ಪತ್ನಿಯ ಅನೈತಿಕ ಸಂಬಂಧದಿಂದ ಮನನೊಂದು ಪತಿ ಆತ್ಮಹತ್ಯೆ

mng--crime
Published on

ಪತ್ನಿಯ ಅನೈತಿಕ ಸಂಬಂಧದಿಂದ ಮನನೊಂದು ಪತಿ ಆತ್ಮಹತ್ಯೆ ಆತ್ಮಹತ್ಯೆಗೆ ಶರಣರಾಗಿದ್ದಾರೆ. ತಾಲೂಕಿನ ಹಳ್ಳಿಕೆರೆಹುಂಡಿಯ ಶಶಿಧರ್(39) ಮೃತರು. ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದ ಶಶಿಧರ್, 10 ವರ್ಷದ ಹಿಂದೆ ಬನ್ನೂರು ಸಮೀಪದ ಬೆಟ್ಟಹಳ್ಳಿ ಗ್ರಾಮದ ಭವ್ಯಾ ಅವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಕೆಲ ತಿಂಗಳಿಂದ ಭವ್ಯಾ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದರು. ಈ ಬಗ್ಗೆ ಪತಿ ಶಶಿಧರ್, ಭವ್ಯಾಗೆ ಬುದ್ಧಿವಾದ ಹೇಳಿದಾಗ್ಯೂ ಆಕೆ ಬದಲಾಗಿರಲಿಲ್ಲ. ಪತ್ನಿಯ ಈ ವರ್ತನೆಯಿಂದ ಮನನೊಂದಿದ್ದ ಶಶಿಧರ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net