More

    ಆಕ್ಸಿಜನ್ ಕೊರತೆಗೆ ಮಿಡಿದ ಮಾರುತಿ ಸುಜುಕಿ ; ಮೇ 1 ರಿಂದ 9 ಕಾರ್ಖಾನೆಗಳು ಬಂದ್ !

    ನವದೆಹಲಿ : ಭಾರತದಲ್ಲಿ ಉಲ್ಬಣವಾಗಿರುವ ಕರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಕರೊನಾ ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ಆಕ್ಸಿಜನ್​​ನ ಅಗತ್ಯ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಉದ್ದೇಶಕ್ಕೆ ಆಕ್ಸಿಜನ್ ಲಭ್ಯಗೊಳಿಸುವುದಕ್ಕಾಗಿ ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪೆನಿ ಮಾರುತಿ ಸುಜುಕಿ ಒಂಭತ್ತು ದಿನಗಳು ಹರಿಯಾಣ ಮತ್ತು ಗುಜರಾತ್​​ನಲ್ಲಿರುವ ತನ್ನ ಕಾರ್ಖಾನೆಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ.

    ತನ್ನ ವಾರ್ಷಿಕ ಮೇನ್ಟೆನೆನ್ಸ್ ಶಟ್​ಡೌನ್ ಜೂನ್​ನಲ್ಲಿ ನಡೆಯುವುದು ನಿಗದಿಯಾಗಿದೆ. ಆದರೆ ಈಗಿನ ಕರೊನಾ ಸನ್ನಿವೇಶದಲ್ಲಿ, ವೈದ್ಯಕೀಯ ಅಗತ್ಯಗಳಿಗೆ ಆಮ್ಲಜನಕ ಲಭ್ಯವಿರಬೇಕೆಂಬ ಕಾರಣಕ್ಕೆ ಕಂಪೆನಿಯನ್ನು ಮುಂಚಿತವಾಗಿ ಅಂದರೆ ಮೇ 1 ರಿಂದ ಮೇ 9 ರವರೆಗೆ ಮುಚ್ಚಲಾಗುವುದು ಕಂಪೆನಿ ಹೇಳಿಕೆ ನೀಡಿದೆ. ಹರಿಯಾಣದಲ್ಲಿರುವ ಮಾರುತಿ ಸುಜುಕಿ ಉತ್ಪಾದನಾ ಘಟಕಗಳನ್ನು ಮತ್ತು ಗುಜರಾತ್​ನಲ್ಲಿರುವ ಸುಜುಕಿ ಮೋಟರ್​​ನ ಉತ್ಪಾದನಾ ಘಟಕವನ್ನು ಈ ಅವಧಿಯಲ್ಲಿ ಮುಚ್ಚುವ ನಿರ್ಧಾರವನ್ನು ಕಂಪೆನಿ ಪ್ರಕಟಿಸಿದೆ.

    ಇದನ್ನೂ ಓದಿ: ಲಾಕ್​ಡೌನ್​ ವೇಳೆ ಓಡಾಡಲು ಪಾಸ್​ ನೀಡುತ್ತಿಲ್ಲ : ಪೊಲೀಸ್

    “ಜನರ ಪ್ರಾಣ ಉಳಿಸಲು ಕೈಗಾರಿಕಾ ಬಳಕೆಯಿಂದ ಆಕ್ಸಿಜನ್​ಅನ್ನು ಹೊರಗೆಳೆಯುವಲ್ಲಿ ಸರ್ಕಾರವನ್ನು ಕಂಪೆನಿ ಬೆಂಬಲಿಸುತ್ತದೆ. ಕಾರು ಉತ್ಪಾದನಾ ಪ್ರಕ್ರಿಯೆಯಲ್ಲಿ ಮಾರುತಿ ಸುಜುಕಿ ಅಲ್ಪಪ್ರಮಾಣದ ಆಕ್ಸಿಜನ್ಅನ್ನು ಕಾರ್ಖಾನೆಗಳಲ್ಲಿ ಬಳಸುತ್ತದೆ. ಇದಕ್ಕಿಂತ ಹೆಚ್ಚು ಪ್ರಮಾಣವನ್ನು ಕಾಂಪೊನೆಂಟ್​ಗಳನ್ನು ಉತ್ಪಾದಿಸುವಲ್ಲಿ ಬಳಸಲಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲಾ ಆಕ್ಸಿಜನ್​ಅನ್ನು ಪ್ರಾಣಗಳನ್ನು ಉಳಿಸಲು ಬಳಸಬೇಕು ಎಂದು ನಾವು ನಂಬಿದ್ದೇವೆ” ಎಂದು ಮಾರುತಿ ಸುಜುಕಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. (ಏಜೆನ್ಸೀಸ್)

    ಕರೊನಾ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್​​ ಬೇಕೆ ? ಬೆಂಗಳೂರಿನಲ್ಲಿ ಈ ವಿಧಾನ ಅನುಸರಿಸಿ

    ಕರೊನಾ ಕರ್ಫ್ಯೂ ಉಲ್ಲಂಘಿಸಿ ಶೂಟಿಂಗ್ ! ನಟ ಜಿಮ್ಮಿ ಶೇರ್​​ಗಿಲ್ ಸೇರಿ 35 ಜನರ ಮೇಲೆ ಕೇಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts