More

    ಬಿಜೆಪಿ ಸರ್ಕಾರ ಮೀಸಲಾತಿಯಲ್ಲಿ ಮುಸ್ಲಿಂರಿಗೆ ಅನ್ಯಾಯ

    ಮಸ್ಕಿ: ಮುಸ್ಲಿಮರಿಗೆ ನೀಡುತ್ತಿದ್ದ 2 ಬಿ ಮೀಸಲಾತಿಯನ್ನು ಬಿಜೆಪಿ ಸರ್ಕಾರ ರದ್ದು ಪಡಿಸಿರುವುದು ಸಂವಿಧಾನಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಆದ್ದರಿಂದ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಕ್ಕೆ ಮೀಸಲಾತಿ ಮುಂದುವರೆಸಬೇಕು ಎಂದು ಮುಸ್ಲಿಂ ಮುಖಂಡ ಅಬ್ದುಲ್‌ಗನಿಸಾಬ್ ಆಗ್ರಹಿಸಿದರು.

    ಮಸ್ಕಿ ಪಟ್ಟಣದ ಪತ್ರಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿದ ಮಸೂದ್ ಪಾಶಾ, ರೀಯಾಜ್ ಅಹ್ಮದ್, ನಭಿಶೇಡ್ಮೀ, ಹುಸೇನ್‌ಶೇಡ್ಮಿ ಅವರು ಮಾತನಾಡಿ ರಾಜ್ಯದಲ್ಲಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದ ಮುಸ್ಲಿಂ ಸಮುದಾಯಕ್ಕೆ ನ್ಯಾಯಯುತವಾಗಿ ನೀಡುತ್ತಿದ್ದ ಶೇಕಡಾ 4 ರಷ್ಟು ಮೀಸಲಾತಿಯನ್ನು ಆಡಳಿತರೂಡ ಬಿಜೆಪಿ ಸರ್ಕಾರ ರದ್ದು ಪಡಿಸಿರುವ ಕ್ರಮಕ್ಕೆ ಬಲವಾಗಿ ಖಂಡಿಸುತ್ತೆವೆ ಕೂಡಲೇ ಬಿಜೆಪಿ ಸರ್ಕಾರ ರದ್ದತಿಯನ್ನು ಹಿಂಪಡೆದು ಸಾಮಾಜಿಕ ನ್ಯಾಯ ಕಾಪಾಡಬೇಕು ಇಲ್ಲದಿದ್ದರೆ ನಾವೂ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ನ್ಯಾಯಾಲಯದ ಮೂಲಕ ಮತ್ತೆ ಪಡೆದುಕೊಳ್ಳುತ್ತೇವೆ ಎನ್ನುವ ವಿಶ್ವಾಸವಿದೆ ಎಂದರು.

    ಇದನ್ನೂ ಓದಿ: ಮುಸ್ಲಿಮರ ಮೀಸಲಾತಿ ರದ್ದು; ಜನತೆಗೆ ಈಗ ನಿಮ್ಮ ಉತ್ತರವೇನು: ಕಾಂಗ್ರೆಸ್​ ಟ್ವೀಟ್​

    ಕಳೆದ ಹಲವು ದಿನಗಳಿಂದ ಮುಸ್ಲಿಂರನ್ನು ಹಿಜಾಬ್, ಹಲಾಲ್ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಸಮುದಾಯವನ್ನು ಗುರಿಯಾಗಿಸಿಕೊಂಡು ನಮ್ಮನ್ನು ತುಳಿಯುವ ಕೇಲಸ ಮಾಡಲಾಗುತ್ತಿದೆ ಇದು ಒಳ್ಳೆಯದಲ್ಲ ಎಲ್ಲರೂ ಅಣ್ಣ-ತಮ್ಮಂದಿರಂತೆ ಸಹಬಾಳ್ವೆ ಸೌಹಾರ್ದತೆಯಿಂದ ಬಾಳಬೇಕು ಎಂದರು.

    ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಮೀಸಲಾತಿ ರದ್ದತಿಯಿಂದ ಶೈಕ್ಷಣಿಕವಾಗಿ ಹಿಂದೆ ಇರುವ ಮಕ್ಕಳು ಉನ್ನತ ವಿದ್ಯಾಭ್ಯಾಸವಾದ ಇಂಜಿನೊಯರಿಂದ ಮೆಡಿಕಲ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಲು ಮೀಸಲಾತಿ ಸಿಗದೇ ವಂಚಿತರಾಗುವಂತಾಗಿದೆ. ಆದ್ದರಿಂದ ಸರ್ಕಾರ ಸಾಮಾಜಿಕ ನ್ಯಾಯದಡಿ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೆ ಮುಂದುವರೆಸ ಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts