More

    ಬಸ್​ ಸಂಚಾರ, ವಿಮಾನ ಹಾರಾಟ ಆರಂಭ ನಿರೀಕ್ಷೆ; ಲಾಕ್​ಡೌನ್​ 4.0ನಲ್ಲಿ ಸಿಗಲಿದೆ ಇನ್ನಷ್ಟು ವಿನಾಯ್ತಿ

    ಬೆಂಗಳೂರು: ಒಂದೊಂದೇ ಹಂತದ ಲಾಕ್​ಡೌನ್​ ಮುಗಿಯುತ್ತಿದ್ದಂತೆ ಹಂತಹಂತವಾಗಿ ನಿರ್ಬಂಧಗಳನ್ನು ಸಡಿಲಿಸುತ್ತ ಬರಲಾಗುತ್ತಿದೆ. ಅಂತೆಯೇ ಮೂರನೇ ಹಂತದ ಲಾಕ್​ಡೌನ್​ ಅವಧಿ ಮುಗಿದ ಬಳಿಕ ಮತ್ತಷ್ಟು ವಿನಾಯ್ತಿಗಳನ್ನು ಸರ್ಕಾರ ಘೋಷಿಸುವ ನಿರೀಕ್ಷೆಯಿದೆ.

    ಇನ್ನಷ್ಟು ಕೈಗಾರಿಕಾ ವಲಯದಲ್ಲಿ ಉತ್ಪಾದನಾ ಚಟುವಟಿಕೆಗಳಿಗೆ ಅವಕಾಶ, ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಸಾರಿಗೆ ಅಂದರೆ, ಬಸ್​ ಸಂಚಾರ ಹಾಗೂ ವಿಮಾನಗಳ ಹಾರಾಟ ಆರಂಭಕ್ಕೆ ಸೀಮಿತ ಪ್ರಮಾಣದಲ್ಲಿ ಅನುಮತಿ ನೀಡುವ ಸಾಧ್ಯತೆ ಇದೆ.

    ಇದನ್ನೂ ಓದಿ; ಕರೊನಾ ವೈರಸ್​ ಕೃತಕ ಸೃಷ್ಟಿ, ಅಮೆರಿಕ ವಾದಕ್ಕೆ ಸಿಕ್ತಾ ಭಾರತದ ಬೆಂಬಲ?

    ಒಂದು ವೇಳೆ ಬೆಂಗಳೂರಿನಲ್ಲಿ ಸಾರ್ವಜನಿಕರು ಬಸ್​ನಲ್ಲಿ ಸಂಚರಿಸಲು ಅನುಮತಿ ನೀಡಿದಲ್ಲಿ ಮೆಟ್ರೋ ರೈಲು ಸಂಚಾರವೂ ಶುರುವಾಗಬಹುದು. ಏಕೆಂದರೆ, ಕೈಗಾರಿಕೆಗಳು ಶುರುವಾದರೆ, ಕಾರ್ಮಿಕರು ತೆರಳು ಸಾರ್ವಜನಿಕ ಸಾರಿಗೆ ಅತ್ಯಾವಶ್ಯಕವಾಗಿದೆ.

    ಕರೊನಾ ಸೋಂಕಿತರಿರುವ ಸಂಖ್ಯೆ ಆಧರಿಸಿ ಮಾಡಲಾಗಿರುವ ಕೆಂಪು, ಕಿತ್ತಳೆ, ಹಸಿರು ವಲಯಗಳ ವಿಂಗಡಣೆಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬರದು. ಜಿಲ್ಲೆಗಳ ವಲಯ ಹಾಗೂ ಕಂಟೇನ್​ಮೆಂಟ್​ ಜೋನ್​ಗಳ ಮಾನದಂಡದಲ್ಲಿ ವ್ಯತ್ಯಾಸವಾಗದು. ಆದರೆ, ಆರ್ಥಿಕ ಚಟುವಟಿಕೆಗಳ ಆರಂಭಕ್ಕೆ ಇನ್ಷ್ಟು ವಿನಾಯ್ತಿಗಳಂತೂ ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೆಂಪು ವಲಯದಲ್ಲಿ ಅತ್ಯಾವಶ್ಯಕವಲ್ಲದ ವಸ್ತುಗಳ ಆನ್​ಲೈನ್​ ಖರೀದಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇದಲ್ಲದೇ ಕಿತ್ತಳೆ, ಹಸಿರು ವಲಯದಲ್ಲಿ ಅವಕಾಶವಿದ್ದು, ಇಲ್ಲಿ ನಿರ್ಬಂಧಿಸಲಾಗಿರುವ ಚಟುವಟಿಕೆಗಳಿಗೆ ಕಂಟೇನ್​ಮೆಂಟ್​ ಜೋನ್​ ಹೊರತುಪಡಿಸಿ ಅವಕಾಶ ನೀಡುವ ನಿರೀಕ್ಷೆ ಹೊಂದಲಾಗಿದೆ. ಅಂದರೆ, ನಿಬಂಧಿತ ಪ್ರದೇಶ ಹೊರತುಪಡಿಸಿದರೆ, ಕೆಂಪು ವಲಯ ಕೂಡ ಉಳಿದ ಪ್ರದೇಶಗಳಂತೆ ಸಾಮಾನ್ಯವಾಗಲಿದೆ.

    ಇದನ್ನೂ ಓದಿ; ತಿಳಿದಿರಿ.. ಆಧಾರನಷ್ಟೇ ಮುಖ್ಯವಾಗುತ್ತಿದೆ ಆರೋಗ್ಯ ಸೇತು ಆ್ಯಪ್​, ಪ್ರಯಾಣಕ್ಕಂತೂ ಬೇಕೆಬೇಕು..!

    ದೇಶೀಯ ವಿಮಾನ ಹಾರಾಟ ಆರಂಭವಾಗುವ ಸೂಚನೆಗಳಿವೆ. ಆದರೆ, ನಿಗದಿತ ಸ್ಥಳಗಳಿಗೆ ಮಾತ್ರ ಸಂಚಾರ ಸಾಧ್ಯವಾಗಬಹುದು. ದೆಹಲಿ-ಮುಂಬೈ ನಡುವೆ ವಿಮಾನ ಯಾನ ಆರಂಭವಾಗುವ ನಿರೀಕ್ಷೆ ಹೊಂದಲಾಗಿದೆ.

    ಶಾಲೆಗಳಲ್ಲಿ ಶುರುವಾಗಲಿದೆ ಶಿಫ್ಟ್​, ಎರಡು ದಿನಕ್ಕೊಮ್ಮೆ ಕ್ಲಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts