More

    ಡೊಮಿನಿಕಾದಲ್ಲಿ ಬಂಧನವಾಗಿರೋ ಮೆಹುಲ್ ಚೋಕ್ಸಿ ಫೋಟೋ ವೈರಲ್​: ಗಡಿಪಾರು ಆದೇಶ ಮುಂದೂಡಿಕೆ

    ಆಂಟಿಗುವಾ: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 13 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತ ವಂಚಿಸಿ, ದೇಶಬಿಟ್ಟು ಪರಾರಿಯಾಗಿ ಆಂಟಿಗುವಾ ಮತ್ತು ಬಾರ್ಬುಡದಲ್ಲಿ ತಲೆಮರೆಸಿಕೊಂಡಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಸ್ಥಳೀಯ ಪೊಲೀಸರು ಡೊಮಿನಿಕಾದಲ್ಲಿ ದ್ವೀಪದಲ್ಲಿ ಬಂಧಿಸಿದ್ದು, ಅದಕ್ಕೆ ಸಂಬಂಧಿಸಿ ಫೋಟೋ ಬಹಿರಂಗವಾಗಿದೆ.

    ಮೆಹುಲ್​ ಚೋಕ್ಸಿಯ ಗಡಿಪಾರು ತಡೆಯುವ ಆದೇಶವನ್ನು ಕೆರಿಬಿಯನ್ ದ್ವೀಪ ರಾಷ್ಟ್ರದ ನ್ಯಾಯಾಲಯವು ಮುಂದಿನ ಬುಧವಾರಕ್ಕೆ ಮುಂದೂಡಿದ ಬಳಿಕ ಸ್ಥಳೀಯ ಮಾಧ್ಯಮ ಮೆಹುಲ್​ ಚೋಕ್ಸಿ ಫೋಟೋವನ್ನು ಪ್ರಕಟಿಸಿವೆ,

    62 ವರ್ಷದ ವಜ್ರೋದ್ಯಮಿ ಆಗಿರುವ ಚೋಕ್ಸಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಬೇಕು ಮತ್ತು ಕೋವಿಡ್​-19 ಪರೀಕ್ಷೆ ನಡೆಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

    ಚೋಕ್ಸಿ ವಿರುದ್ಧ ಕಾನೂನುಬಾಹಿರವಾಗಿ ದೇಶವನ್ನು ಪ್ರವೇಶಿಸಿದ ಆರೋಪ ಹೊರಿಸಲಾಗಿದೆ. ಆದರೆ, ನ್ಯಾಯಾಲಯವು ಚೋಕ್ಸಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಮನವಿಯನ್ನು ಬುಧವಾರ ಆಲಿಸಲಿದೆ. ಇದು ಚೋಕ್ಸಿ ಬಂಧನ ಕಾನೂನುಬದ್ಧವಾಗಿದೆಯೆ ಎಂದು ನಿರ್ಧರಿಸುತ್ತದೆ. ಹೀಗಾಗಿ ಭಾರತಕ್ಕೆ ಕರೆತರವು ಪ್ರಯತ್ನಕ್ಕೆ ಮತ್ತೊಂದು ಅಡತೆಯಂತಾಗಿದೆ.

    ಡೊಮಿನಿಕಾವು ಕೆರೆಬಿಯನ್​ ಸಮುದ್ರದ ಒಂದು ಸಣ್ಣ ದ್ವೀಪ ರಾಷ್ಟ್ರ. ಇಂಟರ್ಪೋಲ್ ನೀಡಿದ ಯೆಲ್ಲೋ ಕಾರ್ನರ್ ನೋಟಿಸ್​ ಬಳಿಕ ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಕಳೆದ ಭಾನುವಾರ ಪತ್ತೆಯಾಗಿದ್ದಾನೆ. ಚೋಕ್ಸಿ ಬಂಧನವಾಗಿರುವ ಬಗ್ಗೆ ಇಂಟರ್ಪೋಲ್​, ಸಿಬಿಐಗೆ ಮಾಹಿತಿ ನೀಡಿದ್ದು, ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡದಿಂದ ಬೋಟ್​ ಸಹಾಯದಿಂದ ಡೊಮಿನಿಕಾ ತಲುಪಿದ್ದಾನೆಂದು ತಿಳಿದುಬಂದಿದೆ.

    ಈ ಬಗ್ಗೆ ಮಾತನಾಡಿದ್ದ ಆಂಟಿಗುವಾ ಮತ್ತು ಬಾರ್ಬುಡ ಪ್ರಧಾನಿ ಗ್ಯಾಸ್ಟ್​ ಬ್ರೋನ್​, ರಾಷ್ಟ್ರಕ್ಕೆ ಅಕ್ರಮವಾಗಿ ಪ್ರವೇಶ ನೀಡಿರುವ ಚೋಕ್ಸಿಯನ್ನು ಬಂಧಿಸುವಂತೆ ನಾವು ಡೊಮಿನಿಕನ್​ ಸರ್ಕಾರವನ್ನು ಕೇಳಿದ್ದೇವೆ. ಆತನನ್ನು ನೇರವಾಗಿ ಭಾರತಕ್ಕೆ ಗಡಿಪಾರು ಮಾಡಲಾಗುವುದು ಎಂದು ಮೊದಲು ತಿಳಿಸಿದ್ದರು. ಆದರೆ, ಮತ್ತೆ ತನ್ನ ರಾಷ್ಟ್ರಕ್ಕೆ ಬಿಟ್ಟುಕೊಳ್ಳುವುದಿಲ್ಲ. ಭಾರತ ನೇರವಾಗಿ ಡೊಮಾನಿಕ ರಾಷ್ಟ್ರವನ್ನೇ ಸಂಪರ್ಕಿಸಲಿ ಎಂದು ಹೇಳಿದ್ದರು.

    60 ವರ್ಷದ ಮೆಹುಲ್​ ಚೋಕ್ಸಿ 2017ರ ನವೆಂಬರ್​ನಲ್ಲಿ ಸಿಟಿಜನ್​ಷಿಪ್​ ಬೈ ಇನ್​ವೆಸ್ಟ್​ಮೆಂಟ್​ ಪ್ರೋಗ್ರಾಂ (ಸಿಐಪಿ) ಮೂಲಕ ಆಂಟಿಗುವಾ ಮತ್ತು ಬಾರ್ಬುಡಾ ದ್ವೀಪರಾಷ್ಟ್ರಗಳ ಪೌರತ್ವ ಪಡೆದಿದ್ದ. ಭಾರತದಿಂದ ಪರಾರಿಯಾದ ನಂತರ ಆತ ಆಂಟಿಗುವಾದಲ್ಲಿ ನೆಲೆಸಿದ್ದ. ತನ್ನ ಸಹೋದರ ನೀರವ್ ಮೋದಿ ಸಂಬಂಧಿ ಜತೆಗೂಡಿ ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 13 ಸಾವಿರ ಕೋಟಿ ರೂ.ಗೂ ಹೆಚ್ಚಿನ ವಂಚನೆ ಮಾಡಿದ್ದು, ಇದರಲ್ಲಿ ಚೋಕ್ಸಿಯ ಪಾಲು 7 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿದೆ ಎನ್ನಲಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ಮೆಹುಲ್ ಚೋಕ್ಸಿ ವಿರುದ್ದ ಸಿಬಿಐ ಮತ್ತು ಇಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿವೆ. ಈತನ ಬಂಧನಕ್ಕೆ ನೆರವಾಗಬೇಕೆಂದು ಸಿಬಿಐ ಹಾಗೂ ಇ.ಡಿ. ಮಾಡಿದ್ದ ಮನವಿ ಪುರಸ್ಕರಿಸಿರುವ ಇಂಟರ್​ಪೋಲ್, ಆರೋಪಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. (ಏಜೆನ್ಸೀಸ್​)

    ಕೋವಿಡ್​ನಿಂದ ಅನಾಥರಾದ ಮಕ್ಕಳಿಗೆ ಸಿಗಲಿದೆ 10 ಲಕ್ಷ ರೂಪಾಯಿ!; ಅಪ್ಪ-ಅಮ್ಮನಿಲ್ಲದ ಮಕ್ಕಳಿಗಾಗಿ ಪಿಎಂ ಕೇರ್ಸ್​

    ಬಿಗ್​ಬಾಸ್​ ಸ್ಪರ್ಧಿ ನಟಿ ಯುವಿಕ ಚೌಧರಿ ವಿರುದ್ಧ ಅಟ್ರೊಸಿಟೀಸ್​ ಕೇಸು

    ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts