More

    ಹೃದಯಸ್ಪರ್ಶಿ ದೃಶ್ಯವೆಂದ ನೆಟ್ಟಿಗರು: ಅಂಥದ್ದೇನಿತ್ತು ಆ ವಿಡಿಯೋದಲ್ಲಿ?

    ನವದೆಹಲಿ: ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂದಿರುಗಲು ಕಾಲ್ನಡಿಗೆಯ ಮೂಲಕ ಹೊರಟಿರುವಾಗ ಅವರು ಎದುರಿಸುವ ದುಸ್ಥಿತಿಯನ್ನು ಬಿಂಬಿಸುವ ಅನೇಕ ಹೃದಯ ವಿದ್ರಾವಕ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿವೆ.
    ಊರು ಸೇರುವ ಧಾವಂತದಲ್ಲಿ 160 ಕಿ. ಮೀ. ಕಾಲ್ನಡಿಗೆಯ ಮೂಲಕವೇ ಸಾಗಿದ ತುಂಬು ಗರ್ಭಿಣಿಯೋರ್ವಳ ಸುದ್ದಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

    ಇದನ್ನೂ ಓದಿ: 556 ಸಿವಿಲ್ ಪಿಎಸ್​ಐ ಹುದ್ದೆ ಭರ್ತಿಗೆ ಮುಂದಾದ ರಾಜ್ಯ ಸರ್ಕಾರ
    ಇದೀಗ, ಊರು ಸೇರುವ ತವಕದಲ್ಲಿ ಬರಿಗಾಲಿನ ನೋವನ್ನೂ ಲೆಕ್ಕಿಸದೆ, ಕೈಯಲ್ಲಿ ಕಂದಮ್ಮನನ್ನು ಹೊತ್ತು ಮುನ್ನಡೆಯುತ್ತಿರುವ ವಲಸೆ ಕಾರ್ಮಿಕನೊಬ್ಬನಿಗೆ ತಮ್ಮ ಬೂಟು ನೀಡಿ ಔದಾರ್ಯ ಮೆರೆದಿದ್ದಾರೆ ಒಬ್ಬ ಪತ್ರಕರ್ತ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ.
    ಸುದ್ದಿಸಂಸ್ಥೆಯೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ವಿಡಿಯೋದಲ್ಲಿ ಪತ್ರಕರ್ತ ಸಲ್ಮಾನ್ ರವಿ ಪಂಜಾಬ್​ನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆಯಿಂದ ಹೊರಟಿರುವ ವಲಸೆ ಕಾರ್ಮಿಕರ ಗುಂಪನ್ನು ಸಂದರ್ಶಿಸುತ್ತಿದ್ದಾರೆ. ಬರಿಗಾಲಿನಲ್ಲಿ ನಡೆಯುತ್ತಿರುವ ಅವರಲ್ಲಿ ಒಬ್ಬರಿಗೆ ರವಿ ತಮ್ಮ ಬೂಟುಗಳನ್ನು ತೆಗೆದು ಅವುಗಳನ್ನು ಹಾಕಿಕೊಳ್ಳಲು ಕೇಳಿಕೊಂಡಿದ್ದಾರೆ. ಈ ದೃಶ್ಯ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. 

    ಇದನ್ನೂ ಓದಿ: ಥ್ಯಾಂಕ್ಯೂ ಟ್ರಂಪ್ ಎಂದು ಮೋದಿ ಹೇಳಿದ್ದೇಕೆ?
    ವಿಡಿಯೋದಲ್ಲಿ ಕಾರ್ಮಿಕರು ಆರು ದಿನಗಳಿಂದ ನಡೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ರಾಜ್ಯದ ಗಡಿ ದಾಟಲು ಪ್ರಯತ್ನಿಸುತ್ತಿರುವಾಗ ಪೊಲೀಸರು ಅವರನ್ನು ಥಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ. 

    ಮಾಮಾ ಬಂದ್ರು…. ಬಿಎಸ್​ಎಫ್​ ಯೋಧರು ಎಚ್ಚರಿಸಿದ್ದು ಯಾರನ್ನು?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts