More

    9ನೇ ಬಾರಿ ಮುಖ್ಯಮಂತ್ರಿ ಹುದ್ದೆಗೇರಿದ ನಿತೀಶ್‌ ಮಗನಿಗಿಂತ ಬಡವ, ಇವರ ನಿವ್ವಳ ಮೌಲ್ಯ ಎಷ್ಟು?

    ಪಾಟ್ನಾ: ಬಿಹಾರದಲ್ಲಿ ನಿತೀಶ್ ಕುಮಾರ್ ಒಂಬತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಗ ರಾಜ್ಯದಲ್ಲಿ ಎನ್‌ಡಿಎ ಸರ್ಕಾರವಿದೆ. ವಿಜಯ್ ಕುಮಾರ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ ಉಪ ಮುಖ್ಯಮಂತ್ರಿಗಳಾಗಿದ್ದಾರೆ. ಇವರೊಂದಿಗೆ ಸಂತೋಷ್ ಕುಮಾರ್ ಸುಮನ್ (ಸಂತೋಷ್ ಮಾಂಝಿ) ಸೇರಿದಂತೆ ಆರು ಮಂದಿ ಸಚಿವರೂ ಆಗಿದ್ದಾರೆ.

    ನಿತೀಶ್ ಕುಮಾರ್ ಬಳಿ ಕೋಟ್ಯಂತರ ರೂ.ಆಸ್ತಿಯಿರುವುದು ಎಲ್ಲರಿಗೂ ಗೊತ್ತಿದೆ. ಆದರೆ 2022 ರಲ್ಲಿ ಅವರು ತಮ್ಮ ಮಗನಿಗಿಂತ ಬಡವರು. ಹೌದು, 2022 ರ ವರದಿಯ ಪ್ರಕಾರ, ನಿತೀಶ್ ಮಗ ನಿಶಾಂತ್ ಕುಮಾರ್ ಅವರ ಸಂಪತ್ತು ನಿತೀಶ್ ಕುಮಾರ್ ಅವರಿಗಿಂತ ಐದು ಪಟ್ಟು ಹೆಚ್ಚು.
    ವರದಿಯ ಪ್ರಕಾರ, ಆ ಸಮಯದಲ್ಲಿ ನಿಶಾಂತ್ ಬಳಿ 16,549 ರೂಪಾಯಿ ನಗದು, 1.28 ಕೋಟಿ ರೂಪಾಯಿ (ಎಫ್‌ಡಿ) ಮತ್ತು ಬ್ಯಾಂಕ್‌ಗಳಲ್ಲಿ ಠೇವಣಿ ಇತ್ತು. 1.63 ಕೋಟಿ ಮೌಲ್ಯದ ಚರ ಆಸ್ತಿ ಹಾಗೂ 1.98 ಕೋಟಿ ಮೌಲ್ಯದ ಸ್ಥಿರಾಸ್ತಿಗಳಿದ್ದವು. ಪಾಟ್ನಾ ಮತ್ತು ನಳಂದಾದಲ್ಲಿ ವಸತಿ ಕಟ್ಟಡಗಳು ಮತ್ತು ಕೃಷಿ ಭೂಮಿಯನ್ನು ಹೊಂದಿದ್ದರು. ಈ ವರದಿ ಬಂದ ವರ್ಷದಲ್ಲಿ ನಿತೀಶ್ ಕುಮಾರ್ ಅವರ ಒಟ್ಟು ಆಸ್ತಿ 75.53 ಲಕ್ಷ ರೂ.

    ಮುಖ್ಯಮಂತ್ರಿ ನಿತೀಶ್ ಕುಮಾರ್ 1.64 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಇವರ ಬಳಿ 22,552 ರೂ.ನಗದು ಹಾಗೂ ಬ್ಯಾಂಕ್ ಖಾತೆಗಳಲ್ಲಿ 49,202 ರೂ. 11.32 ಲಕ್ಷ ಮೌಲ್ಯದ ಫೋರ್ಡ್ ಇಕೋಸ್ಪೋರ್ಟ್ ಕಾರು ಇದೆ. ಇದಲ್ಲದೇ 1.28 ಲಕ್ಷ ಮೌಲ್ಯದ ಎರಡು ಚಿನ್ನ ಹಾಗೂ ಒಂದು ಬೆಳ್ಳಿಯ ಉಂಗುರಗಳಿವೆ.

    ರಿಯಲ್ ಎಸ್ಟೇಟ್ ಹೆಸರಿನಲ್ಲಿ ನಿತೀಶ್ ಕುಮಾರ್ ಹೊಸದಿಲ್ಲಿಯ ದ್ವಾರಕಾದಲ್ಲಿ ಒಂದು ಅಪಾರ್ಟ್ ಮೆಂಟ್ ಹೊಂದಿದ್ದು, ಇದರ ಬೆಲೆ 1.48 ಕೋಟಿ ರೂ. 2004ರಲ್ಲಿ ಇದರ ಬೆಲೆ 13.78 ಲಕ್ಷ ರೂ. ನಿತೀಶ್ ಕುಮಾರ್ ಅವರ ಆಸ್ತಿ ವಿವರವನ್ನು ಕ್ಯಾಬಿನೆಟ್ ಸೆಕ್ರೆಟರಿಯೇಟ್ ಡಿಸೆಂಬರ್ 31 ರಂದು ಬಿಡುಗಡೆ ಮಾಡಿದೆ. ಆದರೆ, ಈ ಬಾರಿ ನಿತೀಶ್ ಕುಮಾರ್ ತಮ್ಮ ಪುತ್ರ ನಿಶಾಂತ್ ಆಸ್ತಿ ಬಗ್ಗೆ ಮಾಹಿತಿ ನೀಡಿಲ್ಲ.

    ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರತಿ ವರ್ಷ ತಮ್ಮ ಆಸ್ತಿ ವಿವರಗಳನ್ನು ನೀಡುತ್ತಾರೆ. ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಎಲ್ಲ ಸಚಿವರ ಆಸ್ತಿ ಮಾಹಿತಿಯನ್ನು ಸರ್ಕಾರಿ ವೆಬ್‌ಸೈಟ್‌ನಲ್ಲಿ ಸಾರ್ವಜನಿಕಗೊಳಿಸಲಾಗಿದೆ. ಡಿಸೆಂಬರ್ 31, 2023 ರಂದು, ಸಿಎಂ ನಿತೀಶ್ ಕುಮಾರ್ ಮತ್ತು ಅಂದಿನ ಸಚಿವರ ನಿವ್ವಳ ಮೌಲ್ಯದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. 

    ಒಂಬತ್ತನೇ ಬಾರಿಗೆ ಬಿಹಾರ ಸಿಎಂ ಆದ ನಿತೀಶ್, ಉಪ ಮುಖ್ಯಮಂತ್ರಿಗಳಾಗಿ ಸಾಮ್ರಾಟ್ ಮತ್ತು ವಿಜಯ್ ಪ್ರಮಾಣ ವಚನ

    ಭಯಪಡಬೇಡಿ, ನೆಮ್ಮದಿಯಿಂದ ಪರೀಕ್ಷೆ ಎದುರಿಸಿ: ವಿದ್ಯಾರ್ಥಿಗಳಿಗೆ ಬೋಧಿಸಿದ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts