More

    ಬೆಂಗಳೂರಿನ ಈ ವ್ಯಕ್ತಿ ಹಗಲು ಆಟೋ ಚಾಲಕ; ರಾತ್ರಿ ಹಣಕಾಸು ಸಲಹೆಗಾರ!

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬದುಕು ಕಟ್ಟಿಕೊಳ್ಳುವ ಸಲುವಾಗಿ ಹಲವು ಮಂದಿ ಪಾರ್ಟ್​ಟೈಮ್ ಕೆಲಸ ಮಾಡುತ್ತಿರುತ್ತಾರೆ. ಕೆಲ ಮಂದಿ ಬೆಳಗ್ಗಿನಿಂದ ದುಡಿದು, ಸಂಜೆಯಾಗುತ್ತಿದ್ದಂತೆ ಆಟೋ ಚಾಲನೆ ಮಾಡುತ್ತಾ ಆದಾಯದ ದಾರಿ ಕಂಡುಕೊಳ್ಳುತ್ತಾರೆ. ಇವೆರೆಲ್ಲರ ನಡುವೆ ಇಲ್ಲೊಬ್ಬ ವ್ಯಕ್ತಿ, ಹಗಲು ಹೊತ್ತಿನಲ್ಲಿ ಆಟೋ ರಿಕ್ಷಾ ಬಾಡಿಗೆ ನಡೆಸುತ್ತಾ, ಕತ್ತಲಾಗುತ್ತಿದ್ದಂತೆ ಯೂಟ್ಯೂಬ್​ನಲ್ಲಿ ಹಣಕಾಸು ವ್ಯವಹಾರದ ಬಗ್ಗೆ ಸಲಹೆ ನೀಡುವ ಕೆಲಸದಲ್ಲಿ ಯಶಸ್ವಿಯಾಗುತ್ತಿದ್ದಾರೆ.

    ಆಟೋ ಚಾಲನೆ ಜತೆಗೆ ಅತ್ಯಂತ ಸರಳೀಕೃತವಾಗಿ ಹಣಕಾಸು ಸಲಹೆ ನೀಡುತ್ತಿರುವವರು ಜನಾರ್ಧನ್. ಸುಶಾಂತ್ ಕೋಶಿ ಎಂಬುವವರು ಮಾಡಿರುವ ಟ್ವೀಟ್​ನಿಂದ ಇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಅವರು ಟ್ವೀಟ್ ಮಾಡುತ್ತಾ, ಆಟೋ ರಿಕ್ಷಾದ ಒಳಭಾಗದಲ್ಲಿ “ದಯವಿಟ್ಟು ನನ್ನ ಯೂಟ್ಯೂಬ್ ಚಾನೆಲ್‌ಗೆ ಚಂದಾದಾರರಾಗಿ,“ದಯವಿಟ್ಟು ನನ್ನ ಯೂಟ್ಯೂಬ್ ಚಾನೆಲ್‌ಗೆ ಚಂದಾದಾರರಾಗಿ” ಎಂದು ಬರೆದಿರುವ ಫೋಟೋ ಹಂಚಿಕೊಂಡಿದ್ದಾರೆ. ಆಟೋದಲ್ಲಿ ಇರಿಸಿರುವ ಫಲಕದಲ್ಲಿ ಹೂಡಿಕೆದಾರ ‘ಗೋಲ್ಡ್ ಜನಾರ್ಧನ್’ ಎಂದು ಬರೆದಿರುವುದನ್ನು ಕಾಣಬಹುದು.

    ಇದನ್ನೂ ಓದಿ: ಹಾಸನ | ಕರ್ಕಶ ಧ್ವನಿ ಮಾಡುತ್ತಾ ಬೈಕ್ ಚಾಲನೆ ಮಾಡಿದ್ದಕ್ಕೆ ಆರಂಭವಾದ ಜಗಳ ಓರ್ವನ ಹತ್ಯೆಯಲ್ಲಿ ಅಂತ್ಯ!

    ಆಟೋ ಚಾಲಕ ಜನಾರ್ಧನ್ ತಮ್ಮ ಯೂಟ್ಯೂಬ್​ ಚಾನೆಲ್​ ಮೂಲಕ ಅತ್ಯಂತ ಸರಳವಾಗಿ ಹಣಕಾಸು ವಿಚಾರಗಳನ್ನು ವಿವರಿಸಿ ಹೇಳುತ್ತಿದ್ದಾರೆ. ಆಕರ್ಷಕ ವಿಷಯಗಳ ಆಯ್ಕೆ, ಸಾಮಾನ್ಯ ಪದ ಬಳಕೆಯಿಂದ ವಿವರಣೆ ಮೂಲಕ ಇವರ ಚಾನೆಲ್​ನ ವಿಶೇಷತೆ ಹೊಂದಿದೆ.

    ಇದನ್ನೂ ಓದಿ: ಶಿವಮೊಗ್ಗ | ಅನಾಮಿಕ ಕರೆ ಆಧರಿಸಿ 10 ಕೋಟಿ ರೂ. ಬೆನ್ನತ್ತಿ ಹೋದ ಪೊಲೀಸರಿಗೆ ಸಿಕ್ಕಿದ್ದು ಬಟ್ಟೆ ಬಂಡಲ್!

    “ಕೇಂದ್ರೀಯ ಬ್ಯಾಂಕ್​ಗಳು ನೋಟುಗಳನ್ನು ಮುದ್ರಿಸಲು ಯಾಕೆ ಸಾಧ್ಯವಿಲ್ಲ ಎಂಬುದರ ಬಗ್ಗೆ ಜನಾರ್ಧನ್ ಅವರ ಸಾಮಾನ್ಯ ವಿವರಣೆಯು ಅದ್ಭುತವಾಗಿದೆ ಎಂದು ಟ್ವೀಟ್ ಮೂಲಕ ಸುಶಾಂತ್ ಕೋಶಿ ಹೇಳಿಕೊಂಡಿದ್ದಾರೆ. ಸದ್ಯ ಇವರ ಪೋಸ್ಟ್ ವೈರಲ್ ಆಗುತ್ತಿದ್ದು, ಚಾಲಕ ಜನಾರ್ಧನ್ ಅವರ ಹಣಕಾಸು ಜ್ಞಾನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts