More

    ಎದೆಹಾಲಿಗೆ ಮುಗಿಬಿದ್ದ ಪುರುಷರು; ತೂಕ ಇಳಿಕೆ, ಶಕ್ತಿ ವರ್ಧನೆ ಕಾರಣ..! ತಜ್ಞರು ಹೇಳೋದೇನು?

    ಕಳೆದ ವರ್ಷ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾದ ಸಾಕ್ಷ್ಯಚಿತ್ರವೊಂದರಲ್ಲಿ ದೇಹದಾರ್ಢ್ಯಪಟು ಹಾಗೂ ಕ್ಯಾನ್ಸರ್​ ಜಯಿಸಿದ ಎರಡು ಪಾತ್ರಗಳು ‘ಎದೆಹಾಲು ಸೇವಿಸಿ’ ಎಂದು ಸಲಹೆ ನೀಡುತ್ತವೆ. ಜತೆಗೆ, ಅದರಿಂದ ಆರೋಗ್ಯ ಉತ್ತಮವಾಗುತ್ತದೆ ಎಂಬುದನ್ನು ವಿವರಿಸುತ್ತವೆ.

    ದೇಹದಾರ್ಢ್ಯಪಟುವಿನ ಪ್ರಕಾರ ದೇಹದ ತೂಕ ಕಳೆದುಕೊಳ್ಳಲು ಎದೆಹಾಲು ನೈಸರ್ಗಿಕ ಆಹಾರದ ಮೂಲವಾಗಿದೆ. ಜತೆಗೆ ಸ್ನಾಯು ಶಕ್ತಿಯೂ ವೃದ್ಧಿಸುತ್ತದೆ ಎನ್ನುತ್ತಾನೆ. ಇನ್ನು ಪ್ರೊಸ್ಟೇಟ್​ ಕ್ಯಾನ್ಸರ್​ ಜಯಿಸಿದ ವ್ಯಕ್ತಿ ಮಾರಕ ರೋಗವನ್ನು ಎದೆಹಾಲು ದೂರವಿಟ್ಟಿದೆ ಎಂದು ಹೇಳಿಕೊಳ್ಳುತ್ತಾನೆ. ಇದು ಇವರಿಬ್ಬರ ಅಭಿಪ್ರಾಯ ಮಾತ್ರವಲ್ಲ, ಪಾಶ್ಚಾತ್ಯ ವಯಸ್ಕರಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಟ್ರೆಂಡ್​ ಇದು. ಹೀಗಾಗಿಯೇ ಎದೆಹಾಲಿಗೆ ಭಾರಿ ಬೇಡಿಕೆ ಕಂಡು ಬರುತ್ತಿದೆ. ಆನ್​ಲೈನ್​ ಮಾರ್ಕೆಟ್​ನಲ್ಲಿ ಹೆಚ್ಚು ಖರೀದಿಯಾಗುವ ಸಾಮಗ್ರಿ ಕೂಡ ಎನಿಸಿದೆ.

    ಇದನ್ನೂ ಓದಿ; ರೈಲ್ವೆ ಇಲಾಖೆ ಬಿಡಲಿದೆ ‘ತದ್ರೂಪಿ ರೈಲು’ ಏನಿದು, ಏಕಿದು? 

    ಎದೆಹಾಲಿಗೆ ಮಗುವಿಗೆ ಅಮೃತ ಸಮಾನ ಎನಿಸಿದೆ. ಜತೆಗೆ ದೇಹದಾರ್ಢ್ಯಪಟುಗಳಿಗೆ ಧೀರ್ಘಕಾಲದ ರೋಗದಿಂದ ಬಳಲುತ್ತಿರುವವರಿಂದಲೂ ಎದೆಹಾಲಿಗೆ ಬೇಡಿಕೆಯಿದೆ. ಬ್ರಿಟನ್​ನಲ್ಲಿ ಎದೆ ಹಾಲಿನ ಐಸ್​ಕ್ರೀಮ್​ ಮಾರಾಟ ಮಾಡಲಾಗುತ್ತದೆ. ಅಮೆರಿಕದಲ್ಲಿ ಲಾಲಿಪಾಪ್​ ತಯಾರಿಸುವ ಕಂಪನಿ ಎದೆಹಾಲಿನ ಸಿಹಿ ಖಾದ್ಯ ತಯಾರಿಸುತ್ತದೆ. ಹೆಚ್ಚಿನ ಕಡೆಗಳಲ್ಲಿ ಇದನ್ನು ಹಸಿಯಾಗಿ ಕುಡಿಯಲು ಸಿದ್ಧವಾಗಿರುವಂತೆಯೇ ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿ ದುಬಾರಿ ದರವನ್ನೇ ವಿಧಿಸಲಾಗುತ್ತದೆ.

    ಆದರೆ, ವಯಸ್ಕರರಿಗೆ ನಿಜಕ್ಕೂ ಎದೆಹಾಲು ಪ್ರಯೋಜನಕಾರಿಯೇ? ಎದೆಹಾಲಿನಿಂದ ಅನೇಕ ಪ್ರಯೋಜನಗಳಿವೆ ಎಂದು ಪಾಶ್ಚಾತ್ಯರು ಹೇಳಿದರೂ ಅದಕ್ಕೆ ವೈದ್ಯಕೀಯ ಪುರಾವೆಗಳಿಲ್ಲ ಎನ್ನುತ್ತಾರೆ ಫೋರ್ಟಿಸ್​ ಆಸ್ಪತ್ರೆ ವೈದ್ಯ ಡಾ.ಸುನೀತಾ ಮಿತ್ತಲ್​. ಎದೆಹಾಲಿನಲ್ಲಿರುವ ಪ್ರೋಟೀನ್​ ಪ್ರಮಾಣ ಉಳಿದ ಹಾಲಿನದ್ದಕ್ಕಿಂತ ಕಡಿಮೆಯಾಗಿರುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ಕೂಡ ಇರಬಹುದು. ಇಂಥದ್ದೊಂದು ಟ್ರೆಂಡ್​ಅನ್ನು ಭಾರತದಲ್ಲಿ ಅನುಸರಿಸುವುದು ಬೇಡ ಎನ್ನುವುದು ಅವರ ಸಲಹೆ.

    ಇದನ್ನೂ ಓದಿ; ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್​; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…! 

    ಆನ್​ಲೈನ್​ನಲ್ಲಿ ಖರೀದಿಸುವ ಎದೆಹಾಲಿನಲ್ಲಿ ರಾಸಾಯನಿಕ ಹಾಗೂ ಇತರ ಕಲಬೆರಕೆ ಅಂಶಗಳು ಇರಬಹುದು. ಇದರಿಂದ ಆರೋಗ್ಯಕ್ಕೆ ಹಾನಿಯೂ ಉಂಟಾಗಬಹುದು ಎಂದು ಪಾಶ್ಚಾತ್ಯ ವೈದ್ಯರು ಕೂಡ ಸಲಹೆ ನೀಡುತ್ತಾರೆ. ಹಸಿ ಹಾಲು ಕುಡಿಯುವುದರಿಂದ ಉಂಟಾಗುವ ಇತರ ತೊಂದರೆಗಳು ಕೂಡ ಇದರಿಂದಲೂ ಬರಬಹುದು ಎಂದು ಎಚ್ಚರಿಸುತ್ತಾರೆ.

    ಜತೆಗೆ, ಇದನ್ನು ಸರಿಯಾಗಿ ಸಂಗ್ರಹಿಸದೇ ಇರುವುದು, ಸೂಕ್ತವಾಗಿ ದಾಸ್ತಾನು ಮಾಡದಿರುವುದರಿಂದ ಭಾರಿ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಎಲ್ಲಕ್ಕಿಂತ ಮುಖ್ಯ ಮೊದಲೇ ಚಿಕ್ಕಮಕ್ಕಳಿಗೇ ಎದೆಹಾಲಿನ ಕೊರತೆಯಿದೆ. ಇಂಥದ್ದೊಂದು ಟ್ರೆಂಡ್​ ಅವರನ್ನು ಇನ್ನಷ್ಟು ಬಡವಾಗಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

    VIDEO: ಇದ್ದರೆ, ಇರಬೇಕಪ್ಪ ಇಂಥ ಡ್ರೈವರ್​….! ಪಾರ್ಕಿಂಗ್​ ಕೌಶಲಕ್ಕೆ ಬೆರಗಾದ ನೆಟ್ಟಿಗರು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts