ಮಾಲಗಿತ್ತಿಯಲ್ಲಿ ವಿವಾಹಿತ ಪ್ರೇಮಿಗಳು ಆತ್ಮಹತ್ಯೆ ಶರಣು

kst crime
ಪೀರಸಾಬ್, ಶಾರವ್ವ
Published on

ಕುಷ್ಟಗಿ (ಕೊಪ್ಪಳ): ಅನೈತಿಕ ಸಂಬಂಧ ಬಯಲಾದ ಹಿನ್ನೆಲೆಯಲ್ಲಿ ಮಾಲಗಿತ್ತಿಯಲ್ಲಿ ವಿವಾಹಿತ ಪ್ರೇಮಿಗಳು ವಿಷ ಸೇವಿಸಿ ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಖಾಸಗಿ ವಾಹನ ಚಾಲಕರಾಗಿದ್ದ ಪೀರಸಾಬ್ (35) ಹಾಗೂ ಶಾರವ್ವ ಶರಣಪ್ಪ ಉಪ್ಪಾರ್ (30) ಮೃತರು. ಪತಿಯ ಅನೈತಿಕ ಸಂಬಂಧ ಗೊತ್ತಾಗಿ ಪೀರಸಾಬ್‌ನ ಪತ್ನಿ, ಶಾರವ್ವ ಜತೆ ಜಗಳ ಮಾಡಿದ್ದರು. ಪೀರಸಾಬ್ ಹಾಗೂ ಶಾರವ್ವಗೆ ಬುದ್ಧಿವಾದ ಹೇಳಿ ಸಮಸ್ಯೆ ಬಗೆಹರಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದರು. ಆದರೆ, ತಮ್ಮಿಬ್ಬರ ಅನೈತಿಕ ಸಂಬಂಧ ಬಯಲಾಗಿ ಪರಸ್ಪರ ದೂರವಾಗುತ್ತೇವೆ ಎಂದು ಭಾವಿಸಿ ಮಧ್ಯರಾತ್ರಿ ಜಮೀನೊಂದರಲ್ಲಿ ವಿಷ ಸೇವಿಸಿದ್ದಾರೆ. ಪೀರಸಾಬ್‌ಗೆ ಇಬ್ಬರು ಹಾಗೂ ಶಾರವ್ವಗೆ ಇಬ್ಬರು ಮಕ್ಕಳಿದ್ದಾರೆ. ಹನುಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net