟ ಆಗುವುದು. ಗುರು ಹಿರಿಯರ ಆಶೀರ್ವಾದದಿಂದ ಕೆಲಸ ಸುಗಮ. ಸ್ನೇಹಿತನಿಗೆ ಬೇಸರ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net