More

    ಮಾವೋವಾದಿ ಹಿತೈಷಿ ವರವರ ರಾವ್ ಜೈಲಿನಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್

    ಮುಂಬೈ: ಮಾವೋವಾದಿ ಹಿತೈಷಿ ಕವಿ-ಆ್ಯಕ್ಟಿವಿಸ್ಟ್ ವರವರ ರಾವ್ ಅವರನ್ನು ಬಾಂಬೆ ಹೈಕೋರ್ಟ್ ನಿರ್ದೇಶನಾನುಸಾರ ಜೈಲಿನಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ವರವರ ರಾವ್ ಅವರನ್ನು ಎಲ್ಗಾರ್ ಪರಿಷದ್- ಮಾವೋವಾದಿ ಲಿಂಕ್ ಕಾರಣಕ್ಕೆ ಬಂಧಿಸಿ ರಾಯಗಡ ಜಿಲ್ಲೆಯ ತಾಲೋಜ ಜೈಲಿನಲ್ಲಿ ಇರಿಸಲಾಗಿತ್ತು.

    ಬಾಂಬೆ ಹೈಕೋರ್ಟ್ ನಿರ್ದೇಶನಾನುಸಾರ ವರವರ ರಾವ್ ಅವರನ್ನು ಬುಧವಾರ ರಾತ್ರಿಯೇ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 80 ವರ್ಷದ ಮಾವೋವಾದಿ ಹಿತೈಷಿ ವರವರ ರಾವ್​ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಹದಿನೈದು ದಿನಗಳ ಕಾಲ ಚಿಕಿತ್ಸೆಗೆ ದಾಖಲಿಸಲಾಗಿದೆ. ರಾವ್​ ಬಹುತೇಕ ಮರಣಶಯ್ಯೆಯಲ್ಲಿದ್ದಾರೆ ಎಂದು ಅವರ ಪರ ವಕೀಲರು ಹೈಕೋರ್ಟ್​ಗೆ ತಿಳಿಸಿದ್ದರು. ಇದನ್ನು ಆಧರಿಸಿ ಕೋರ್ಟ್ ಈ ನಿರ್ದೇಶನ ನೀಡಿದೆ.

    ಇದನ್ನೂ ಓದಿ: ಮದ್ವೆಯಾಗಲು ‘ಎಸ್’​ ಹುಡುಗೀನ್ನ ಹುಡುಕುತ್ತಿದ್ದಾನೀತ- ಮೂರು ಹೆಂಡ್ತಿಯರೂ ನೀಡ್ತಿದ್ದಾರೆ ಸಾಥ್​!

    ಆಸ್ಪತ್ರೆಯಿಂದ ವರವರ ರಾವ್ ಅವರನ್ನು ಕೋರ್ಟ್ ಅನುಮತಿ ಇಲ್ಲದೇ ಡಿಸ್​ಚಾರ್ಜ್ ಮಾಡಿಸುವಂತಿಲ್ಲ. ಆಸ್ಪತ್ರೆಯಲ್ಲಿ ವರವರ ರಾವ್ ಅವರ ಕುಟುಂಬ ಸದಸ್ಯರ ಭೇಟಿಗೆ ಅವಕಾಶ ನೀಡಬೇಕು ಎಂದು ನ್ಯಾಯಮೂರ್ತಿ ಎಸ್​.ಎಸ್.ಶಿಂಧೆ ಮತ್ತು ಮಾಧವ ಜಾಮ್ದಾರ್ ಅವರನ್ನು ಒಳಗೊಂಡ ನ್ಯಾಯಪೀಠ ಜೈಲು ಅಧಿಕಾರಿಗಳಿಗೆ ಸೂಚಿಸಿದೆ. . ಮುಂದಿನ ವಿಚಾರಣೆ ಡಿಸೆಂಬರ್ 3ರಂದು ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ. (ಏಜೆನ್ಸೀಸ್)

    ಗ್ರಾಮ ಪಂಚಾಯಿತಿಯೇ ಆಯ್ತು ಬೀಗರ ಮನೆ! ಕಚೇರಿಯನ್ನೇ ಬಿಟ್ಟುಕೊಟ್ಟ ಪಿಡಿಒ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts