More

    ಲಾಕ್​ಡೌನ್​ನಲ್ಲಿ ಕೆಲಸ ಕಳಕೊಂಡವ ಗಾಂಜಾ ಮಾರಾಟಕ್ಕಿಳಿದ!

    ಬೆಂಗಳೂರು: ಡ್ರಗ್ಸ್​ ಮಾಫಿಯಾದ ಯಡೆಮುರಿ ಕಟ್ಟಲು ಸಜ್ಜಾಗಿರುವ ಪೊಲೀಸರು ಇಂಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ನಿತ್ಯ ಮೂರ್ನಾಲ್ಕು ಡ್ರಗ್ಸ್​ ಪೆಡ್ಲರ್​ಗಳು ಸಿಸಿಬಿ ಬಲೆಗೆ ಬೀಳುತ್ತಲೇ ಇದ್ದಾರೆ. ಇಷ್ಟಾದರೂ ಇಲ್ಲೊಬ್ಬ ಬ್ಯಾಗ್​ನಲ್ಲೇ ಗಾಂಜಾ ತುಂಬಿಕೊಂಡು ರಾಜ್ಯ ರಾಜಧಾನಿಯಲ್ಲಿ ಮಾರಾಟ ಮಾಡುತ್ತಿದ್ದ!

    ಹೌದು, ಅಮೀರ್ ಅಹ್ಮದ್ (28) ಎಂಬಾತ ಪೀಣ್ಯ 2ನೇ ಹಂತದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಈ ವೇಳೆ ಬೀಟ್ ಪೊಲೀಸರಿಗೆ ಗುರುವಾರ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಈತನಿಂದ ಬರೋಬ್ಬರಿ 20 ಕೆಜಿ ಗಾಂಜಾ ವಶ ಜಪ್ತಿ ಮಾಡಲಾಗಿದೆ.

    ಲಾಕ್​ಡೌನ್​ನಲ್ಲಿ ಕೆಲಸ ಕಳಕೊಂಡವ ಗಾಂಜಾ ಮಾರಾಟಕ್ಕಿಳಿದ!ಅಮೀರ್​ ಅಹ್ಮದ್​ ಪೊಲೀಸರಿಗೆ ಸಿಕ್ಕಿಬಿದ್ದ ವೇಳೆ ಆತನ ಕೈಯಲ್ಲಿದ್ದ ಬ್ಯಾಗ್​ನಲ್ಲಿ 1 ಕೆಜಿ ಗಾಂಜಾ ಇತ್ತು. ಬಳಿಕ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆತನ ಮನೆಯಲ್ಲಿ 19 ಕೆಜಿ ಗಾಂಜಾ ಪತ್ತೆಯಾಗಿದೆ. ಗಾಂಜಾ ಜತೆಗೆ 1 ಬೈಕ್ ಹಾಗೂ 30 ಸಾವಿರ ರೂ. ನಗದನ್ನು ರಾಜಗೋಪಾಲ ನಗರ ಪೊಲೀಸರು ಸೀಜ್ ಮಾಡಿದ್ದಾರೆ.

    ಆರೋಪಿ ಅಮೀರ್ ಅಹ್ಮದ್ ಲಾಕ್‌ಡೌನ್​ನಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ. ಈ ವೇಳೆ ವಿಶಾಖಪಟ್ಟಣಂ ವ್ಯಕ್ತಿಯ ಪರಿಚಯವಾಗಿ ಆತನ ಮೂಲಕ ಡ್ರಗ್ಸ್​ ದಂಧೆಗೆ ಇಳಿದಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅರ್ಚಕನಿಗೆ 14 ವರ್ಷ ಜೈಲು

    ಪತ್ನಿಯ ಗುಪ್ತಾಂಗಕ್ಕೆ ಬೆಂಕಿಯಿಟ್ಟು ವಿಕೃತಿ ಮೆರೆದ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts