More

    ಪಾಕ್​ ನೂತನ ಪ್ರಧಾನಿಯ ಐದನೇ ಮದುವೆ ರಹಸ್ಯ ಬಯಲು; ಆದರೆ ಕಿರಿಯ ಬೇಗಂ ಹೇಳಿದ್ದೆ ಬೇರೆ

    ನವದೆಹಲಿ: ಪಾಕಿಸ್ತಾನದ 24ನೇ ಪ್ರಧಾನಿಮಂತ್ರಿಯಾಗಿ ಶೆಹಬಾಜ್ ಷರೀಫ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆರ್ಥಿಕ ಮತ್ತು ಭದ್ರತಾ ಸವಾಲುಗಳ ನಡುವೆಯೇ ಪಾಕಿಸ್ತಾನ ಪ್ರಧಾನಿಯಾಗಿ ಎರಡನೇ ಸಲ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಾಜಿ ಪ್ರಧಾನಿ ನವಾಜ್​ ಷರೀಫ್​ ಕಿರಿಯ ಸಹೋದರನಾಗಿರುವ ಶೆಹಬಾಜ್​ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅವರ ಬಗ್ಗೆ ಸುದ್ದಿಯೊಂದು ಕೇಳಿ ಬಂದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

    ಆರ್ಥಿಕ ಸಂಕಷ್ಟದಿಂದಾಗಿ ತೀವ್ರವಾಗಿ ಕಂಗೆಟ್ಟಿರುವ ಪಾಕಿಸ್ತಾನ ಜಾಗತಿಕ ವೇದಿಕೆಗಳಲ್ಲಿ ತೀವ್ರ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದು, ಅಲ್ಲಿನ ರಾಜಕಾರಣಿಗಳು, ಮಾಜಿ ಕ್ರಿಕೆಟಿಗರು ಹಾಗೂ ಸೇನೆ ಅಧಿಕಾರಿಗಳು ಭಾರತದ ಬಗ್ಗೆ ಹೇಳಿಕೆಗಳನ್ನು ನೀಡಿ ಟ್ರೋಲ್​ ಆಗುತ್ತಿರುವುದು ಹೊಸ ವಿಚಾರವೇನಲ್ಲ. ಇದೀಗ ಈ ಸಾಲಿಗೆ ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್​ ಸೇರ್ಪಡೆಯಾಗುತ್ತಿದ್ದು, ಇದು ಮದುವೆಯ ವಿಚಾರಕ್ಕೆ ಎಂದರೆ ನೀವು ಶಾಕ್​ ಆಗುವುದಂತು ಖಂಡಿತಾ.

    ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಐದು ಬಾರಿ ವಿವಾಹವಾಗಿದ್ದು, ಪ್ರಸ್ತುತ ಇಬ್ಬರು ಪತ್ನಿಯರ ಜೊತೆ ಜೀವನ ನಡೆಸುತ್ತಿದ್ದಾರೆ. ಮೊದಲ ಮೂವರಿಗೆ ವಿಚ್ಛೇದನ ನೀಡಿರುವ ಶೆಹಬಾಜ್​ಗೆ ನಾಲ್ವರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದಾರೆ. ರಾಜಕಾರಣಿಗಿಂತ ಹೆಚ್ಚಾಗಿ ಈ ಒಂದು ವಿಚಾರಕ್ಕೆ ಶೆಹಬಾಜ್​ ಷರೀಫ್​ ಜನರ ಗಮನ ಸೆಳೆದಿದ್ದು, ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಈ ವಿಚಾರ ಎಲ್ಲೆಡೆ ವೈರಲ್​ ಆಗುತ್ತಿದೆ.

    Shehbaz Sharif

    ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ ಸ್ಫೋಟಕ ಬ್ಯಾಟಿಂಗ್; ಸತತ ಎರಡನೇ ಜಯ ದಾಖಲಿಸಿದ ಕರ್ನಾಟಕ ಬುಲ್ಡೋಜರ್ಸ್​​

    1973ರಲ್ಲಿ ಬೇಗಮ್​ ನುಸ್ರತ್​ ಅವರನ್ನು ವಿವಾಹವಾದ ಶೆಹಬಾಜ್​ ಅವರ ಮೊದಲ ಪತ್ನಿ ಮದುವೆಯಾದ ಕೆಲವು ವರ್ಷಗಳ ನಂತರ ನಿಧನರಾದರು. ದಂಪತಿಗೆ ಸಲ್ಮಾನ್, ಹಮ್ಜಾ, ಜವೇರಿಯಾ ಮತ್ತು ರಾಬಿಯಾ ಎಂಬ ಹೆಸರಿನ ನಾಲ್ಕು ಮಕ್ಕಳಿದ್ದಾರೆ. ಮೊದಲ ಪತ್ನಿಯ ನಿಧನದ ನಂತರ 1993ರಲ್ಲಿ ಖ್ಯಾತ ಮಾಡಲ್​ ಆಲಿಯಾ ಹನಿಯನ್ನು ವಿವಾಹವಾದ ಶೆಹಬಾಜ್​ ಕೆಲವು ತಿಂಗಳುಗಳ ನಂತರ ಬೇರ್ಪಟ್ಟಿದ್ದರು. ಇದಾದ ಕೆಲವೇ ತಿಂಗಳುಗಳ ನಂತರ ಆಕೆ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಳು ಎಂದು ವರದಿಯಾಗಿದೆ.

    ಎರಡನೇ ಪತ್ನಿ ನಿಧನರಾದ ಕೆಲವು ದಿನಗಳು ಕಳೆದ ಬಳಿಕ ನಿಲೋಫರ್ ಖೋಸಾರ ಮೂರನೇ ಮದುವೆ ಮಾಡಿಕೊಂಡ ಶೆಹಬಾಜ್​ ಹಲವರನ್ನು ಆಶ್ಚರ್ಯಚಕಿತಗೊಳಿಸಿದರು. ಇವರ ವಿವಾಹವಾದ ಕೆಲ ತಿಂಗಳುಗಳಲ್ಲೇ ಬೇರ್ಪಟ್ಟಿದ್ದು, 2003ರಲ್ಲಿ ಖ್ಯಾತ ಕಾದಂಬರಿಗಾರ್ತಿ ತೆಹ್ಮೀನಾ ದುರಾನಿ ಅವರನ್ನು ರಹಸ್ಯವಾಗಿ ವಿವಾಹವಾಗುವ ಮೂಲಕ ಶೆಹಬಾಜ್​ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

    2012ರಲ್ಲಿ ಕಲ್ಸೂಮ್ ಹೈ ಎಂಬ ಯುವತಿಯೊಂದಿಗೆ ಐದನೇ ವಿವಾಹ ಮಾಡಿಕೊಂಡ ಷರೀಫ್​ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಆದರೆ, ಕಲ್ಸೂಮ್​ ಹೈ ಈ ವಿಚಾರವನ್ನು ನಿರಾಕರಿಸಿದ್ದು, ನಾನು ಆ ವ್ಯಕ್ತಿಯನ್ನು ಮದುವೆಯಾಗಿಲ್ಲ ಎಂದು ಹೇಳಿದ್ದಾರೆ. ಶೆಹಬಾಜ್​ ಷರೀಫ್​ ಪ್ರಧಾನಿಯಾದ ಬಳಿಕ ಈ ಸುದ್ದಿ ಹರಿದಾಡಲು ಶುರು ಮಾಡಿದ್ದು ಈ ಬಗ್ಗೆ ಸ್ವತಃ ಪಾಕ್​ ಪ್ರಧಾನಿಯೇ ಸ್ಪಷ್ಟನೆ ನೀಡಬೇಕಿದೆ. ಶೆಹಬಾಜ್ ಷರೀಫ್​ ಆಡಳಿತಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿತ ಜೀನದ ಸುದ್ದಿಯಿಂದಲೇ ಜನರ ಗಮನ ಸೆಳೆಯುವ ಮೂಲಕ ಟ್ರೋಲ್​ ಆಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts