More

    ಶ್ರಮಿಕ್​ ಸ್ಪೆಶಲ್​ ರೈಲು ಸ್ಥಗಿತ; ಸ್ಫೋಟಿಸಿದ ವಲಸೆ ಕಾರ್ಮಿಕರ ಆಕ್ರೋಶ

    ಅಹಮದಾಬಾದ್​: ಬಿಹಾರ ಮತ್ತು ಉತ್ತರ ಪ್ರದೇಶಗಳಿಗೆ ತೆರಳುತ್ತಿದ್ದ ಶ್ರಮಿಕ್​ ಸ್ಪೆಶಲ್​ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಆಯಾ ರಾಜ್ಯ ಸರ್ಕಾರಗಳ ಮನವಿ ಮೇರೆಗೆ ಅಧಿಕಾರಿಗಳು ಕೈಗೊಂಡಿರುವ ಈ ನಿರ್ಧಾರ ವಲಸೆ ಕಾರ್ಮಿಕರನ್ನು ಕೆರಳಿಸಿದೆ.

    ಶ್ರಮಿಕ್​ ಸ್ಪೆಶಲ್​ ರೈಲು ಸ್ಥಗಿತ; ಸ್ಫೋಟಿಸಿದ ವಲಸೆ ಕಾರ್ಮಿಕರ ಆಕ್ರೋಶ

    ಗುಜರಾತ್​ನ ರಾಜ್​ಕೋಟ್​ ಬಳಿಯ ಶಾಪಾರ್​ ಕೈಗಾರಿಕಾ ಪ್ರದೇಶದಲ್ಲಿರುವ ವಲಸೆ ಕಾರ್ಮಿಕರು ದಾಂಧಲೆ ಎಬ್ಬಿಸಿ, ರಸ್ತೆ ಬದಿಗಳಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ಕಲ್ಲು ತೂರಿದ್ದಲ್ಲದೆ, ಅವುಗಳನ್ನು ಉರುಳಿಸಿ ಜಖಂಗೊಳಿಸಿದ್ದಾರೆ.

    ವಲಸೆ ಕಾರ್ಮಿಕರ ದಾಂಧಲೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್​ಕೋಟ್​ ಎಸ್​ಪಿ (ಗ್ರಾಮಾಂತರ) ಬಲರಾಮ್​ ಮೀನಾ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಅಪಹರಣಕಾರರಿಂದ ಮಗುವನ್ನು ರಕ್ಷಿಸಿದರೂ ಕರೊನಾ ತೆಕ್ಕೆಯಿಂದ ಕಾಪಾಡಲಾಗಲಿಲ್ಲ..!

    ಗಡಿಯಲ್ಲಿ ಗಲಾಟೆ: ದೂರ ದೂರದಿಂದ ಬಂದಿರುವ ತಮಗೆ ಉತ್ತರ ಪ್ರದೇಶಕ್ಕೆ ಪ್ರವೇಶಿಸದಂತೆ ಬ್ಯಾರಿಕೇಡ್​ಗಳನ್ನು ಅಳವಡಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಲಸೆ ಕಾರ್ಮಿಕರು, ಬ್ಯಾರಿಕೇಡ್​ಗಳನ್ನು ಮುರಿದು ಉತ್ತರ ಪ್ರದೇಶವನ್ನು ಪ್ರವೇಶಿಸಿದ್ದಾರೆ.
    ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಗಡಿ ರೇವಾ ಬಳಿಯ ಚಾಕ್​ಘಾಟ್​ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಪ್ರವೇಶಿಸದಂತೆ ತಡೆಗೋಡೆಗಳನ್ನು ನಿರ್ಮಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿದ್ದ ವಲಸೆ ಕಾರ್ಮಿಕರು ಅವನ್ನು ಮುರಿದು ಉತ್ತರ ಪ್ರದೇಶವನ್ನು ಪ್ರವೇಶಿಸಿದರು. ಅಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಮೂಕಪ್ರೇಕ್ಷಕರಾಗಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಲಾಕ್​ಡೌನ್​ ಕಾಲ ಮುಗೀತು, ಕರೊನಾ ಕಟ್ಟಿ ಹಾಕುತ್ತಾ ಕಂಟೇನ್​ಮೆಂಟ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts