More

    ಕೊರೆಯುವ ಚಳಿಯಲ್ಲಿ ಆರೋಗ್ಯದ ಮೇಲಿರಲಿ ಗಮನ: ಇಲ್ಲಿವೆ ನಾಲ್ಕು ಉಪಯುಕ್ತ ಸಲಹೆಗಳು…

    ಪ್ರಕೃತಿಯ ನಿಯಮದಂತೆ ಕಾಲಗಳು ಉರಳುವುದು ಸಹಜ. ಆದರೆ ಮನುಷ್ಯ ಈ ಕಾಲಗಳಿಗೆ ಹೊಂದಿಕೊಳ್ಳಲು ಪರದಾಡುತ್ತಾನೆ. ಅದರಲ್ಲೂ ಚಳಿಗಾಲ ಬಂದರೆ ಸಾಕು ಶೀತ, ಕೆಮ್ಮುಗಳಂತಹ ಕಾಯಿಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಪ್ರಾಚೀನ ಕಾಲದಿಂದ ಬಂದಿರುವ ಆಯುರ್ವೇದ ಗಿಡಮೂಲಿಕೆಗಳ ಚಿಕ್ಸಿತೆಗಳು ಉತ್ತಮ ಪರಿಹಾರವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮತ್ತು ದೇಹವನ್ನು ಸರಿಯಾದ ರೀತಿಯಲ್ಲಿ ಪೋಷಿಸುವ ಕಾಲ ಚಳಿಗಾಲವಾಗಿದೆ. ಹಾಗಾದರೆ ಚಳಿಗಾಲದಲ್ಲಿ ಯಾವ ರೀತಿಯಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಕೆಲವು ಸಲಹೆಗಳು ಇಲ್ಲಿವೆ.

    ನೀರು
    ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿ ಬೇಕಿರುವುದು ನೀರು. ಆದರೆ ಚಳಿಗಾಲ ಬಂತೆಂದರೆ ಸಾಕು ನೀರಿನ ಸೇವನೆಯನ್ನು ಬಹುತೇಕರು ಕಡಿಮೆ ಮಾಡುತ್ತಾರೆ. ಆದರೆ, ಇದು ತಪ್ಪು. ಚಳಿಗಾಲ ಅಂತ ನೀರು ಕುಡಿಯುವುದನ್ನು ಕಡಿಮೆ ಮಾಡಬೇಡಿ. ಎಂದಿನಂತೆಯೇ ಅಗತ್ಯ ಪ್ರಮಾಣದಲ್ಲಿ ನೀರು ಸೇವನೆ ಮಾಡಬೇಕು. ನೀರನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ನಮ್ಮ ದೇಹದ ಜೀವಕೋಶಗಳಿಗೆ ಪೋಷಕಾಂಶವನ್ನು ಒದಗಿಸಿ, ದೇಹವನ್ನು ಸಮತೋಲನವಾಗಿಡಲು ನೇರವಾಗುತ್ತದೆ.

    ಆಹಾರ ಸೇವನೆ
    ಚಳಿಗಾಲದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು. ಕ್ಯಾರೆಟ್​ನಲ್ಲಿರುವ ಬಿಟಾ ಕೆರೋಟಿನ್ ‘ವಿಟಮಿನ್​ ಎ’ನ ಅತ್ಯುತ್ತಮ ಮೂಲ​ವಾಗಿದೆ. ಇದರೊಂದಿಗೆ ತಾಜಾ ತರಕಾರಿಗಳು ಮತ್ತು ಹಣ್ಣುಗಳು/ಒಣ ಹಣ್ಣುಗಳು, ಡೈರಿ ಉತ್ಪನ್ನಗಳು, ಬೀಜಗಳು/ಎಣ್ಣೆಕಾಳುಗಳು, ಧಾನ್ಯಗಳು/ದ್ವಿದಳ ಧಾನ್ಯಗಳು ಮತ್ತು ತುಪ್ಪಗಳು ಸೇರಿವೆ. ಇದಲ್ಲದೆ ಕೆಲವು ಮಸಾಲೆಗಳು ಪದಾರ್ಥಗಳು ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಅವು ನಮ್ಮನ್ನು ಶೀತಗಳು ಮತ್ತು ಸೋಂಕಿನಿಂದ ರಕ್ಷಿಸುತ್ತವೆ.

    ಯೋಗ, ಧ್ಯಾನ, ವ್ಯಾಯಾಮ
    ಚಳಿಗಾಲದಲ್ಲಿ ಬಹುತೇಕರು ಬೇಗ ಎದ್ದೇಳುವುದಿಲ್ಲ. ಚಳಿಗೆ ಒಂದೆರೆಡು ಗಂಟೆ ಹೆಚ್ಚು ಮಲಗಲು ಬಯಸುತ್ತಾರೆ. ಬಹುತೇಕರು ಎದ್ದು, ರೆಡಿಯಾಗಿ ಕೆಲಸಕ್ಕೆ ಹೋಗುತ್ತಾರೆ. ಕೊಂಚವೂ ಕೂಡ ವ್ಯಾಯಾಮ, ಯೋಗವನ್ನು ಮಾಡುವುದಿಲ್ಲ. ಆದರೆ, ಚಳಿಗಾಲದಲ್ಲಿ ಇದು ಒಳ್ಳೆಯ ಅಭ್ಯಾಸವಲ್ಲ. ಮೈಚಳಿಯನ್ನು ಬಿಟ್ಟು ಯೋಗ-ಧ್ಯಾನ ಹಾಗೂ ವ್ಯಾಯಾಮವನ್ನು ಕಡ್ಡಾಯವಾಗಿ ಮಾಡಬೇಕು. ಇದರಿಂದ ನಮ್ಮ ಬೆಚ್ಚಗಿರುತ್ತದೆ ಮತ್ತು ಶೀತ ಹಾಗೂ ಕೆಮ್ಮಗಳ ವಿರುದ್ಧ ಇದು ಹೋರಾಡುತ್ತದೆ.

    ಸೌಂದರ್ಯದ ಬಗ್ಗೆ ಗಮನವಿರಲಿ
    ಚಳಿಗಾಲದಲ್ಲಿ ಚರ್ಮ ಡ್ರೈ ಆಗುವಂತೆ ಮಾಡುತ್ತಿದೆ. ಇದರಿಂದ ಶೀತದಲ್ಲಿ ಒಡೆದ ತುಟಿಗಳು, ಹಿಮ್ಮಡಿ ಹಾಗೂ ಚರ್ಮವು ಒಣಗುತ್ತದೆ. ಇದರ ರಕ್ಷಣೆಗಾಗಿ ವಿವಿಧ ರೀತಿಯ ಕ್ರಿಮ್‌ಗಳಿಗೆ ಮೊರೆ ಹೊಗಲಾಗುತ್ತದೆ. ಆದರೆ, ನೀರಿನ ಪ್ರಮಾಣವನ್ನು ಕಡಿಮೆ ಮಾಡದೆ ನೀರನ್ನು ಹೆಚ್ಚಾಗಿ ಸೇವಿಸುವುದರಿಂದ ಸೌಂದರ್ಯವನ್ನು ಉಳಿಸಿಕೊಳ್ಳಬಹುದು. ನಮ್ಮನ್ನು ನಾವು ಹೈಡ್ರೇಟ್​ ಆಗಿ ಇರಿಸಿಕೊಳ್ಳಬೇಕು. ಉಗುರು ಬೆಚ್ಚನೆಯ ನೀರಿನಲ್ಲಿ ಮುಖವನ್ನು ತೊಳೆಯಬೇಕು. ಚೆನ್ನಾಗಿ ನಿದ್ರೆ ಮಾಡುವ ಮೂಲಕ ಚರ್ಮದ ಆರೋಗ್ಯವನ್ನು ರೀಚಾರ್ಜ್​ ಮಾಡಿಕೊಳ್ಳಬೇಕು ಹಾಗೂ ಎಣ್ಣೆಯುಕ್ತ ಮಾಯ್ಚರೈಸರ್ಸ್​ ಬಳಸುವ ಮೂಲಕ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.

    ಕಡಿಮೆ ಬೆಲೆಗೆ ದುಬೈ ಚಿನ್ನ ಕೊಡುವುದಾಗಿ ಸುಲಿಗೆ ಮಾಡಿದ್ದ ಐವರು ಜೈಲಿಗೆ

    ಜಾತಿ ಜನಗಣತಿಗೆ ಆರ್​ಎಸ್​ಎಸ್​ ವಿರೋಧ: ‘ಮಹಾ’ನಾಯಕರಿಗೆ ಸಂಘ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts