More

    ಲಂಚಗುಳಿತನ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 77ನೇ ಸ್ಥಾನ

    ನವದೆಹಲಿ: ಲಂಚುಗುಳಿತನದ ಅಪಾಯದ ಜಾಗತಿಕ ಪಟ್ಟಿಯಲ್ಲಿ ಭಾರತ 77ನೇ ಸ್ಥಾನದಲ್ಲಿದೆ. ಟ್ರೇಸ್​ (TRACE) ಎಂಬ ಭ್ರಷ್ಟಾಚಾರ ವಿರೋಧಿ ಮಾನದಂಡ ರೂಪಿಸುವ ಸಂಸ್ಥೆ ಪ್ರಕಟಿಸಿದ “ಬಿಜಿನೆಸ್ ಬ್ರೈಬರಿ ರಿಸ್ಕ್ಸ್ ಆಫ್​ 2020” ಪಟ್ಟಿ ಪ್ರಕಾರ, ಭಾರತದ ಸ್ಕೋರ್ 45 ಆಗಿದೆ. ಭಾರತ ಕಳೆದ ವರ್ಷದ ಪಟ್ಟಿಯಲ್ಲಿ 48 ಸ್ಕೋರ್​ನೊಂದಿಗೆ 78ನೇ ಸ್ಥಾನದಲ್ಲಿತ್ತು.

    ಈ ವರ್ಷದ ಡೇಟಾ ಪ್ರಕಾರ, 194 ರಾಷ್ಟ್ರಗಳ ಬಿಜಿನೆಸ್​ ಬ್ರೈಬರಿ ರಿಸ್ಕ್​ ಮಾಪನ ಮಾಡಲಾಗಿದೆ. ಈ ಪೈಕಿ ಉತ್ತರ ಕೊರಿಯಾ, ತುರ್ಕ್​ಮೆನಿಸ್ತಾನ್​, ಸೌತ್ ಸೂಡಾನ್​, ವೆನೆಜುವೆಲಾ, ಎರಿತ್ರಿಯಾ ಹೆಚ್ಚಿನ ವಾಣಿಜ್ಯ ಲಂಚಗುಳಿತನದ ಅಪಾಯವನ್ನು ಎದುರಿಸುತ್ತಿದೆ. ಇದೇ ವೇಳೆ, ಡೆನ್ಮಾರ್ಕ್​, ನಾರ್ವೆ, ಫಿನ್ಲೆಂಡ್, ಸ್ವೀಡನ್ ಮತ್ತು ನ್ಯೂಜಿಲೆಂಡ್​ಗಳಲ್ಲಿ ಈ ಪ್ರಮಾಣ ಕನಿಷ್ಠ ಮಟ್ಟದಲ್ಲಿದೆ.

    ಇದನ್ನೂ ಓದಿ: ಮತ್ಸ್ಯಪ್ರಿಯರಿಗೆ ಸಕತ್​ ಖುಷಿ ಸುದ್ದಿ: ತಾಜಾತಾಜಾ ಮೀನು ಇನ್ಮುಂದೆ ಆನ್​ಲೈನ್​ನಲ್ಲಿ!

    ಸರ್ಕಾರದ ಜತೆಗಿನ ವ್ಯಾಪಾರ ಸಂವಹನ, ಲಂಚಗುಳಿತನ ತಡೆ ಕ್ರಮ ಮತ್ತು ಅನುಷ್ಠಾನ, ಸರ್ಕಾರ ಮತ್ತು ನಾಗರಿಕ ಸೇವೆಗಳಲ್ಲಿ ಪಾರದರ್ಶಕತೆ, ಮಾಧ್ಯಮಗಳ ಪಾತ್ರವೂ ಸೇರಿ ನಾಗರಿಕ ಸಮಾಜದ ಮೇಲ್ವಿಚಾರಣಾ ಸಾಮರ್ಥ್ಯಗಳೆಂಬ ನಾಲ್ಕು ಅಂಶಗಳನ್ನು ಆಧರಿಸಿ ಸ್ಕೋರ್ ನೀಡಲಾಗಿದೆ. (ಏಜೆನ್ಸೀಸ್)

    ಮಾವೋವಾದಿ ಹಿತೈಷಿ ವರವರ ರಾವ್ ಜೈಲಿನಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts