More

    ಸುದೀಪ್​ ಪಾಲಿಗೆ ಜುಲೈ 6, ಮರೆಯಲಾಗದ ದಿನ!

    ಸುದೀಪ್​ ಅವರ ವೃತ್ತಿ ಬದುಕಿನಲ್ಲೇ ಅವರಿಗೆ ತುಂಬಾ ದೊಡ್ಡ ಹೆಸರು ತಂದುಕೊಟ್ಟ ಎರಡು ಚಿತ್ರಗಳೆಂದರೆ, ಅದು ‘ಹುಚ್ಚ’ ಮತ್ತು ತೆಲುಗಿನ ‘ಈಗ’. ಈ ಎರಡೂ ಚಿತ್ರಗಳು ಸುದೀಪ್​ ಎಂಥಾ ಪ್ರತಿಭಾವಂತ ಅಂತ ತೋರಿಸಿಕೊಟ್ಟಿದ್ದಷ್ಟೇ, ಅವರಿಗೆ ದೊಡ್ಡ ಹೆಸರು ನೀಡಿತು.
    ಈಗ್ಯಾಕೆ ಈ ಚಿತ್ರಗಳ ವಿಷಯ ಎಂಬ ಪ್ರಶ್ನೆ ಬರಬಹುದು. ವಿಷಯ ಏನೆಂದರೆ, ಈ ಎರಡೂ ಚಿತ್ರಗಳು ಬಿಡುಗಡೆಯಾಗಿದ್ದು ಇದೇ ದಿನ. ಜುಲೈ 6ರಂದು ಸುದೀಪ್​ ಅವರ ಎರಡು ಮಹತ್ವದ ಚಿತ್ರಗಳು ಬಿಡುಗಡೆಯಾಗಿದ್ದವು ಎಂಬುದು ವಿಶೇಷ.

    ಇದನ್ನೂ ಓದಿ: ರಾಮ್​ಚರಣ್​ ಚಿತ್ರಕ್ಕೆ ಪವನ್​ ಕಲ್ಯಾಣ್​ ಬಂಡವಾಳ

    ಈ ಪೈಕಿ ‘ಹುಚ್ಚ’ ಚಿತ್ರವು ಇಂದಿಗೆ ಬಿಡುಗಡೆಯಾಗಿ 19 ವರ್ಷಗಳಾಗಿವೆ. ಸುದೀಪ್​, ಕನ್ನಡ ಚಿತ್ರರಂಗಕ್ಕೆ ‘ತಾಯವ್ವ’ ಎಂಬ ಚಿತ್ರದ ಮೂಲಕ ಎಂಟ್ರಿ ಕೊಟ್ಟರೂ, ಅವರಿಗೆ ಜನಪ್ರಿಯತೆ ಮತ್ತು ಯಶಸ್ಸು ತಂದುಕೊಟ್ಟಿದ್ದು ಓಂಪ್ರಕಾಶ್​ ರಾವ್ ನಿರ್ದೇಶನದ ‘ಹುಚ್ಚ’ ಚಿತ್ರ. ತಮಿಳಿನ ‘ಸೇತು’ ಚಿತ್ರದ ರೀಮೇಕ್​ ಆಗಿರುವ ‘ಹುಚ್ಚ’ ಚಿತ್ರದ ನಂತರ ಅವರು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಸ್ಟಾರ್​ ಆದರು.

    ಇನ್ನು ಎಸ್​.ಎಸ್​. ರಾಜಮೌಳಿ ನಿರ್ದೇಶನದ ‘ಈಗ’ ಬಿಡುಗಡೆಯಾಗಿ 8 ವರ್ಷ ಕಳೆದಿವೆ. ಅದಕ್ಕೂ ಮುನ್ನ ಸುದೀಪ್​ ಹಿಂದಿಯಲ್ಲಿ ‘ಫೂಂಖ್​’ ಮತ್ತು ‘ರಣ್​’ ಚಿತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಗಳಲ್ಲಿನ ಅವರ ಅಭಿನಯ ನೋಡಿ ಮೆಚ್ಚಿಕೊಂಡಿದ್ದ ರಾಜಮೌಳಿ, ತಮ್ಮ ‘ಈಗ’ ಚಿತ್ರದಲ್ಲೊಂದು ಪ್ರಮುಖ ಪಾತ್ರ ಕೊಟ್ಟಿದ್ದರು. ಈ ಚಿತ್ರದ ನಂತರ ಸುದೀಪ್​ ಪ್ಯಾನ್​ ಇಂಡಿಯಾ ಸ್ಟಾರ್​ ಆದರು.

    ಇದನ್ನೂ ಓದಿ: ‘ಶೋಗನ್​’ ಮೂಲಕ ಬೈಕ್​ ರೇಸರ್​ ಆಗ್ತಿದ್ದಾರೆ ಲೂಸ್​ ಮಾದ ಯೋಗಿ…

    ತಮ್ಮ ವೃತ್ತಿಜೀವನದ ಎರಡು ಮಹತ್ವದ ಚಿತ್ರಗಳನ್ನು ಸುದೀಪ್​ ಇಂದು ನೆನಪಿಸಿಕೊಂಡಿದ್ದಾರೆ. ಆ ಎರಡೂ ಚಿತ್ರಗಳು ತಮ್ಮ ಪಾಲಿಗೆ ಒಂದು ಮರೆಯಲಾಗದ ಅನುಭವ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರಗಳಲ್ಲಿ ತಮಗೆ ಅವಕಾಶ ಮಾಡಿಕೊಟ್ಟ ನಿರ್ದೇಶಕರಿಗೆ ಧನ್ಯವಾದ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಸುದೀಪ್​, ”ಹುಚ್ಚ’ ಬಿಡುಗಡೆಯಾಗಿ 19 ವರ್ಷ. ‘ಈಗ’ ಎಂಟು ವರ್ಷಗಳನ್ನು ಮುಗಿಸಿವೆ. ಈ ಚಿತ್ರಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಈ ಎರಡೂ ಚಿತ್ರಗಳು ನಾನೇನು ಎಂದು ತೋರಿಸಿಕೊಟ್ಟಿವೆ ಹಾಗೆಯೇ ನನಗೆ ಪುನರ್ಜನ್ಮ ನೀಡಿವೆ. ಈ ಎರಡೂ ಚಿತ್ರಗಳಲ್ಲಿ ನನಗೆ ಅವಕಾಶ ಕೊಟ್ಟ ಮತ್ತು ಒಳ್ಳೆಯ ಕ್ಷಣಗಳಿಗೆ ಸಾಕ್ಷಿಯಾಗುವಂತೆ ಮಾಡಿದವರಿಗೆ ನನ್ನ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

    ತೈಮುರ್​ ಆಯಾ ಸಂಬಳ ಕೇಳಿದ್ರೆ ತಲೆ ತಿರುಗತ್ತೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts