More

    ಅಪಹರಣಕಾರರಿಂದ ಮಗುವನ್ನು ರಕ್ಷಿಸಿದರೂ ಕರೊನಾ ತೆಕ್ಕೆಯಿಂದ ಕಾಪಾಡಲಾಗಲಿಲ್ಲ..!

    ಹೈದರಾಬಾದ್: ಅಪಹರಣಕ್ಕೊಳಗಾದ ಮಗುವನ್ನು ರಕ್ಷಿಸಿದ್ದೇವೆ ಎಂದು ಪೊಲೀಸರು ಸಂತೋಷ ಪಟ್ಟಿದ್ದರು. ಆದರೆ, ಕಿಲ್ಲರ್​ ಕರೊನಾ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದನ್ನು ಅವರಿಂದಲೂ ತಡೆಯಲಾಗಲಿಲ್ಲ.
    ಈ ಮಹಾಮಾರಿ ಯಾವುದೇ ಭೇದಭಾವವಿಲ್ಲದೆ ಆಬಾಲ ವೃದ್ಧರಾದಿಯಾಗಿ ಎಲ್ಲರನ್ನೂ ಕಪಿಮುಷ್ಠಿಯಲ್ಲಿಟ್ಟುಕೊಳ್ಳುತ್ತಿದೆ.
    ಇತ್ತೀಚೆಗೆ ಮಗುವಿನ ಅಪಹರಣ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ ನಂತರ ರಕ್ಷಿಸಲ್ಪಟ್ಟ ಮಗುವನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಮಗುವಿಗೆ ಕರೊನಾವೈರಸ್ ಸೋಂಕಿರುವುದು ಪತ್ತೆಯಾಗಿದೆ.
    ಪ್ರಕರಣದ ಆರೋಪಿಗಳು ಹಾಗೂ ಕೆಲವು ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಕಳುಹಿಸಲಾಗಿದೆ,
    ಹೈದರಾಬಾದ್‌ನ ಚಾದರ್‌ಘಾಟ್ ಪ್ರದೇಶದಲ್ಲಿ ಒಂದೂವರೆ ವರ್ಷದ ಗಂಡು ಮಗು ಕಾಣೆಯಾಗಿದ್ದ ಕುರಿತು ಈ ವಾರದ ಆರಂಭದಲ್ಲಿ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ತಕ್ಷಣವೇ ಶೋಧ ಕಾರ್ಯ ನಡೆಸಿದ್ದರು. ಸಿಸಿಕ್ಯಾಮರಾ ದೃಶ್ಯಾವಳಿಗಳ ಸಹಾಯದಿಂದ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

    ಇದನ್ನೂ ಓದಿ: ಮಾಮಾ ಬಂದ್ರು…. ಬಿಎಸ್​ಎಫ್​ ಯೋಧರು ಎಚ್ಚರಿಸಿದ್ದು ಯಾರನ್ನು?
    ರಕ್ಷಿಸಲ್ಪಟ್ಟ ಮಗುವನ್ನು ಮೊದಲು ತಾಯಿ ವಶಕ್ಕೆ ನೀಡಲಾಯಿತಾದರೂ ಮಹಿಳೆ ಮದ್ಯವ್ಯಸನಿಯಾಗಿದ್ದರಿಂದ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಯಿತು.
    ಆನಂತರ ಮಗುವನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಮಗುವಿಗೆ ಕರೊನಾ ವೈರಸ್‌ ಸೋಂಕು ತಗುಲಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
    ಮಗು ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳು ಮತ್ತು ಮಗುವಿನ ತಾಯಿ ಮತ್ತು ಪೊಲೀಸ್ ಸಿಬ್ಬಂದಿ ಸೇರಿ ಹಲವರು ಕ್ವಾರಂಟೈನ್​​ ನಲ್ಲಿದ್ದಾರೆ ಎಂದು ಚಾದರ್‌ಘಾಟ್ ಠಾಣಾಧಿಕಾರಿ ಪೊಲಿಶೆಟ್ಟಿ ಸತೀಶ್ ತಿಳಿಸಿದ್ದಾರೆ.

    ಇದನ್ನೂ ಓದಿ:  ಎಲ್ಲಿದ್ದಾರೆ ಪಂಚೇನ್ ಲಾಮಾ? ಚೀನಾಗೆ ತಿವಿದ ಅಮೆರಿಕ 

    ಮಗುವಿನೊಂದಿಗೆ ನಿಕಟ ಸಂಪರ್ಕಕ್ಕೆ ಬಂದ ಇಬ್ಬರು ಗೃಹರಕ್ಷಕಿಯರನ್ನು ಸಹ ಕ್ವಾರಂಟೈನ್​​​​ಗೆ ಕಳುಹಿಸಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಸೋಂಕಿನ ಮೂಲವನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಪ್ರಸ್ತುತ ತೆಲಂಗಾಣದಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,509 ಕ್ಕೆ ತಲುಪಿದೆ. 

    ಹೃದಯಸ್ಪರ್ಶಿ ದೃಶ್ಯವೆಂದ ನೆಟ್ಟಿಗರು: ಅಂಥದ್ದೇನಿತ್ತು ಆ ವಿಡಿಯೋದಲ್ಲಿ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts