More

    ಸತ್ಸಂಗದ ಮೂಲಕ ಮಾನವೀಯ ಮೌಲ್ಯಗಳ ಅರಿವು

    ಮಸ್ಕಿ: ಬಳಗಾನೂರಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಶಿವನ ಪ್ರವಚನ ಆರಂಭೋತ್ಸವ, ಈಶ್ವರೀಯ ವಿಶ್ವವಿದ್ಯಾಲಯದ ನಾಮಫಲಕ ಉದ್ಘಾಟನೆ, ಮಹಿಳಾ ದಿನ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.

    ಸಿಂಧನೂರು ಕೇಂದ್ರದ ಬಿ.ಕೆ.ಪಾರ್ವತಿ ಅಕ್ಕ ಮಾತನಾಡಿ, ಮಾನವೀಯ ಮೌಲ್ಯಗಳ ಜ್ಞಾನವನ್ನು ಜನತೆಗೆ ತಿಳಿಸಲು ನಿತ್ಯ ಸತ್ಸಂಗ, ಶಿವನ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪಟ್ಟಣದ ಮರಿಯಪ್ಪ ಅಂಬ್ಲಿ ಗೋದಾಮಿನಲ್ಲಿ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ ಎಂದರು.

    ಸಿರಗುಪ್ಪ ಕೇಂದ್ರದ ಪೂರ್ಣಿಮಾ ಅಕ್ಕ, ಮಸ್ಕಿ ಕೇಂದ್ರದ ಹೇಮಾವತಿ, ಕಾರಟಗಿಯ ಡಾ.ರೇಖಾ, ತೆಕ್ಕಲಕೋಟೆಯ ಮಾನಸ, ತೆಲಂಗಾಣದ ಆರತಿ, ತೋರಣಗಲ್‌ನ ರಾಜೇಶ್ವರಿ, ಹಟ್ಟಿಯ ಇಂದ್ರಾ, ದೇವದುರ್ಗದ ವಿನಯಾ, ಸಿಂಧನೂರಿನ ಸೀಮಾ, ಕಾರಟಗಿಯ ಶೀಲಾ, ಪ್ರಮುಖರಾದ ಡಾ.ಶಿವಶರಣಪ್ಪ ಇತ್ಲಿ, ಹಟ್ಟಿ ಚಿನ್ನದಗಣಿಯ ಡಾ.ಕವಿತಾ ಮೇಟಿ, ಎಚ್.ತಿಪ್ಪಣ್ಣ, ಶಿವಶಂಕ್ರಪ್ಪ ಹಳ್ಳಿ, ಮಲ್ಲಿಕಾರ್ಜುನ, ಬಸನಗೌಡ, ಭೀಮಣ್ಣ ವಿಶ್ವಕರ್ಮ, ಸಿದ್ದಪ್ಪ ಚಳ್ಳೂರು, ಬಸವರಾಜ ಕರಡಕಲ್, ಸಿದ್ದಯ್ಯಸ್ವಾಮಿ, ರವಿಕುಮಾರ, ಅಯ್ಯಪ್ಪ ಕಿನ್ನಾಳ, ಅಶೋಕಗೌಡ, ಅಮರೇಶ ಹೆಂಬಾ, ರಾಘವೇಂದ್ರ, ವೀರೇಶಸ್ವಾಮಿ ಗುಣಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts