More

    7.2 ತೀವ್ರತೆಯ ಭಾರೀ ಭೂಕಂಪ, ಸುನಾಮಿ ಎಚ್ಚರಿಕೆ

    ಟೋಕಿಯೋ : ಇಂದು ಜಪಾನ್‌ನಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅಲ್ಲಿನ ಕಾಲಮಾನದಲ್ಲಿ ಸಂಜೆ 6.10 ರ ಸುಮಾರಿಗೆ ಈ ಕಂಪನ ವರದಿಯಾಗಿದೆ. ಈ ಪರಿಣಾಮವಾಗಿ ರಾಜಧಾನಿ ಟೋಕಿಯೋದಲ್ಲಿ ಕಟ್ಟಡಗಳು ತಲ್ಲಣಗೊಂಡಿದ್ದರೆ, ದೇಶದ ಈಶಾನ್ಯ ಕರಾವಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.

    7.2 ರ ತೀವ್ರತೆ ಹೊಂದಿದ್ದ ಭೂಕಂಪವು ಇಶಿನೊಮಾಕಿಯಿಂದ 34 ಕಿಲೋಮೀಟರ್ ಅಂತರದಲ್ಲಿ ಕೇಂದ್ರಿತವಾಗಿದ್ದು, 60 ಕಿಲೋಮೀಟರ್ ಆಳದಲ್ಲಿ ಸಂಭವಿಸಿತು ಎಂದು ಜಪಾನ್ ಮೀಟಿಯರಾಲಾಜಿ ಏಜೆನ್ಸಿ ಹೇಳಿದೆ.

    ಇದನ್ನೂ ಓದಿ: ಮಾಸ್ಕ್ ಹಾಕಿಲ್ಲ ಎಂದು ದಂಡ ಕೇಳಿದ ಮಾರ್ಷಲ್​ಗೆ, ಹಿಗ್ಗಾ ಮುಗ್ಗಾ ಹೊಡೆದ ಮಹಿಳೆ

    2011 ರ ಭಾರಿ ಭೂಕಂಪ ಮತ್ತು ಸುನಾಮಿಯ ಸಂದರ್ಭದಲ್ಲಿ ಅತಿಹೆಚ್ಚು ಹಾನಿಗೊಳಗಾದ ಮಿಯಾಗಿ ಪ್ರಿಫಿಕ್ಚರ್ ಪ್ರಾಂತ್ಯದ ಕರಾವಳಿಯಿಂದ ಸ್ವಲ್ಪ ದೂರದಲ್ಲೇ ಕಂಪನದ ಎಪಿಸೆಂಟರ್ ಕಂಡುಬಂದಿರುವುದಾಗಿ ಕ್ಯೋಡೋ ನ್ಯೂಸ್ ಏಜೆನ್ಸಿ ತಿಳಿಸಿದೆ. ಬಾಧಿತ ಪ್ರದೇಶದಲ್ಲಿರುವ ಒನಗಾವ ಅಣುವಿದ್ಯುತ್ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಪರಿವೀಕ್ಷಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)

    ರೇಪ್ ಮಾಡಲು ಯತ್ನಿಸಿದವನ ಮರ್ಮಾಂಗವನ್ನೇ ತುಂಡರಿಸಿದ ಮಹಿಳೆ; ಬುಕ್ಕಾದವು ಎರಡು ಕೇಸು !

    “ಎ ಬಿಗ್​ ಬಿಗ್ ಬಿಗ್ ಥ್ಯಾಂಕ್ಯೂ” : ಮೋದಿಗೆ ಕ್ರಿಕೆಟಿಗ ರಸೆಲ್ ಸಂದೇಶ

    8ನೇ ತರಗತಿ ಮುಗಿಸದವ ಸಿಸೇರಿಯನ್ ಮಾಡಿದ… ಮುಂದಾದದ್ದು ದೊಡ್ಡ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts