More

    556 ಸಿವಿಲ್ ಪಿಎಸ್​ಐ ಹುದ್ದೆ ಭರ್ತಿಗೆ ಮುಂದಾದ ರಾಜ್ಯ ಸರ್ಕಾರ

    ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್​ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರು ಒಳಗೊಂಡಂತೆ ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
    ಹುದ್ದೆಗಳ ವಿವರ ಇಂತಿದೆ:
    ಒಟ್ಟು 556 (125 ಕಲ್ಯಾಣ -ಕರ್ನಾಟಕ ಹುದ್ದೆ ಸೇರಿ)
    ಪೊಲೀಸ್ ಸಬ್ ಇನ್ಸ್​ಪೆಕ್ಟರ್ (ಸಿವಿಲ್) ಪುರುಷ- 278 , ಮಹಿಳಾ ಪೊಲೀಸ್ ಸಬ್ ಇನ್ಸ್​ಪೆಕ್ಟರ್ (ಸಿವಿಲ್) – 91, ಪೊಲೀಸ್ ಸಬ್ ಇನ್ಸ್​ಪೆಕ್ಟರ್ (ಸಿವಿಲ್ ) (ಪುರುಷ) ಸೇವೆಯಲ್ಲಿರುವವರಿಗೆ – 46 ಹಾಗೂ ಪೊಲೀಸ್ ಸಬ್ ಇನ್ಸ್​ಪೆಕ್ಟರ್ (ಸಿವಿಲ್) (ಮಹಿಳಾ) ಸೇವೆಯಲ್ಲಿರುವವರಿಗೆ- 16 ಹುದ್ದೆಗಳಿವೆ.
    ಕಲ್ಯಾಣ – ಕರ್ನಾಟಕ ಪ್ರದೇಶದ ಪೊಲೀಸ್ ಸಬ್ ಇನ್​ಸ್ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ ಹಾಗೂ ಸೇವೆಯಲ್ಲಿರುವವರು) (ಸ್ಥಳೀಯ ಮತ್ತು ಪರಸ್ಥಳೀಯ) ಖಾಲಿ ಹುದ್ದೆಗಳ ವಿವರ ಇಂತಿದೆ-
    ಪೊಲೀಸ್ ಸಬ್ ಇನ್​​ಸ್ಪೆಕ್ಟರ್ (ಸಿವಿಲ್) ಪುರುಷ (ಸ್ಥಳೀಯ)- 68
    ಮಹಿಳಾ ಪೊಲೀಸ್ ಸಬ್ಇನ್​ಸ್ಪೆಕ್ಟರ್ (ಸಿವಿಲ್) (ಸ್ಥಳೀಯ)- 26,
    ಪೊಲೀಸ್ ಸಬ್ಇನ್​ಸ್ಪೆಕ್ಟರ್ (ಸಿವಿಲ್) (ಪುರುಷ) ಸೇವೆಯಲ್ಲಿರುವವರಿಗೆ (ಸ್ಥಳೀಯ) – 12,
    ಪೊಲೀಸ್ ಸಬ್ಇನ್​ಸ್ಪೆಕ್ಟರ್ (ಸಿವಿಲ್) (ಮಹಿಳಾ) ಸೇವೆಯಲ್ಲಿರುವವರಿಗೆ (ಸ್ಥಳೀಯ) – 03,
    ಪೊಲೀಸ್ ಸಬ್ ಇನ್​​ಸ್ಪೆಕ್ಟರ್ (ಸಿವಿಲ್) ಪುರುಷ (ಪರಸ್ಥಳೀಯ)- 10,
    ಮಹಿಳಾ ಪೊಲೀಸ್ ಸಬ್ಇನ್​ಸ್ಪೆಕ್ಟರ್ (ಸಿವಿಲ್) (ಪರ ಸ್ಥಳೀಯ)- 04,
    ಪೊಲೀಸ್ ಸಬ್ ಇನ್​​ಸ್ಪೆಕ್ಟರ್ (ಸಿವಿಲ್) (ಪುರುಷ) ಸೇವೆಯಲ್ಲಿರುವವರಿಗೆ (ಪರಸ್ಥಳೀಯ)- 02 ಸೇರಿ ಒಟ್ಟು 125 ಹುದ್ದೆಗಳಿವೆ.

    ಇದನ್ನೂ ಓದಿ: ಥ್ಯಾಂಕ್ಯೂ ಟ್ರಂಪ್ ಎಂದು ಮೋದಿ ಹೇಳಿದ್ದೇಕೆ?
    ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ / ತತ್ಸಮಾನ ಶಿಕ್ಷಣ ಪೂರೈಸಿರಬೇಕು. ಸೇವಾ ನಿರತ ಅಭ್ಯರ್ಥಿಗಳು ಅಂಗೀಕೃತ ವಿವಿಯಿಂದ ಪದವಿ / ತತ್ಸಮಾನ ಜತೆಗೆ ಪೊಲೀಸ್ ಇಲಾಖೆಯ ಯಾವುದೇ ವೃಂದದಲ್ಲಿ 5 ವರ್ಷ ಕನಿಷ್ಠ ಸೇವೆಯನ್ನು ಸಹಾಯಕ ಪೊಲೀಸ್ ಸಬ್ ಇನ್ಸ್​​ಪೆಕ್ಟರ್ / ಹೆಡ್ ಕಾನ್​​ಸ್ಟೆಬಲ್/ ಪೊಲೀಸ್ ಕಾನ್​​ಸ್ಟೆಬಲ್ ಆಗಿ ಪೂರ್ಣ ಗೊಳಿಸಿರಬೇಕು ಹಾಗೂ ಸದ್ಯ ಪೊಲೀಸ್ ಇಲಾಖೆಯಲ್ಲಿ ಮೇಲಿನ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರಬೇಕು.
    2020ರ ಜೂನ್ 30 ಕ್ಕೆ ಅನ್ವಯಿಸುವಂತೆ ಕನಿಷ್ಠ 21 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಗರಿಷ್ಠ ವಯೋಮಿತಿ ಎಸ್​ಸಿ, ಎಸ್​ಟಿ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ ಹಾಗೂ ಇತರ ಅಭ್ಯರ್ಥಿಗಳಿಗೆ 28 ವರ್ಷ ಹಾಗೂ ಸೇವಾ ನಿರತ ಎಸ್​ಸಿ, ಎಸ್​ಟಿ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಹಾಗೂ ಇತರ ಅಭ್ಯರ್ಥಿಗಳಿಗೆ 35 ವರ್ಷ ನಿಗದಿಪಡಿಸಲಾಗಿದೆ.

    ಇದನ್ನೂ ಓದಿ: ಮಾಮಾ ಬಂದ್ರು…. ಬಿಎಸ್​ಎಫ್​ ಯೋಧರು ಎಚ್ಚರಿಸಿದ್ದು ಯಾರನ್ನು?

    ವೇತನಶ್ರೇಣಿ 37900 ರೂ. ದಿಂದ 70850 ರೂ. ಇರುತ್ತದೆ.
    ನೇಮಕಾತಿ ಪ್ರಕ್ರಿಯೆಯಲ್ಲಿ ಸಹಿಷ್ಣುತೆ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಇರುತ್ತದೆ. ಈ ಹಿಂದೆ 10 ಅಂಕಗಳಿಗೆ ನಡೆಸಲಾಗುತ್ತಿದ್ದ ಸಂದರ್ಶನವನ್ನು ಈ ಸಲ ರದ್ದುಪಡಿಸಲಾಗಿದೆ.
    ಜೂನ್ 1 ರಿಂದ ಜೂನ್ 30ರ ಸಂಜೆ 6 ಗಂಟೆ ವರೆಗೆ www.ksp.gov.in ನಲ್ಲಿ ಆನ್​ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ. ಜುಲೈ 2ರ ವರೆಗೆ ಶುಲ್ಕ ಪಾವತಿಸಬಹುದು.
    ಹೆಚ್ಚಿನ ಮಾಹಿತಿಗೆ ಅದೇ ವೆಬ್​ಸೈಟ್ ನೋಡಬಹುದು. 

    ಲಡಾಖ್​ ಹೊಯ್​ಕೈ ಬಳಿಕ ಭಾರತದ ವಿರುದ್ಧ ನೇಪಾಳವನ್ನು ಎತ್ತಿಕಟ್ಟುತ್ತಿರುವ ಚೀನಾ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts