More

    ಪ್ರೀ-ಕ್ವಾರ್ಟರ್​ಫೈನಲ್ಸ್​​​ಗೆ ಮೇರಿ ಕೋಂ ಮುನ್ನಡೆ; ಚಿನ್ನದ ಮೇಲೆ ಕಣ್ಣು!

    ಟೋಕಿಯೋ : ಲಂಡನ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಪಡೆದು 9 ವರ್ಷಗಳ ನಂತರ ಮತ್ತೆ ಭಾರತವನ್ನು ಒಲಿಂಪಿಕ್ಸ್​ನಲ್ಲಿ ಪ್ರತಿನಿಧಿಸುತ್ತಿರುವ ಮೇರಿ ಕೋಮ್​ ಅವರು ಉತ್ತಮ ಆರಂಭ ತೋರಿದ್ದಾರೆ. ಇಂದು ನಡೆದ ಫ್ಲೈವೈಟ್​ ವುಮೆನ್ಸ್ ಕ್ಯಾಟಗರಿ ಬಾಕ್ಸಿಂಗ್​ ಪಂದ್ಯದಲ್ಲಿ ಡೊಮಿನಿಕನ್ ರಿಪಬ್ಲಿಕ್​ನ ಹರ್ನಾಂಡಜ್​ ಗಾರ್ಸಿಯರನ್ನು 4-1 ಅಂಕಗಳೊಂದಿಗೆ ಸೋಲಿಸಿ ಮುನ್ನಡೆದಿದ್ದಾರೆ.

    ಆರು ಬಾರಿ ವರ್ಲ್ಡ್​ ಚ್ಯಾಂಪಿಯನ್ ಆಗಿರುವ ಮೇರಿ ಕೋಮ್​, ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಆಸೆ ಹೊಂದಿದ್ದಾರೆ. ಇಂದಿನ ತಮ್ಮ ಮೊದಲ ವಿಜಯದೊಂದಿಗೆ ಪ್ರಿ-ಕ್ವಾರ್ಟರ್​ಫೈನಲ್ಸ್​ ತಲುಪಿರುವ ಅವರು, ಮುಂದಿನ ಪಂದ್ಯದಲ್ಲಿ ಕೊಲಂಬಿಯಾದ ಬಾಕ್ಸರ್​ ವಾಲೆಂಷಿಯ ವಿಕ್ಟೋರಿಯ ಎದುರು ಸೆಣೆಸಲಿದ್ದಾರೆ.

    ಇದನ್ನೂ ಓದಿ: ಒಲಿಂಪಿಕ್ಸ್​: ಮೆಡಲ್ ರೌಂಡ್​​ಗೆ ಭಾರತದ ಸೌರಭ್ ಚೌಧರಿ

    ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪದಕದ ಖಾತೆ ತೆರೆದ ತಮ್ಮ ರಾಜ್ಯ ಮಣಿಪುರದವರೇ ಆದ ಮೀರಾಬಾಯಿ ಚಾನು ಅವರ ಗೆಲುವು, ಅವರ ಹುಮ್ಮಸ್ಸನ್ನು ಹೆಚ್ಚಿಸಿದಂತಿದೆ. ಇಂದಿನ ಪಂದ್ಯದ ನಂತರ ಇಂಡಿಯಾ ಟುಡೇ ವರದಿಗಾರರೊಂದಿಗೆ ಮಾತನಾಡಿರುವ ಅವರು, “ನಾವು ಮಣಿಪುರಿಗಳು ತುಂಬಾ ಟಫ್​ ಜನ. ಅನುಕೂಲದಿಂದ ಬಂದಿರುವುದಿಲ್ಲ, ಆದರೆ, ಹೆಚ್ಚು ಹೆಚ್ಚು ಕಷ್ಟ ಪಟ್ಟು ಹೋರಾಡುತ್ತಿರುತ್ತೇವೆ, ಗುರಿ ತಲುಪುವವರೆಗೆ” ಎಂದಿದ್ದಾರೆ.

    ನಾಲ್ಕು ಮಕ್ಕಳ ತಾಯಿಯಾಗಿರುವ 38 ವರ್ಷದ ಮೇರಿ ಕೋಂ, “ಈ ಗೆಲುವು ನನ್ನ ಮಕ್ಕಳಿಗಾಗಿ. ಚಿನ್ನದ ಪದಕವೊಂದರ ಕೊರತೆ ಇದೆ. ಅದಕ್ಕಾಗಿಯೇ, ಕರೊನಾ ಸಾಂಕ್ರಾಮಿಕದ ಸಂದರ್ಭದಲ್ಲೂ ನಾನಿಲ್ಲಿಗೆ ಬಂದಿರುವುದು” ಎಂದಿದ್ದಾರೆ. (ಏಜೆನ್ಸೀಸ್)

    ಒಲಿಂಪಿಕ್ಸ್​: ಮೊದಲ ಪಂದ್ಯ ಗೆದ್ದ ವರ್ಲ್ಡ್ ಚ್ಯಾಂಪಿಯನ್ ಪಿ.ವಿ.ಸಿಂಧು

    ಅಪರಾಧ ತಡೆಯಲು ಹೊಯ್ಸಳಕ್ಕೆ ಹೊಸ ಹುರುಪು! ದಕ್ಷತೆ ಹೆಚ್ಚಿಸಲು ತಯಾರಿ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts