More

    ಚಿತ್ರ ವಿಮರ್ಶೆ – ‘ಮಠ’ಗಳ ಘನತೆ ಸಾರುವ ಪ್ರಯತ್ನ

    ಚಿತ್ರ: ಮಠ
    ನಿರ್ಮಾಣ: ರಮೇಶ್​
    ನಿರ್ದೇಶನ: ರವೀಂದ್ರ ವೆಂಶಿ
    ತಾರಾಗಣ: ಸಂತೋಷ್​, ರಮೇಶ್​ ಭಟ್​, ಶರತ್​ ಲೋಹಿತಾಶ್ವ, ರಾಜು ತಾಳಿಕೋಟೆ ಮುಂತಾದವರು

    – ಚೇತನ್​ ನಾಡಿಗೇರ್​

    ‘ಊರೂರು ಸುತ್ತಿ, ಜಗತ್ತು ನೋಡಿದ ಮೇಲೆ ಈ ಜಗತ್ತು ನಶ್ವರ ಎಂದು ಗೊತ್ತಾಯ್ತು. ಸಾವಿರಾರು ಮಠಗಳನ್ನು ಸುತ್ತಿದ ನಂತರ ಮಠಗಳ ಘನತೆ ಗೊತ್ತಾಯಿತು. ಇನ್ನು ಮುಂದೆ ನಿಮ್ಮ ಹೋರಾಟದಲ್ಲಿ ನಾನು ಇರುತ್ತೇನೆ …’

    ಹಾಗಂತ ಅಪ್ಪನಿಗೆ ಪ್ರಾಮಿಸ್​ ಮಾಡುತ್ತಾನೆ ಮಗ, ಅದರಂತೆ ಮಠ ಉಳಿಸಿಕೊಳ್ಳಲು ಮತ್ತು ಆ ಮಠದಿಂದ ನಕಲಿ ಪೀಠಾಧಿಪತಿಯನ್ನು ಓಡಿಸಲು ಹೋರಾಡುತ್ತಾನೆ. ಈ ಹೋರಾಟದಲ್ಲಿ ಅವನು ಗೆಲ್ಲುತ್ತಾನಾ?

    ಇದನ್ನೂ ಓದಿ: ಆಶಿಕಾ ಕುಡಿದು ತೂರಾಡಿದ್ದು ನಿಜಾನಾ? ಸತ್ಯಾಂಶ ಏನು?

    ಇಂದು ಬಿಡುಗಡೆಯಾದ ‘ಮಠ’ ಚಿತ್ರವು ಹಳೆಯ ‘ಮಠ’ದ ಮುಂದುವರೆದ ಭಾಗವಲ್ಲ. ಇದು ಕರ್ನಾಟಕದ ಮಠ ಪರಂಪರೆಯನ್ನು ನೋಡುವ ಒಂದು ಪ್ರಯತ್ನ. ಮಠಗಳ ವ್ಯವಸ್ಥೆಯಲ್ಲಿ ಒಂದಿಷ್ಟು ಕುಂದು-ಕೊರತೆಗಳಿದ್ದರೂ, ಮಠಗಳು ಈ ನಾಡಿನ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಸಾರುವ ಚಿತ್ರ. ಕೆಲವು ಮಠಗಳಲ್ಲಾದ ಕರ್ಮಕಾಂಡಗಳಿಂದಾಗಿ ಜನರಲ್ಲಿ ಮಠಪರಂಪರೆಯ ಬಗ್ಗೆ ನಂಬಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಎಲ್ಲ ಮಠಗಳೂ ಹಾಗಿಲ್ಲ ಮತ್ತು ಮಠಗಳ ಕೊಡುಗೆ ಅಪಾರ ಎಂದು ತೋರಿಸುವ ಚಿತ್ರ.

    ಇದು ಚಿತ್ರ ಎನ್ನುವುದಕ್ಕಿಂತ ಡಾಕ್ಯುಡ್ರಾಮಾ ಎಂದು ಹೇಳಬಹುದು. ದಾವಣಗೆರೆಯ ಸಂತೋಷ್​ ಎಂಬುವವರ ಜೀವನದಲ್ಲಿ ನಡೆದ ಘಟನೆಗಳನ್ನು ಆಧಾರಿಸಿ ರಚಿಸಿದ ಕಥೆ ಎನ್ನಬಹುದು. ಸಂತೋಷ್​ ಅವರು ಕೆಲವು ವರ್ಷಗಳ ಹಿಂದೆ ಕರ್ನಾಟಕದ ಸಾವಿರಾರು ಮಠಗಳಿಗೆ ಭೇಟಿಕೊಟ್ಟು ಹಲವು ಮಾಹಿತಿ ಸಂಗ್ರಹಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟದಿಂದ ಶುರುವಾದ ಅವರ ಪ್ರಯಾಣ ಕೊನೆಯಾದದ್ದು ಬೀದರ್​ನ ಔರಾದ್​ನಲ್ಲಿ. 597 ದಿನಗಳ ಸತತ ಪ್ರಯಾಣ, 5216 ಮಠಗಳ ಭೇಟಿ, 5000ಕ್ಕೂ ಹೆಚ್ಚು ಹಳ್ಳಿಗಳನ್ನು ಸಂಧಿಸಿದ ನಂತರ, ಆ ಎಲ್ಲ ಅನುಭವಗಳನ್ನು ಕ್ರೋಢೀಕರಿಸಿ ‘ಮಠ ಮಾರ್ಗದರ್ಶನ’ ಎಂಬ 25 ಪುಸ್ತಕಗಳ ಸಂಪುಟವನ್ನು ರಚಿಸಿದ್ದಾರೆ. ಅವರ ಈ ಸಾಧನೆಯನ್ನು ಗುರುತಿಸಿದ ಜೆರುಸಲಂ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್​ ನೀಡಿದೆ. ಅವರ ಈ ಪ್ರಯಾಣದಲ್ಲಿ ಆಗಿರುವ ಘಟನೆಗಳಲ್ಲಿ, ಚಿತ್ರಕ್ಕೆ ಅವಶ್ಯವಾದಷ್ಟು ಘಟನೆಗಳನ್ನು ಆಯ್ದುಕೊಂಡು ಅವುಗಳನ್ನು ಆಧರಿಸಿ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ.

    ಇದನ್ನೂ ಓದಿ: ಕೋಮಲ್​ ಯಾಕೆ ಇಷ್ಟು ದಿನ ಚಿತ್ರರಂಗದಿಂದ ದೂರ ಇದ್ದರು? ಜಗ್ಗೇಶ್​ ಹೇಳುತ್ತಾರೆ ಕೇಳಿ …

    ಆ ಕಾರಣಕ್ಕೆ ಈ ಚಿತ್ರ ವಿಶೇಷ ಎನ್ನಬಹುದು. ಆದರೆ, ಚಿತ್ರ ಮೂಡಿಬಂದಿರುವ ರೀತಿಯ ಬಗ್ಗೆ ಇದೇ ವಿಷಯವನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಅನಾವಶ್ಯಕ ದೃಶ್ಯಗಳು, ಕೆಟ್ಟ ಕಾಮಿಡಿ, ಗೊಂದಲಮಯ ನಿರೂಪಣೆ, ಮಂದಗತಿ … ಇವೆಲ್ಲವೂ ಚಿತ್ರದ ಘನತೆಯನ್ನು ಕಡಿಮೆ ಮಾಡಿವೆ. 25 ಜಿಲ್ಲೆಗಳ ಸುತ್ತಿ, ಮೇಕಿಂಗ್​ಗೆ ಹಾಕಿದ ಶ್ರಮವನ್ನು ಬರವಣಿಗೆಗೂ ಹಾಕಿದ್ದರೆ ಚಿತ್ರ ಇನ್ನಷ್ಟು ರುಚಿಸುತ್ತಿತ್ತೇನೋ? ಆದರೂ ಇದೊಂದು ವಿಭಿನ್ನ ಪ್ರಯೋಗ. ಇಲ್ಲಿ ಕರ್ನಾಟಕದ ಹಲವು ಪ್ರೇಕ್ಷಕಣೀಯ ಸ್ಥಳಗಳನ್ನು, ಮಠಗಳನ್ನು, ಪುಣ್ಯಕ್ಷೇತ್ರಗಳನ್ನು ನೋಡಬಹುದು. ಕನ್ನಡದ ಯಾವ ಚಿತ್ರದಲ್ಲೂ ಇಷ್ಟೊಂದು ಮಠ, ದೇವಸ್ಥಾನ, ಪುಣ್ಯಕ್ಷೇತ್ರ ಮತ್ತು ಸ್ಥಳಗಳನ್ನು ಇದುವರೆಗೂ ತೋರಿಸಿದ ಉದಾಹರಣೆ ಇಲ್ಲ. ಅಂಥದ್ದೊಂದು ಕೆಲಸವನ್ನು ಈ ಹೊಸ ‘ಮಠ’ ಮಾಡಿದೆ.

    ಸಂತೋಷ್​ ಬಹಳ ಕಷ್ಟಪಟ್ಟು ನಟಿಸಿದ್ದಾರೆ. ಶಿಸ್ತಿನ ತಂದೆಯಾಗಿ ರಮೇಶ್​ ಭಟ್​ ಇಷ್ಟವಾಗುತ್ತಾರೆ. ಸಾಧು ಕೋಕಿಲ ಚೆನ್ನಾಗಿ ನಟಿಸಿದ್ದಾರಾದರೂ ಕೆಲವು ದೃಶ್ಯಗಳಲ್ಲಿ ಅವರ ಅಭಿನಯ ಅತಿ ಎನಿಸುತ್ತದೆ. ಶರತ್​ ಲೋಹಿತಾಶ್ವ, ರಾಜು ತಾಳಿಕೋಟೆ ಮುಂತಾದವರು ತಮ್ಮ ಕೆಲಸ ಮಾಡಿದ್ದಾರೆ. ಗುರುಪ್ರಸಾದ್​, ತಬಲಾ ನಾಣಿ, ಬಿರಾದರ್​ ಒಂದು ಹಾಡಿಗೆ ಸೀಮಿತ.

    ಶೂಟಿಂಗ್ ವೇಳೆ ಎಡವಟ್ಟು, ನಟಿ ರಾಗಿಣಿ ದ್ವಿವೇದಿಗೆ ಪೆಟ್ಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts