More

    ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳಲು ಬದ್ಧ: ಚೀನಾದ ಮೊದಲ ಪ್ರತಿಕ್ರಿಯೆ

    ಬೀಜಿಂಗ್​: ಲಡಾಖ್​ನ ವಾಸ್ತವ ಗಡಿರೇಖೆಯ ನಾಲ್ಕು ಕಡೆಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿ ಸದ್ಯ ಶಾಂತವಾಗಿದ್ದು ನಿಯಂತ್ರಣದಲ್ಲಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಹೇಳಿದೆ. ಬಿಕ್ಕಟ್ಟು ಆರಂಭವಾದ ಬಳಿಕ ಆ ಬಗ್ಗೆ ಬಂದ ಚೀನಾದ ರಕ್ಷಣಾ ಸಚಿವಾಲಯದ ಮೊದಲ ಪ್ರತಿಕ್ರಿಯೆ ಇದಾಗಿದೆ.

    ಸ್ಥಾಪಿತವಾದ ಸಂವಹನ ಮಾರ್ಗಗಳನ್ನು ಬಳಸಿಕೊಂಡು ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವ ಮಾರ್ಗೋಪಾಯಗಳು ಉಭಯ ರಾಷ್ಟ್ರಗಳಿಗೆ ಗೊತ್ತಿದೆ. ಈ ವಿಷಯವಾಗಿ ಯಾರೊಬ್ಬರ ನೆರವು ಉಭಯ ರಾಷ್ಟ್ರಗಳಿಗೆ ಬೇಕಾಗಿಲ್ಲ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ಸೀನಿಯರ್​ ಕರ್ನಲ್​ ರೆನ್​ ಗ್ಯುಯೊಕಿಯಾಂಗ್​ ಅಮೆರಿಕದ ಹೆಸರು ಪ್ರಸ್ತಾಪಿಸದೆ ಹೇಳಿದ್ದಾರೆ.

    ಚೀನಾ-ಭಾರತ ಗಡಿ ವಿಷಯವಾಗಿ ಚೀನಾದ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದ ವಾತಾವರಣ ಕಾಪಾಡಿಕೊಳ್ಳಲು ಚೀನಾದ ಯೋಧರು ಬದ್ಧರಾಗಿದ್ದಾರೆ ಎಂದು ಪುನರುಚ್ಚರಿಸಿದ್ದಾರೆ.

    ರೆನ್​ ಮಾತನ್ನು ಗಮನಿಸುವುದಾದರೆ, ಚೀನಾಕ್ಕೆ ಯುದ್ಧ ಬೇಡವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಅದು ಕೂಡ ಉತ್ಸುಕವಾಗಿರುವಂತೆ ತೋರುತ್ತದೆ.

    ಇದನ್ನೂ ಓದಿ: ಭಾರತದ ಮೇಲೆ ದಾಳಿಗೆ ಯುದ್ಧೋಪಕರಣಗಳೊಂದಿಗೆ ಸಜ್ಜಾಗಿದೆ ಚೀನಾ

    ಈಗಲಾದರೂ ತಿಳಿಯಿಲ್ಲ: ಏಷ್ಯಾ ಖಂಡದ ಬಲಿಷ್ಠ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಪರಸ್ಪರ ಗಡಿ ಹಂಚಿಕೊಳ್ಳುತ್ತವೆ ಎಂಬ ಸಂಗತಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಈಗಲಾದರೂ ತಿಳಿಯಿತಲ್ಲ ಎಂದು ಚೀನಾ ವ್ಯಂಗ್ಯವಾಡಿದೆ.

    ಚೀನಾದ ಸರ್ಕಾರಿ ಮುಖವಾಣಿ ಗ್ಲೋಬಲ್​ ಟೈಮ್ಸ್​ನಲ್ಲಿ ಪ್ರಕಟವಾಗಿರುವ ತಮ್ಮ ತಿಕ್ಕಾಟಗಳನ್ನು ಪರಿಹರಿಸಿಕೊಳ್ಳು ಭಾರತ ಮತ್ತು ಚೀನಾಕ್ಕೆ ಅಮೆರಿಕದ ನೆರವು ಬೇಕಾಗಿಲ್ಲ ಎಂಬ ಅರ್ಥದ ವರದಿಯನ್ನು ಪ್ರಕಟಿಸಿದ್ದು, ಅದರಲ್ಲಿ ಟ್ರಂಪ್​ ವಿರುದ್ಧ ವಾಗ್ದಾಳಿ ನಡೆಸಲಾಗಿದೆ.
    2020ರ ಆರಂಭದಲ್ಲಿ ಬಿಡುಗಡೆಯಾಗಿದ್ದ ವಾಷಿಂಗ್ಟನ್​ ಪೋಸ್ಟ್​​ನ ಇಬ್ಬರು ಪತ್ರಕರ್ತರು ಬರೆದಿರುವ ಎ ವೆರಿ ಸ್ಟೇಬಲ್​ ಜೀನಿಯಸ್​ ಎಂಬು ಪುಸ್ತಕದಲ್ಲಿ ಭಾರತ ಮತ್ತು ಚೀನಾ ಗಡಿ ಹಂಚಿಕೊಳ್ಳುತ್ತವೆ ಎಂಬ ಸಂಗತಿಯೇ ಡೊನಾಲ್ಡ್​ ಟ್ರಂಪ್​ಗೆ ತಿಳಿದಿಲ್ಲ ಎಂದು ಹೇಳಲಾಗಿತ್ತು. ಈ ವಿಷಯ ಕೇಳಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೇ ಹೌಹಾರಿದ್ದರು.

    ಬಿಕ್ಕಟ್ಟು ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆಗೆ ಚೀನಾದ ಮುಖಂಡರಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಚೀನಾದ ಸರ್ಕಾರಿ ಮುಖವಾಣಿ ಗ್ಲೋಬಲ್​ ಟೈಮ್ಸ್​ ಮಾತ್ರ, ಈ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಭಾರತ ಮತ್ತು ಚೀನಾ ಬಳಿ ದ್ವಿಪಕ್ಷೀಯ ಮಾರ್ಗಗಳಿವೆ. ಹಾಗಾಗಿ ಮಧ್ಯಸ್ಥಿಕೆ ವಹಿಸುತ್ತೇನೆ ಎಂದು ಬಂದು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಅಮೆರಿಕದಿಂದ ಉಭಯ ರಾಷ್ಟ್ರಗಳು ಅಂತರ ಕಾಯ್ದುಕೊಳ್ಳುವುದರಲ್ಲೇ ಜಾಣತನ ಅಡಗಿದೆ ಎಂದು ಹೇಳಿದೆ.

    2ನೇ ಮದುವೆಯನ್ನು ಪ್ರಶ್ನಿಸಿದ ಪತ್ನಿ-ಮಗಳನ್ನೇ ಹಿಗ್ಗಾಮುಗ್ಗಾ ಥಳಿಸಿದ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts