More

    ಎಲ್ಲಿದ್ದಾರೆ ಪಂಚೇನ್​ ಲಾಮಾ? ಚೀನಾಗೆ ತಿವಿದ ಅಮೆರಿಕ

    ವಾಷಿಂಗ್ಟನ್: ಕಿಲ್ಲರ್ ಕರೊನಾ ವೈರಸ್ ಹರಡುವಿಕೆಗೆ ಕಾರಣವಾಗಿರುವ ಚೀನಾ ವಿರುದ್ಧ ಕೆಂಡ ಕಾರುತ್ತಿರುವ ಅಮೆರಿಕ ಈಗ ಮತ್ತೊಂದು ಬಾಣ ಬಿಟ್ಟಿದೆ.
    1995ರಲ್ಲಿ ಚೀನಾ ಸೆರೆಹಿಡಿದಿದ್ದ, ಆರು ವರ್ಷದ ಬಾಲಕ 11ನೇ ಪಂಚೆನ್ ಲಾಮಾ ಅವರನ್ನು ಬಿಡುಗಡೆ ಮಾಡಬೇಕೆಂದು ಅಮೆರಿಕ ಚೀನಾಗೆ ಒತ್ತಾಯಿಸಿದೆ.
    ಟಿಬೆಟ್ ಧರ್ಮಗುರು ದಲೈ ಲಾಮಾ 1995ರ ಮೇ 14 ರಂದು ಆರು ವರ್ಷದ ಬಾಲಕ ಗೆಧುನ್ ಚೋಯ್ಕಿ ನೈಮಾ ಅವರನ್ನು 11ನೇ ಪಂಚೇನ್​ ಲಾಮಾ ಎಂದು ಘೋಷಿಸಿದ್ದರು. ದಲೈಲಾಮಾ ಬಳಿಕ ಟಿಬೇಟಿಯನ್ನರ 2 ನೇ ಅತ್ಯುಚ್ಛ ಧರ್ಮಗುರು ಎಂದೇ ಪಂಚೇನ್​ ಲಾಮಾ ಅವರನ್ನು ಗುರುತಿಸಲಾಗುತ್ತದೆ.

    ಇದನ್ನೂ ಓದಿ: ನೌಕಾಪಡೆಗೆ ಅತ್ಯಾಧುನಿಕ ಹೆಲಿಕಾಪ್ಟರ್: ಜಲಾಂತರ್ಗಾಮಿಗಳನ್ನು ಗುರುತಿಸಿ ದಾಳಿ ನಡೆಸುವ ಸಾಮರ್ಥ್ಯ
    ಈ ಘೋಷಣೆಯಾದ ಮೂರು ದಿನಗಳ ನಂತರ ಗೆದುನ್ ಚೋಯ್ಕಿ ನೈಮಾ ಅವರನ್ನು ಚೀನಾ ಸೆರೆ ಹಿಡಿದಿತ್ತು. ಅಂದಿನಿಂದ ಗೆಧುನ್ ನೈಮಾ ಇರುವಿಕೆ ಕುರಿತು ಚೀನಾ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಅವರೆಲ್ಲಿದ್ದಾರೆ ಎಂಬುದು ಯಾರಿಗೂ ಮಾಹಿತಿ ಇಲ್ಲದಂತಾಗಿದ್ದು, ನೈಮಾ ಎಲ್ಲಿದ್ದಾರೆ ಎಂಬುದನ್ನು ಜಗತ್ತಿಗೆ ತಿಳಿಸಬೇಕೆಂದು ಅಮೆರಿಕ ಚೀನಾಗೆ ಒತ್ತಾಯಿಸಿದೆ.
    ಟಿಬೆಟನ್ನರಿಗೆ ತಮ್ಮ ಧರ್ಮ ಗುರುವನ್ನು ಆಯ್ಕೆ ಮಾಡುವ ಸ್ವಾತಂತ್ರವಿದ್ದು, ನೈಮಾ ಎಲ್ಲಿದ್ದಾರೆ ಎಂದು ಜಗತ್ತಿಗೆ ತಿಳಿಸಬೇಕೆಂದು ಅಮೆರಿಕ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ರಾಯಭಾರಿ ಸ್ಯಾಮ್ ಬ್ರೌನ್​ಬ್ಯಾಕ್ ಚೀನಾಗೆ ಒತ್ತಾಯಿಸಿದ್ದಾರೆ.
    ಚೀನಾದ ಪಕ್ಷವೊಂದು ಮುಂದಿನ ದಲೈ ಲಾಮಾ ಅವರನ್ನು ಆಯ್ಕೆ ಮಾಡುವುದು ತನ್ನ ಹಕ್ಕು ಎಂದು ವಾದಿಸಿತ್ತು. ಈ ಹಿನ್ನೆಲೆಯಲ್ಲಿ ನೈಮಾ ಅವರ ನೇಮಕವನ್ನು ಅದು ವಿರೋಧಿಸುತ್ತಿದೆ.

    ಮಾಮಾ ಬಂದ್ರು…. ಬಿಎಸ್​ಎಫ್​ ಯೋಧರು ಎಚ್ಚರಿಸಿದ್ದು ಯಾರನ್ನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts