More

    VIDEO| ಜಗತ್ತಿನ ಅತ್ಯಂತ ಎತ್ತರ ಕಟ್ಟಡ ಬುರ್ಜ್​ ಖಲೀಫಾ ಸಮೀಪದ 35 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ!

    ದುಬೈ: ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್​ ಖಲೀಫಾ ಸಮೀಪದಲ್ಲಿರುವ 35 ಅಂತಸ್ತಿನ ಕಟ್ಟಡವೊಂದರಲ್ಲಿ ಸೋಮವಾರ (ನ.07) ಬೆಳಗ್ಗೆ 4 ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ. ಕಟ್ಟಡದಲ್ಲಿದ್ದ ನಿವಾಸಿಗಳನ್ನು ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.

    35 ಅಂತಸ್ತಿನ 8 ಬೌಲೆವರ್ಡ್ ವಾಕ್ ಟವರ್​ನ ಒಂದು ಬದಿಯಲ್ಲಿ ಅಡಿಯಿಂದ ಮುಡಿಯವರೆಗೂ ಬೆಂಕಿಯ ಜ್ವಾಲೆ ಆವರಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಕಟ್ಟಡ ವಿಶ್ವದ ಅಂತ್ಯಂತ ಎತ್ತರದ ಕಟ್ಟಡ ಎಂಬ ಖ್ಯಾತಿ ಪಡೆದಿರುವ ಬುರ್ಜ್​ ಖಲೀಫಾ ಸಮೀಪದಲ್ಲಿದೆ.

    ಜಗತ್ತಿನ ಅತಿದೊಡ್ಡ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಅರಬ್​ನ ಎಮಾರ್​ ಕಂಪನಿ ನಿರ್ಮಿಸಿರುವ 8 ಬೌಲೆವರ್ಡ್ ವಾಕ್ ಎಂದು ಕರೆಯಲ್ಪಡುವ ಸರಣಿ ಕಟ್ಟಡಗಳ ಒಂದು ಭಾಗ ಅಗ್ನಿ ಅವಘಡಕ್ಕೆ ತುತ್ತಾಗಿದೆ. ದುಬೈ ಪೊಲೀಸರು ಮತ್ತು ಸಿವಿಲ್ ಡಿಫೆನ್ಸ್​ಗೆ ಬೆಂಕಿ ಅವಘಡದ ಬಗ್ಗೆ ತಕ್ಷಣವೇ ಮಾಹಿತಿ ತಿಳಿದಿಲ್ಲ ಎಂದು ಹೇಳಲಾಗಿದೆ. ಈ ಘಟನೆಯ ಬಗ್ಗೆ ಎಮಾರ್ ಕೂಡ ಯಾವುದೇ ಹೇಳಿಕೆಯನ್ನು ಈವರೆಗೂ ನೀಡಿಲ್ಲ.

    ದುಬೈನ ಗಗನಚುಂಬಿ ಕಟ್ಟಡಗಳಲ್ಲಿ ಸರಣಿ ಬೆಂಕಿ ಕಾಣಿಸಿಕೊಂಡಿರುವುದು ಕಟ್ಟಡಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ವರದಿಗಳು ಹೇಳಿವೆ. ಕಳೆದ ಏಪ್ರಿಲ್​ನಲ್ಲಿ ಬುರ್ಜ್​ ಖಲೀಫಾ ಎದುರು ಇರುವ ದುಬೈನ ಐಷಾರಾಮಿ ಸ್ವಿಸ್ಸೊಟೆಲ್ ಅಲ್ ಮುರೂಜ್ ಹೋಟೆಲ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಯಾವುದೇ ಅಪಾಯಗಳು ಸಂಭವಿಸಿರಲಿಲ್ಲ.

    2015ರ ಹೊಸ ವರ್ಷದಂದು ಬುರ್ಜ್​ ಖಲೀಫಾ ಸಮೀಪ ಇರುವ ಅತ್ಯಂತ ಉನ್ನತ ಮಟ್ಟದ ಹೋಟೆಲ್​ ಮತ್ತು ವಸತಿ ಸಮುಚ್ಛಯವಿರುವ ಅಡ್ರೆಸ್​ ಡೌನ್​ಟೌನ್​ ಕಟ್ಟಡವೂ ಸಹ ಅಗ್ನಿ ಅನಾಹುತಕ್ಕೀಡಾಗಿತ್ತು. (ಏಜೆನ್ಸೀಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಆಲ್ಕೋಹಾಲ್​ ನೀಡಿ ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ! ಶಿಕ್ಷಕಿಯ ಬಂಧನ

    ರಶ್ಮಿಕಾ ಹಿಂದೆ ವಿಜಯ್; ರಂಜಿತಮೆ ಎಂದು ಹಾಡಿ ಕುಣಿಯುತ್ತಿರುವ ತಮಿಳು ನಟ

    ಬಡವರ ಮೀಸಲು ಸಂವಿಧಾನಬದ್ಧ: ಶಿಕ್ಷಣ, ಉದ್ಯೋಗದಲ್ಲಿ ಶೇ.10 ಮೀಸಲಾತಿಗೆ ಸುಪ್ರೀಂ ಕೋರ್ಟ್ ಸಮ್ಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts