More

    ಶಾಲು ಮರೆತು ಬಂದಿದ್ದರು! ಮತ್ತೆ NDAಗೆ ಹಾರಿದ ನಿತೀಶ್​ ಕುಮಾರ್ ಕಾಲೆಳೆದ ರಾಹುಲ್​ ಗಾಂಧಿ

    ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಬಿಹಾರ ಸಿಎಂ ನಿತೀಶ್​ ಕುಮಾರ್​ ಅವರು ಇಂಡಿಯಾ ಒಕ್ಕೂಟಕ್ಕೆ ಕೈಕೊಟ್ಟು ಮತ್ತೆ ಕೇಂದ್ರದ ಆಡಳಿತಾರೂಢ ಎನ್​ಡಿಎ ಒಕ್ಕೂಟ ಸೇರಿದ್ದಾರೆ. ಈ ಬಗ್ಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೊನೆಗೂ ಮೌನ ಮುರಿದಿದ್ದಾರೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್​ ಗಾಂಧಿ ಬಿಹಾರದ ಜಾತಿ ಗಣತಿಗೆ ಹೆದರಿ ನಿತೀಶ್​ ಅವರು ಇಂಡಿಯಾ ಒಕ್ಕೂಟ ತೊರೆದಿದ್ದಾರೆ ಎಂದು ತಿಳಿಸಿದರು.

    ನಿತೀಶ್ ಜೀ ಅವರು ಏಕೆ ಸಿಲುಕಿಕೊಂಡರು ಎಂಬುದನ್ನು ಅರ್ಥಮಾಡಿಕೊಳ್ಳಿ. ಬಿಹಾರದಲ್ಲಿ ಜಾತಿ ಗಣತಿ ಮಾಡಬೇಕೆಂದು ನಿತೀಶ್ ​ಜೀಗೆ ನಾನು ನೇರವಾಗಿ ಹೇಳಿದೆ. ಆರ್​ಜೆಡಿ ಜತೆ ನಾವು ಕೂಡ ಸಮೀಕ್ಷೆಗೆ ಒತ್ತಾಯಿಸಿದೆವು. ಆದರೆ, ಬಿಜೆಪಿ ಹೆದರಿತು ಮತ್ತು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿತು. ಜಾತಿಗಣತಿ ಬಳಿಕ ನಿತೀಶ್ ಜೀ ಸರಿಯಾಗಿ ಸಿಲುಕಿಕೊಂಡರು. ಈ ವೇಳೆ ಓಡಿಹೋಗಲು ಬಿಜೆಪಿ ಅವರಿಗೆ ಹಿಂಬಾಗಿಲನ್ನು ಒದಗಿಸಿತು. ನಿಮಗೆ ಎಲ್ಲ ರೀತಿಯ ಸಾಮಾಜಿಕ ನ್ಯಾಯವನ್ನು ನೀಡುವುದು ನಮ್ಮ ಮೈತ್ರಿಕೂಟದ ಜವಾಬ್ದಾರಿಯಾಗಿದೆ ಮತ್ತು ಅದಕ್ಕಾಗಿ ನಮಗೆ ನಿತೀಶ್ ಜಿ ಅಗತ್ಯವಿಲ್ಲ ಎಂದು ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದರು.

    ಅಂದಹಾಗೆ ಕಳೆದ ಭಾನುವಾರ ನಿತೀಶ್​ ಕುಮಾರ್​ ಅವರು 9ನೇ ಬಾರಿಗೆ ಬಿಹಾರದ ಸಿಎಂ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರುಗಳಾದ ಸಾಮ್ರಾಟ್​ ಚೌಧರಿ ಮತ್ತು ವಿಜಯ್​ ಸಿನ್ಹಾ ಉಪ ಮುಖ್ಯಮಂತ್ರಿಗಳಾ ಪ್ರಮಾಣ ವಚನ ಪಡೆದರು. ಎಲ್ಲವೂ ಸರಿಯಾಗಿಲ್ಲದ ಕಾರಣ ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ತಲೆದೋರಿದೆ ಎಂದು ನಿತೀಶ್ ಕುಮಾರ್ ಸಮರ್ಥನೆ ನೀಡಿದರು.

    ಆದರೆ, ನಿತೀಶ್​ ಕುಮಾರ್​ ಅವರು ತೀವ್ರ ಒತ್ತಡದ ಕಾರಣದಿಂದಾಗಿ ಯೂಟರ್ನ್​ ಹೊಡೆದಿದ್ದಾರೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ. ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲು ತೆರಳಿದ ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಲ್ಲಿಂದ ತೆರಳಿದರು. ತಮ್ಮ ಶಾಲನ್ನು ಮರೆತು ಬಂದಿರುವುದನ್ನು ಕಾರಿನಲ್ಲಿ ಮನಗಂಡು ಚಾಲಕನಿಗೆ ಹಿಂತಿರುಗಲು ಹೇಳುತ್ತಾರೆ ಮತ್ತು ರಾಜಭವನಕ್ಕೆ ಮತ್ತೆ ಆಗಮಿಸುತ್ತಾರೆ. ಇಷ್ಟ ಬೇಗ ಯಾಕೆ ವಾಪಸ್​ ಬಂದೆ ಎಂದು ರಾಜ್ಯಪಾಲರು ಅಚ್ಚರಿಯಿಂದ ಕೇಳಿದರು ಎಂದು ನಿತೀಶ್​ ಅವರ ನಡೆಯನ್ನು ರಾಹುಲ್​ ಗಾಂಧಿ ಟೀಕಿಸಿದರು.

    ಸ್ವಲ್ಪ ಒತ್ತಡದ ಕಾರಣದಿಂದಾಗಿ ನಿತೀಶ್​ ಅವರು ಯೂಟರ್ನ್ ಮಾಡಿದ್ದಾರೆ. ಅಷ್ಟಕ್ಕೂ ಈ ಒತ್ತಡ ಏಕೆ? ಏಕೆಂದರೆ, ನಮ್ಮ ಮೈತ್ರಿ ಕೂಟ ಜನರಿಗೆ ಮುಖ್ಯವಾದ ಸಮಸ್ಯೆಗಳನ್ನು ಎತ್ತುತ್ತಿದೆ ಎಂದು ರಾಹುಲ್​ ಹೇಳಿದರು. (ಏಜೆನ್ಸೀಸ್​)

    9ನೇ ಬಾರಿ ಮುಖ್ಯಮಂತ್ರಿ ಹುದ್ದೆಗೇರಿದ ನಿತೀಶ್‌ ಮಗನಿಗಿಂತ ಬಡವ, ಇವರ ನಿವ್ವಳ ಮೌಲ್ಯ ಎಷ್ಟು?

    ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಭರ್ಜರಿ ಗೆಲುವು: ನಿತೀಶ್​ಕುಮಾರ್​ಗೆ ಸವಾಲು ಹಾಕುತ್ತಲೇ ಭವಿಷ್ಯ ನುಡಿದ ಚುನಾವಣೆ ಚಾಣಕ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts