More

    ಬಿಹಾರದ ನಿತೀಶ್​ ಸರ್ಕಾರದಲ್ಲಿ ಮೊದಲ ವಿಕೆಟ್​ ಪತನ; ಎನ್​ಡಿಎಗೆ ಬಂತು ಸಂಕಷ್ಟ

    ಪಟನಾ: ಬಿಹಾರದಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್​ ಕುಮಾರ್​ ಅವರು ಪ್ರಮಾಣ ವಚನ ಸ್ವೀಕರಿಸಿ ಕೇವಲ ಮೂರು ದಿನಗಳು ಕಳೆದಿದೆ. ಅಷ್ಟರಲ್ಲೇ ಅವರ ಮೇಲೆ ದೊಡ್ಡ ಆರೋಪವೊಂದು ಕೇಳಿಬಂದಿದೆ. ಈಗಷ್ಟೇ ನಿರ್ಮಿಸಿದ್ದ ಹೊಸ ಸಾಮ್ರಾಜ್ಯದಲ್ಲೂ ಅಪಸ್ತುತಿ ಕೇಳಲಾರಂಭಿಸಿದೆ.

    ಇದನ್ನೂ ಓದಿ: ಸೆನ್ಸೆಕ್ಸ್ 580 ಅಂಶ ಕುಸಿತ, ನಿಫ್ಟಿ 12,800ಕ್ಕಿಂತ ಕೆಳಕ್ಕೆ..

    ನಿತೀಶ್​ ಕುಮಾರ್​ ಅವರ ಜತೆಗೆ ಅವರ ಸಚಿವ ಸಂಪುಟ ಸೇರುವ ಶಾಸಕರುಗಳೂ ಪ್ರಮಾಣ ವಚನ ಸ್ವೀಕರಿಸಿದ್ದರು. ಅದರಲ್ಲಿ ಮೇವಾಲಾಲ್​ ಚೌಧರಿ ಕೂಡ ಒಬ್ಬರು. ಆದರೆ ಅವರು ಶಿಕ್ಷಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂರೇ ದಿನದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ವಿರುದ್ಧ ಮೂರು ವರ್ಷಗಳ ಹಿಂದೆ ಕೇಳಿಬಂದಿದ್ದ ಆರೋಪವೊಂದರ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲಾಗಿದೆ.

    ಭಗಲ್ಪುರ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ಅಸಿಸ್ಟೆಂಟ್​ ಪ್ರೊಫೆಸರ್​ಗಳನ್ನು ನೇಮಕ ಮಾಡಲು ಮೇವಾಲಾಲ್​ ಅವರು ಲಂಚ ಸ್ವೀಕರಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. 2017ರಲ್ಲಿ ಈ ಆರೋಪ ಕೇಳಿಬಂದಿದ್ದು ಆ ಸಮಯದಲ್ಲಿ ಅವರನ್ನು ಜೆಡಿ(ಯು) ಪಕ್ಷದಿಂದ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಆದರೆ ಇದೀಗ ಅವರಿಗೆ ಪಕ್ಷ ಸಚಿವ ಸ್ಥಾನ ನೀಡಿದೆ. ಈ ಕುರಿತಾಗಿ ವಿರೋಧ ಪಕ್ಷಗಳು ಭಾರಿ ಆಕ್ರೋಶ ವ್ಯಕ್ತಪಡಿಸಿವೆ.

    ಇದನ್ನೂ ಓದಿ: ಲಂಚಗುಳಿತನ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 77ನೇ ಸ್ಥಾನ

    ನಿತೀಶ್​ ಕುಮಾರ್​ ಅವರ ಸರ್ಕಾರ ಕ್ರಿಮಿನಲ್​ಗಳನ್ನು ಸಾಕುತ್ತಿದೆ. ಅವರ ತಪ್ಪನ್ನು ಬಚ್ಚಿಡುತ್ತಿದೆ ಎಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಸಾಲು ಸಾಲು ದೂರು ಮಾಡಿದ್ದಾರೆ. ಅದೇ ಹಿನ್ನೆಲೆಯಲ್ಲಿ ಮೇವಾಲಾಲ್​ ಅವರು ರಾಜೀನಾಮೆ ಸಲ್ಲಿಸಿದ್ದಾರೆ. (ಏಜೆನ್ಸೀಸ್​)

    ಮನೆ ಮೇಲೆ ಈ ಕಲ್ಲು ಬಿದ್ದರೆ ನೀವೂ ರಾತ್ರೋರಾತ್ರಿ ಶ್ರೀಮಂತರಾಗಬಹುದು

    ಅತ್ಯಾಚಾರ ವಿರೋಧಿಸಿದ್ದಕ್ಕೆ ಮೂಗನ್ನೇ ಕತ್ತರಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts