More

    ಬಹುವರ್ಣದ ಅತಿಥಿಗಳು ಈ ಬಾರಿ ಬರಲೇ ಇಲ್ಲ!

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಕರಾವಳಿಯಲ್ಲಿ ಚುಮುಚುಮು ಚಳಿ ಆವರಿಸಿಕೊಳ್ಳುವ ವೇಳೆಗೆ ಅಳಿವೆ ಬಾಗಿಲು, ಅಲ್ಲಲ್ಲಿ ನದಿ, ಕೆರೆ, ಗದ್ದೆ ಪರಿಸರ, ಹಸಿರು ತೋಪುಗಳಲ್ಲಿ ವರ್ಷಂಪ್ರತಿ ಗೋಚರಿಸುವ ಬಹುವರ್ಣಗಳ ಅಲಂಕಾರ ಈ ಬಾರಿ ಕಾಣಲೇ ಇಲ್ಲ!
    ನುಣುಪಾದ ಮೈಮಾಟ, ಬಣ್ಣಬಣ್ಣದ ನಿಲುವಂಗಿ, ಕಿರೀಟ, ದಿರಿಸು ಧರಿಸಿ ಹಾಜರಾಗುತ್ತಿದ್ದ ದೇಶ ವಿದೇಶಗಳ ಪಕ್ಷಿಗಳ ಪರಿವಾರ ಈ ಋತುವಿನಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ.
    ಎರಡು ತಿಂಗಳು ವಿಳಂಬವಾಗಿ ಭೂಮಿಗೆ ಬಿದ್ದ ಮಳೆ, ಬಳಿಕ ಕಾಡಿದ ಅತಿವೃಷ್ಟಿ ಸಹಿತ ಈ ವರ್ಷದ ಹವಾಮಾನದ ಪೂರ್ಣ ವ್ಯತ್ಯಯ ಪಕ್ಷಿ ಸಂಕುಲವನ್ನೂ ಬಾಧಿಸಿರಬಹುದು. ಜತೆಗೆ ಕರಾವಳಿ ಭಾಗದಲ್ಲಿ ನಿರಂತರ ಹಸಿರು ನಾಶದ ಪ್ರಭಾವವೂ ಇದೆ ಎಂದು ತರ್ಕಿಸಿದ್ದಾರೆ ಹಿರಿಯ ಪಕ್ಷಿ ವೀಕ್ಷಕರು. ಸಾಮಾನ್ಯವಾಗಿ ವಲಸೆ ಹಕ್ಕಿಗಳು ಅಧಿಕವಾಗಿ ಆಗಮಿಸುವ ಡಿಸೆಂಬರ್‌ನಲ್ಲಿ ಈ ವರ್ಷ ಚಳಿಯೇ ಇರಲಿಲ್ಲ. ಬದಲಾಗಿ ಸೆಕೆ ಇತ್ತು. ಈಗ ಜನವರಿ ಕೊನೆಗಷ್ಟೇ ಮಧ್ಯರಾತ್ರಿ ಬಳಿಕ ಮುಂಜಾನೆ ತನಕ ಭೂಮಿ ಸ್ವಲ್ಪ ತಂಪಾಗುತ್ತಿದೆ.

    300 ಜಾತಿಯ ಪಕ್ಷಿಗಳಿದ್ದವು: ಕೆಂಜಾರಿನಲ್ಲಿ ಸಾಮಾನ್ಯವಾಗಿ ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ವಾರ್‌ಬ್ಲೆರ್ಸ್‌ (ಡಿಚ್ಟಚ್ಝಿಛ್ಟಿ) ತುಂಬಾ ಕಡಿಮೆಯಾಗಿದೆ. ವೇಡರ್ ಮತ್ತು ಅದನ್ನೇ ಬೇಟೆಯಾಡಿ ತಿನ್ನುವ ಗಿಡುಗ ಜಾತಿಯ ರ‌್ಯಾಪ್ಟರ್ (್ಕಠಿಟ್ಟ) ಕಡಿಮೆಯಾಗಿದೆ. ಇವುಗಳು ಸಾಮಾನ್ಯವಾಗಿ ಸೆಂಟ್ರಲ್ ಏಷ್ಯಾ, ರಷ್ಯಾ, ಯುರೋಪ್, ಚೈನಾದಿಂದ ವಲಸೆ ಬರುವ ಹಕ್ಕಿಗಳೆಂದು ಗುರುತಿಸಲಾಗಿದೆ.
    ನಾರ್ಥರ್ನ್ ಶೋವ್ಲೆರ್, ನಾರ್ಥರ್ನ್ ಪಿಂಟೈಲ್ , ಫೆರೊಜಿನಸ್ ಪೊಚಾರ್ಡ್, ಎರೋಶಿಯನ್ ವಿಜಿಯನ್ , ಕಾಮನ್ ಪೊಚಾರ್ಡ್ ಹಾಗೂ ಬೈಲನ್ಸ್ ಕ್ರೇಕ್, ಫೆರೊಜಿನಸ್ ಪೊಚಾರ್ಡ್, ಯುರೇಶಿಯನ್ ವಿಜಿಯನ್, ಕಾಮನ್ ಪೊಚಾರ್ಡ್ ಹಾಗೂ ಬೈಲನ್ಸ್ ಕ್ರೇಕ್ ಸಹಿತ ಸುಮಾರು 300 ಜಾತಿಯ ಪಕ್ಷಿಗಳನ್ನು ಇಲ್ಲಿ ಸ್ಥಳೀಯ ಹಿರಿಯ ಪಕ್ಷಿ ವೀಕ್ಷಕರು ಗುರುತಿಸಿದ್ದಾರೆ.
    ನೀರಿನಲ್ಲಿ ನಡೆದು ಆಹಾರ ಹುಡುಕುವ ಜಾತಿಯ ಹಕ್ಕಿಗಳು ಸಾಮಾನ್ಯವಾಗಿ ದಕ್ಷಿಣ ಕನ್ನಡದ ಕರಾವಳಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಇಲ್ಲಿನ ಗದ್ದೆ, ಅಳಿವೆ ಪ್ರದೇಶಗಳಲ್ಲಿ ಆಹಾರ ಹುಡುಕುತ್ತವೆ. ಮಾರ್ಚ್‌ನಲ್ಲಿ ಈ ಹಕ್ಕಿಗಳು ತಮ್ಮ ಮೂಲ ನೆಲಕ್ಕೆ ಮರಳುತ್ತವೆ.

    ಕುಂದಾಪುರಕ್ಕೆ ವಲಸೆ ?
    ಬಜಪೆ ಸಮೀಪದ ಕೆಂಜಾರು, ಪೊಳಲಿ, ಮಂಜಲ್ಪಾದೆ, ಮುಲ್ಕಿ ಚಿತ್ರಾಪು ಅಳಿವೆ ಪ್ರದೇಶಗಳು, ಕುಂದಾಪುರ, ಉಡುಪಿ ಕಡಲ ಕಿನಾರೆ ವಲಸೆ ಹಕ್ಕಿಗಳನ್ನು ಮುಖ್ಯವಾಗಿ ಆಕರ್ಷಿಸುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪಕ್ಷಿ ತಾಣಗಳು. ಇವುಗಳ ಪೈಕಿ ಕುಂದಾಪುರ ಹೊರತುಪಡಿಸಿದರೆ ಉಳಿದ ಎಲ್ಲ ಪ್ರದೇಶಗಳಲ್ಲಿ ಈ ಬಾರಿ ಪಕ್ಷಿಗಳ ಭೇಟಿ ತೀರಾ ಕಡಿಮೆ.

    ಈ ಬಾರಿ ಪಕ್ಷಿ ವೀಕ್ಷಣೆಯ ಸಂಭ್ರಮವೇ ಇಲ್ಲ. ಯಾಕೆಂದರೆ ಕರಾವಳಿ ಭಾಗದಲ್ಲಿ ವಲಸೆ ಹಕ್ಕಿಗಳು ಅಧಿಕ ಭೇಟಿ ನೀಡುತ್ತಿರುವ ಕೆಂಜಾರು, ಮಂಜಲ್ಪಾದೆ, ಮೂಲ್ಕಿ ಭಾಗಗಳಲ್ಲಿ ಹಕ್ಕಿಗಳು ಕಾಣಸಿಗುವುದು ತೀರಾ ವಿರಳವಾಗಿದೆ. ತಡವಾಗಿ ಬಂದು ದೀರ್ಘ ಕಾಲ ಆವರಿಸಿದ ಮಳೆ, ತಡವಾಗಿ ಕಾಣಿಸಿಕೊಂಡ ಚಳಿ ಯಂತಹ ಹವಾಮಾನ ವ್ಯತ್ಯಯಗಳು, ಹೆಚ್ಚುತ್ತಿರುವ ನಗರೀಕರಣ, ಜನರ ಓಡಾಟ ಕೂಡ ಕಾರಣ ಇರಬಹುದು.
    – ಅರ್ನಾಲ್ಡ್ ಗೋವಿಯಸ್, ಹಿರಿಯ ಪಕ್ಷಿ ವೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts