More

    ಅಯೋಧ್ಯೆಯಲ್ಲಿ ವೇದನಗರ: ಧಾರ್ವಿುಕ ಪ್ರವಾಸೋದ್ಯಮ ಉತ್ತೇಜನಕ್ಕೆ ಯೋಜನೆ

    ನವದೆಹಲಿ: ಅಯೋಧ್ಯೆ ಮೆಗಾ ಅಭಿವೃದ್ಧಿ ಯೋಜನೆಗೆ ಉತ್ತರ ಪ್ರದೇಶ ಸರ್ಕಾರ ಯೋಜನೆ ರೂಪಿಸಿದ್ದು, ಧಾರ್ವಿುಕ ಮತ್ತು ಪ್ರವಾಸೋದ್ಯಮ ಗಮನದಲ್ಲಿ ಇರಿಸಿಕೊಂಡು 1,200 ಎಕರೆ ಪ್ರದೇಶದಲ್ಲಿ ‘ವೇದ ನಗರ’ ನಿರ್ವಣಕ್ಕೆ ನಿರ್ಧಾರ ಮಾಡಲಾಗಿದೆ. ಇದು ತತ್ವಾಧಾರಿತವಾಗಿ ಯೋಜನಾಬದ್ಧವಾಗಿ ರೂಪುಗೊಳ್ಳಲಿದೆ ಮತ್ತು ಇದು ಮಾದರಿ ಭವಿಷ್ಯದ ನಗರಿಯಾಗಿಯೂ ಇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕ್ಯಾಥೋಲಿಕ್ ಪಂಗಡದ ಕ್ರಿಶ್ಚಿಯನ್ನರಿಗೆ ವ್ಯಾಟಿಕನ್ ಇರುವ ಹಾಗೆ ಹಿಂದುಗಳಿಗೆ ಅಯೋಧ್ಯೆ ಪವಿತ್ರ ಸ್ಥಳ. ಹೀಗಾಗಿ ಇದನ್ನು ತತ್ವಾಧಾರಿತವಾಗಿ ಅಂದರೆ ರಾಮಯಾಣ ಕಾಲದ ಮತ್ತು ವೇದೋಪನಿಷತ್​ಗಳಲ್ಲಿ ಉಲ್ಲೇಖಿಸಿರುವ ಕಟ್ಟಡಗಳ ವಿನ್ಯಾಸ, ಹಸಿರು ಭೂಸದೃಶಗಳನ್ನು ನಿರ್ವಿುಸಲಾಗುತ್ತದೆ. ಈ ಪರಿಕಲ್ಪನೆಗೆ ಮೂರ್ತರೂಪ ನೀಡುವ ಸಲಹೆಗಾರರ ಆಯ್ಕೆಗೆ ಬಿಡ್ ಆಹ್ವಾನಿಸಲಾಗಿದೆ. ಈ ಸಲಹೆಗಾರರು ಯೋಜನೆಯ ಅನುಷ್ಠಾನ ಮತ್ತು ಅಯೋಧ್ಯೆಯ ಸಮಗ್ರ ಮೂಲಸೌಕರ್ಯವನ್ನು ಗಮನದಲ್ಲಿ ಇರಿಸಿಕೊಂಡು ಏಳು ತಿಂಗಳಲ್ಲಿ ಯೋಜನೆಯ ರೂಪುರೇಷೆ ನೀಡಲಿದ್ದಾರೆ.

    ಏನೇನು ಇರಲಿದೆ?

    ಮುಂದಿನ ಮೂರು ದಶಕಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಯೋಜನೆ ರೂಪಿಸಲಾಗುತ್ತಿದೆ. ನಗರದ ಹೃದಯಭಾಗದ ಪರಂಪರೆಯನ್ನು ಉಳಿಸಿಕೊಳ್ಳುವುದು, ಸರಯೂ ನದಿ ದಡದಲ್ಲಿನ ಅಭಿವೃದ್ಧಿ, ಭಕ್ತರಿಗೆ ಪರಿಕ್ರಮ ಮಾರ್ಗಕ್ಕೆ ಅವಕಾಶದ ಜತೆಗೆ ಮೂಲಸೌಕರ್ಯ, ಮನರಂಜನೆಯ ತಾಣಗಳ ನಿರ್ಮಾಣ ಆಗಲಿವೆ. ರಾಮಮಂದಿರ ಇರುವ ರಾಮಜನ್ಮ ಭೂಮಿಗೆ ರಸ್ತೆ, ಪಾದಚಾರಿ ಮಾರ್ಗ, ವಸತಿ, ಹಸಿರೀಕರಣ, ಕುಟೀರಗಳು, ಧಾರ್ವಿುಕ ಮತ್ತು ತೀರ್ಥಯಾತ್ರಿಕರ ಸಭೆಗೆ ಸಾಮುದಾಯಿಕ ಸ್ಥಳ, ವಿದ್ಯುತ್ ದೀಪಾಲಂಕಾರ, ಕಲ್ಯಾಣಿಗಳ ಅಭಿವೃದ್ಧಿಯು ಅಯೋಧ್ಯೆಯ ಪುನರುಜ್ಜೀವನ ಯೋಜನೆಯ ಭಾಗವಾಗಿರಲಿದೆ ಎಂದು ಸರ್ಕಾರ ಹೇಳಿದೆ.

    ಮಲತಾಯಿಯನ್ನೇ ರೇಪ್​ ಮಾಡಿದ ಕಾಮುಕ ಮಗ! ವಿಚಾರ ಹೊರಬರದಿರುವಂತೆ ನೋಡಿಕೋ ಎಂದ ಕುಟುಂಬಸ್ಥರು!

    ದುಬೈನಲ್ಲಿ ಕೆಲಸ ಕಳೆದುಕೊಂಡ ಭಾರತೀಯ ರಾತ್ರೋರಾತ್ರಿ ಕೋಟ್ಯಧಿಪತಿಯಾದ! ಅದೃಷ್ಟವೆಂದರೆ ಇದೇ ನೋಡಿ

    ಸಾಯುವಾಗಲೂ ಮಗನಿಗೆ ಬಿಯರ್​ ಕುಡಿಯೋಕೆ ದುಡ್ಡು ಕೊಟ್ಟ ಅಪ್ಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts