More

    ರೈಲಿನ ಟಾಯ್ಲೆಟ್​ನಲ್ಲಿ ವಲಸೆ ಕಾರ್ಮಿಕನ ಮೃತದೇಹ ಪತ್ತೆ

    ಝಾನ್ಸಿ: 38 ವರ್ಷ ವಯಸ್ಸಿನ ವಲಸೆ ಕಾರ್ಮಿಕರೊಬ್ಬರ ಮೃತದೇಹವು ಉತ್ತರ ಪ್ರದೇಶದ ಝಾನ್ಸಿ ರೈಲ್ವೆ ನಿಲ್ದಾಣ ರೈಲೊಂದರ ಟಾಯ್ಲೆಟ್​​ನಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ. ಮೂರು ದಿನಗಳವರೆಗೆ ಮೃತದೇಹ ರೈಲಿನಲ್ಲೇ ಇತ್ತು ಎನ್ನಲಾಗಿದ್ದು, ರೈಲು ಶುಚಿಗೊಳಿಸುವ ಸಿಬ್ಬಂದಿಯಿಂದ ಪ್ರಕರಣ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: 2ನೇ ಮದುವೆಯನ್ನು ಪ್ರಶ್ನಿಸಿದ ಪತ್ನಿ-ಮಗಳನ್ನೇ ಹಿಗ್ಗಾಮುಗ್ಗಾ ಥಳಿಸಿದ ಭೂಪ!

    ಮೃತ ವ್ಯಕ್ತಿಯನ್ನು ಪೂರ್ವ ಉತ್ತರ ಪ್ರದೇಶದ ಬಾಸ್ತಿ ಜಿಲ್ಲೆಯ ನಿವಾಸಿ ಮೋಹನ್ ಲಾಲ್​ ಶರ್ಮ ಎಂದು ಗುರುತಿಸಲಾಗಿದೆ. ಮುಂಬೈ ದಿನಗೂಲಿ ನೌಕರನಾಗಿದ್ದ ಶರ್ಮ ಲಾಕ್​ಡೌನ್​ನಿಂದ ಕೆಲಸವಿಲ್ಲದೇ ಮುಂಬೈ ತೊರೆದಿದ್ದ ಎಂದು ತಿಳಿದುಬಂದಿದೆ.

    ಇತರೆ ಕಾರ್ಮಿಕರೊಂದಿಗೆ ಬಾಸ್ತಿಯಿಂದ 70 ಕಿ.ಮೀ ದೂರದಲ್ಲಿರುವ ಗೋರಖ್​ಪುರ ತಲುಪಲು ಜಿಲ್ಲಾಡಳಿತ ಕಳಹಿಸಿದ್ದ ಟ್ರೈನ್​ನಲ್ಲಿ ತವರಿಗೆ ಮರಳುತ್ತಿದ್ದರು. ಗೋರಖ್​ಪುರವೇ ಅಂತಿಮ ನಿಲ್ದಾಣವಾಗಿತ್ತಾ ಎಂಬುದರ ಬಗ್ಗೆ ಇನ್ನು ಸ್ಪಷ್ಟವಿಲ್ಲ. ಶರ್ಮ ಮೇ 23ರಂದು ಹೇಗೋ ಝಾನ್ಸಿ ತಲುಪಿದ್ದ. ಮತ್ತೆ ಗೋರಖ್​ಪುರಕ್ಕೆ ಹೋಗಿದ್ದ ಟ್ರೈನ್ ಬುಧವಾರ​ ಮರಳಿ ಝಾನ್ಸಿಗೆ ಬಂದಿತ್ತು. ಗುರುವಾರ ಟ್ರೈನ್​ ಶುಚಿಗೊಳಿಸುವಾಗ ಶರ್ಮ ಮೃತದೇಹ ಪತ್ತೆಯಾಗಿದೆ.

    ಇದನ್ನೂ ಓದಿ: ಬಿಎಸ್​ವೈ ನಮ್ಮ ಸಿಎಂ ಅಷ್ಟೇ, ನನ್ನ ನಾಯಕರು ವಾಜಪೇಯಿ, ಪ್ರಧಾನಿ ಮೋದಿ: ಬಸನಗೌಡ ಪಾಟೀಲ್​ ಯತ್ನಾಳ್

    ಕೆಲಸವಿಲ್ಲದೇ ಆತ ಊರಿಗೆ ಮರಳುತ್ತಿದ್ದ ಎಂಬುದನ್ನು ಊರಿನ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ. ಶವವನ್ನು ಪರೀಕ್ಷೆ ನಡೆಸಿ ಕರೊನಾ ವೈರಸ್​ ಸೋಂಕು ಇಲ್ಲದಿರುವುದನ್ನು ದೃಢಪಡಿಸಿಕೊಂಡು ಶವವವನ್ನು ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿಂದ ಸುಮಾರು 20 ಲಕ್ಷ ವಲಸೆ ಕಾರ್ಮಿಕರು ವಾಪಸ್ಸಾಗಿದ್ದು, ಅವರ ಆರೋಗ್ಯ ತಪಾಸಣೆಯೇ ಒಂದು ಸವಾಗಿದೆ. (ಏಜೆನ್ಸೀಸ್​)

    ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳಲು ಬದ್ಧ: ಚೀನಾದ ಮೊದಲ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts