More

    ಶಾಲಾ-ಕಾಲೇಜುಗಳಲ್ಲಿ ಧ್ಯಾನ, ನೈತಿಕ ಶಿಕ್ಷಣ: ಡಾ. ಗುರುರಾಜ ಕರಜಗಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ

    ಬೆಂಗಳೂರು: ರಾಜ್ಯದ ಎಲ್ಲ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ 10 ನಿಮಿಷದ ಧ್ಯಾನ ಮತ್ತು ನೈತಿಕ ಶಿಕ್ಷಣ ಹೇಗಿರಬೇಕೆಂದು ತಿಳಿಯಲು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದೆ.

    ಒಂದು ತಿಂಗಳೊಳಗೆ ಸರ್ಕಾರಕ್ಕೆ ವರದಿ ನೀಡಲು ಸಮಿತಿಗೆ ಸೂಚಿಸಿದೆ. ಸಮಿತಿಯು ಸಭೆ ನಡೆಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

    ಸಮಿತಿ ಸದಸ್ಯರಾಗಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ಜಿ. ದ್ವಾರಕಾನಾಥ್, ವಿಭು ಅಕಾಡೆಮಿಯ ಡಾ. ವಿ.ಬಿ. ಆರತಿ, ಡ್ರೀಮ್ ಎ ಡ್ರೀಮ್ ಸಿಇಒ ಸುಚೇತಾ ಭಟ್, ಸೋಫಿಯಾ ಪ್ರೌಢಶಾಲೆ ಪ್ರಾಂಶುಪಾಲರಾದ ಸಿಸ್ಟರ್ ಅಲ್ಲನ ಎಸ್‌ಎನ್‌ಡಿ ಮತ್ತು ಬಾಗೇಪಲ್ಲಿ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಬಿ. ಅಮೀರ್ ಜಾನ್ ಅವರನ್ನು ನೇಮಿಸಲಾಗಿದೆ.

    ಇದನ್ನೂ ಓದಿ: ಆ್ಯಂಟಿ-ಇಂಡಿಯಾ ಗ್ಯಾಂಗ್​ನ ಕೆಲ ನ್ಯಾಯಾಧೀಶರು ನ್ಯಾಯಾಂಗವನ್ನು ಸರ್ಕಾರದ ವಿರುದ್ಧ ಹೋಗುವಂತೆ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಕಿರಣ್ ರಿಜಿಜು

    ಉದ್ದೇಶವೇನು?
    ರಾಜ್ಯದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕರಿಸುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನ ಮಾಡಿಸುವುದು ಅಗತ್ಯವಾಗಿರುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆಯಾಗಲಿದೆ. ಪ್ರತಿ ದಿನ ನಿಯಮಿತವಾಗಿ ಧ್ಯಾನ ಮಾಡಿಸುವುದರಿಂದ ಏಕಾಗ್ರತತೆ ಹೆಚ್ಚಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಯವಾಗಿ ಪೋಲ್ಗೊಳ್ಳಲು ಸಹಕಾರಿಯಾಗುತ್ತದೆ. ಅಲ್ಲದೆ, ವಿದ್ಯಾರ್ಥಿಗಳಲ್ಲಿ ಸೃಜನಶೀಲ ಪ್ರವೃತ್ತಿ ವೃದ್ಧಿಯಾಗಲಿದೆ. ಶಾಲೆಯಲ್ಲಿ ಚಟುವಟಿಕೆಯಿಂದ ಇರಲು ಸಾಧ್ಯವಾಗಲಿದೆ . ಒಟ್ಟಾರೆ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

    25 ಸಾವಿರ ರೂ. ಲಂಚಕ್ಕೆ ಬೇಡಿಕೆ: ಬೆಸ್ಕಾಂ AEE ಭಾರತಿ, AE ಕುನಾಲ್​ ಲೋಕಾಯುಕ್ತ ಬಲೆಗೆ

    ಬೆಂಗಳೂರಿನ ಈ ವ್ಯಕ್ತಿ ಹಗಲು ಆಟೋ ಚಾಲಕ; ರಾತ್ರಿ ಹಣಕಾಸು ಸಲಹೆಗಾರ!

    ಕ್ಲಾಸ್​​ರೂಮ್​ನಲ್ಲಿ ವಿಭಿನ್ನವಾಗಿ ಲವ್​ ಪ್ರಪೋಸ್​ ಮಾಡಲು ಹೋದ ಹುಡುಗನಿಗೆ ಹೀಗಾಗಬಾರದಿತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts